About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಪ್ರಧಾನಿ ಹೊಗಳಿದ ಮುಲಾಯಂ ಸಿಂಗ್‍ಗೆ ಪೋಸ್ಟರ್ ಮುಖಾಂತರ ಧನ್ಯವಾದ

ಲಕ್ನೊ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾಗಿ ಪ್ರಧಾನ ಮಂತ್ರಿಯಾಗಲಿ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಸಂಸತ್ತಿನಲ್ಲಿ ಹೊಗಳಿದ ನಂತರ ಮುಲಾಯಂಸಿಂಗ್‍ಗೆ ಧನ್ಯವಾದ ಹೇಳುವ ಪೋಸ್ಟರ್ ಗಳು ಲಕ್ನೊ ನಗರದಲ್ಲಿ ರಾರಾಜಿಸುತ್ತಿದೆ.

ಮುಲಾಯಂ ಸಿಂಗ್ ಯಾದವ್ ಅವರೇ ಧನ್ಯವಾದಗಳು, ಇಂದು ನೀವು ದೇಶದ 125 ಕೋಟಿ ಭಾರತೀಯರ ಹಾರೈಕೆಯನ್ನು ಪುನರುಚ್ಛರಿಸಿದಿರಿ ಎಂದು ಹೇಳುವ ಪೋಸ್ಟರ್ ಗಳು ಲಕ್ನೊ ನಗರದಲ್ಲಿ ರಾರಾಜಿಸುತ್ತಿವೆ.

ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ನೋಡುವ ಆಸೆಯಿದೆ ಎಂದು ಬುಧವಾರ ಲೋಕಸಭೆಯಲ್ಲಿ ಮುಲಾಯಂ ಸಿಂಗ್ ಯಾದವ್  ಹೇಳುವ ಮೂಲಕ ವಿರೋಧ ಪಕ್ಷಗಳ ನಾಯಕರಿಗೆ ಅಚ್ಚರಿ ಮತ್ತು ಆಘಾತವನ್ನುಂಟು ಮಾಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close