ನಗರದಲ್ಲಿ 20 ದಿನ ವಿದ್ಯುತ್ ವ್ಯತ್ಯಯ

Posted In : ಬೆಂಗಳೂರು

ಬೆಂಗಳೂರು: ನಗರದ ಪ್ರಮುಖ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ದುರಸ್ತಿ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ ಇದೇ 12 ರಿಂದ 31 ರವರೆಗೆ ನಗರದ ಬಹು ತೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

66/11 ಕೆವಿ ವ್ಯಾಪ್ತಿಯಲ್ಲಿ ಬರುವ ಎಲ್.ಆರ್.ಬಂಡೆ, ಗೆದ್ದಲಹಳ್ಳಿ, ಬಾಣಸ ವಾಡಿ, ಎಚ್.ಬಿ.ಆರ್ ಲೇಔಟ್, ವಿದ್ಯಾನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಕಾರ್ಯ ನಡೆಯಲಿದ್ದು, 20 ದಿನಗಳು ನಗರದ ಬಹುತೇಕ ಪ್ರದೇಶ ಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಜನವಸತಿ ಹಾಗೂ ಕೈಗಾರಿಕಾ ಪ್ರದೇಶಗಳು ಸೇರಿದಂತೆ ಎಲ್ಲ ಹಂತದ ಗ್ರಾಹಕರಿಗೆ ತೊಂದರೆ ಉಂಟಾಗಲಿದ್ದು, ಈ ಕುರಿತು ಪ್ರಕಟಣೆ ನೀಡಿರುವ ಬೆಸ್ಕಾಂ ವಿದ್ಯುತ್ ಮಾರ್ಗದ ದುರಸ್ತಿಯ ಕುರಿತು ವಿವರಗಳನ್ನು ನೀಡಿದೆ. ಎಚ್.ಬಿ.ಆರ್ 3ನೇ ಬ್ಲಾಕ್, ಟೀಚರ್ಸ್ ಕಾಲೊನಿ, ಆಯಿಲ್ ಮಿಲ್ ರಸ್ತೆ, ಕಾಚರಕನ ಹಳ್ಳಿ, ಅರವಿಂದ ನಗರ, ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಕೆಲವು ಪ್ರದೇಶಗಳು, ಜಲ ವಾಯು ವಿಹಾರ, ಎಚ್.ಆರ್.ಬಿ.ಆರ್ ಲೇಔಟ್ ನ ಎರಡು ಹಾಗೂ ಮೂರನೇ ಬ್ಲಾಕ್, ಬಿಟಿಎಸ್ ಡಿಪೋ ಹಿಂಭಾಗ, ರಾಮಯ್ಯ ಲೇಔಟ್, ನಾಗದೇವಿ ಇಂಡಸ್ಟ್ರೀಸ್, ಬಾಣಸವಾಡಿ ರೈಲ್ವೆ ನಿಲ್ದಾಣ, ಡಾನ್ ಬಾಸ್ಕೊ ಚರ್ಚ್ ಹೆಣ್ಣೂರು ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಎಚ್.ಕೆ.ಬಿ.ಕೆ ಕಾಲೇಜು, ಕೆ.ಜಿ.ಹಳ್ಳಿ, ನಾಗವಾರ ಮುಖ್ಯರಸ್ತೆ, ಭೈರನಕುಂಟೆ, ರಷದ್ ನಗರ, ಥಣಿಸಂಧ್ರ, ಕೆ.ನಾರಾಯಣಪುರ, ಆಶಾ ಟೌನ್ ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್ ಶಿಪ್, ದೊಡ್ಡ ಗುಬ್ಬಿಕ್ರಾಸ್, ಜಾನಕಿರಾಮ್ ಲೇಔಟ್, ಚಾಣಕ್ಯ ಲೇಔಟ್, ಭೈರತಿ ಕ್ರಾಸ್, ಶ್ರೀರಾಂಪುರ ವಿಲೇಜ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಮಿಲಿಟರಿ ಏರಿಯಾ, ಆರ್.ಎಸ್.ಪಾಳ್ಯ, ಕಮ್ಮನಹಳ್ಳಿ ಮುಖ್ಯರಸ್ತೆ, ಲಿಂಗರಾಜಪುರ, ಹೊರಮಾವು, ಕಸ್ತೂರಿ ನಗರ, ವಿಜಯ ಬ್ಯಾಂಕ್ ಕಾಲೊನಿ ಸುತ್ತಮುತ್ತಲದ ಪ್ರದೇಶ ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Leave a Reply

Your email address will not be published. Required fields are marked *

five × five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top