About Us Advertise with us Be a Reporter E-Paper

ಗೆಜೆಟಿಯರ್

ಅಂತರಿಕ್ಷದಲ್ಲೂ ವಿದ್ಯುತ್ ಉತ್ಪಾದನೆ !

ಎಲ್.ಪಿ.ಕುಲಕರ್ಣಿ

ನಾವು ಭೂಮಿಯ ಮೇಲೆ ಕಲ್ಲಿದ್ದಲನ್ನು ಉರಿಸುವುದರಿಂದ ಅಲ್ಲದೇ ಪರಮಾಣು ಶಕ್ತಿಯಿಂದ, ಜಲಶಕ್ತಿಯಿಂದ…..ಹೀಗೆ ಹಲವು ಶಕ್ತಿಯ ಆಕರಗಳಿಂದ ವಿದ್ಯುತ್ತನ್ನು ಉತ್ಪಾದಿಸುತ್ತಿದ್ದೇವೆ. ಆದರೆ ಅಂತರಿಕ್ಷದಲ್ಲಿ ವಿದ್ಯುತ್ ಉತ್ಪಾದನೆ ಎಂದರೆ! ತಮಾಷೆ ಎಂದು ತಿಳಿಯಬೇಡಿ. ಖಂಡಿತಾ…! ಅಂತರಿಕ್ಷದಲ್ಲೂ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ. ಈ ದೆಸೆಯಲ್ಲಿ ಜಪಾನ್ ಈಗಾಗಲೇ ಅಡಿಯಿಟ್ಟಾಗಿದೆ. ಈ ಭೂಮಿಯ ವಾತಾವರಣವನ್ನು ದಾಟಿ ಮೇಲಕ್ಕೆ ಹೋದಂತೆ, ಅಲ್ಲಿ ಸೂರ್ಯನ ಶಾಖ ಮತ್ತಷ್ಟು ತೀಕ್ಷ್ಣವಾಗುತ್ತಾ ಸಾಗುತ್ತದೆ. ಭೂಮಿಗೆ ಬೀಳುವ ಸೌರ ರಶ್ಮಿಗಿಂತಲೂ ಅಲ್ಲಿ ಇವುಗಳ ಪ್ರಖರತೆ ಎಂದು ಖಗೋಳ ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾಗಿ ಅಂತರಿಕ್ಷದಲ್ಲಿನ ಸೂರ್ಯನ ಶಕ್ತಿಯನ್ನು ಭೂಮಿಗೆ ತರಲು ಸಾಧ್ಯವಾದರೆ ಇಂದಿನ ವಿದ್ಯುತ್ ಅಗತ್ಯವನ್ನು ಸಮರ್ಪಕವಾಗಿ ನಿಭಾಯಿಸಿ ಸರಿದೂಗಿಸಬಹುದಾಗಿದೆ. ಅಂತೆಯೆ ಇದರಿಂದ ಪರಿಸರ ಮಾಲಿನ್ಯವನ್ನೂ ತಡೆಗಟ್ಟಲು ಸಾಧ್ಯ ಎನ್ನುತ್ತಾರೆ ತಜ್ಞರು.

ಜಪಾನಿಗರು ಈಗಾಗಲೇ ಇದರ ಕುರಿತು ಒಂದು ಸಮಗ್ರ ಅಧ್ಯಯನ ಕೈಗೊಂಡು ಮುಂದೆ ಸಾಗಿದ್ದಾರೆ. ಅಂತರಿಕ್ಷದಲ್ಲಿ ಒಂದು ಖ್ಚಛಿ ಖಟ್ಝ್ಟ ಟಡಿಛ್ಟಿ ಖಠಿಛಿಞ ನ್ನು ಸ್ಥಾಪಿಸಲು ಯೋಜಿಸಿದ್ದಾರೆ. ಈ ಪ್ರಾಜೆಕ್‌ಟ್ನ ಒಂದು ಭಾಗವಾಗಿ ಭೂ ದಾಟಿದ ಬಳಿಕ, ಭೂ ಸ್ಥಿರ ಕಕ್ಷೆಯಲ್ಲಿ ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಹಲವಾರು ಚದರ ಮೈಲುಗಳ ವಿಸ್ತೀರ್ಣದಲ್ಲಿ ಟಠಿಟಟ್ಝಠಿಜ್ಚಿ ಜಿ ಗಳನ್ನು ಸ್ಥಾಪಿಸಲು ಸನ್ನದ್ಧರಾಗಿದ್ದಾರೆ. ಆ ಕಕ್ಷೆಯಲ್ಲಿ ಸುತ್ತುತ್ತಿರುವ ಭೂ ಸ್ಥಿರ ಉಪಗ್ರಹಗಳಂತೆಯೇ ಈ ಡಿಷ್‌ಗಳೂ ಕೂಡ ಭೂಮಿಯನ್ನು ಸುತ್ತುತ್ತವೆ. ಭೂಮಿಯ ಮೇಲಿಂದ ನಾವು ಇವುಗಳನ್ನು ನೋಡಿದಾಗ ಸ್ಥಿರವಾಗಿರುವಂತೆ ಭಾಸವಾಗುತ್ತವೆ.

ಅಂತರಿಕ್ಷದಲ್ಲಿ ಭೂಮಿಯ ಸುತ್ತ ತಿರುಗುವ ಈ ಫೋಟೋ ವೋಲ್ಟಾಯಿಕ್ ಡಿಷ್ ಗಳು ಸೂರ್ಯನಿಂದ ಬರುವ ಅಗಾಧ ಶಕ್ತಿಯನ್ನು ಹೀರಿಕೊಂಡು ಲೇಸರ್ ಕಿರಣಗಳ ( ಔಛ್ಟಿ ್ಟ ) ಮೂಲಕವಾಗಿ ಇಲ್ಲವೇ ಸೂಕ್ಷ್ಮ ತರಂಗಗಳ ರೂಪದಲ್ಲಾಗಲಿ ಭೂಮಿಗೆ ರವಾನಿಸುತ್ತವೆ. ಭೂಮಿಯ ನಿರ್ಧಿಷ್ಟ ಪ್ರದೇಶ ತಲುಪಿದ ಈ ಕಿರಣಗಳು ಅಥವಾ ತರಂಗಗಳಿಂದ ಬೃಹತ್ ಪ್ರಮಾಣದಲ್ಲಿ ವಿದ್ಯುತ್‌ನ್ನು ಉತ್ಪಾದಿಸಲು ಸಹಾಯಕವಾಗುತ್ತದೆ ಎಂದು ಜಪಾನ್ ವಿಜ್ಞಾನಿಗಳು ವಿವರಿಸುತ್ತಾರೆ. ಒಂದು ವೇಳೆ ಜಪಾನಿಗರ ಈ ಪ್ರಾಜೆಕ್‌ಟ್ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾದರೆ ಮುಂದಿನ ದಿನಮಾನಗಳಲ್ಲಿ ನಮಗೆ ವಿದ್ಯುತ್ತಿನ ಅಭಾವ ನೀಗಿದಂತಾಗುತ್ತದೆ.

ಹೊಸ ನಕ್ಷತ್ರಗಳ ಉಗಮ ಸೆರೆಹಿಡಿದ ಹಬಲ್ ಟೆಲೆಸ್ಕೋಪ್

ನಕ್ಷತ್ರಗಳನ್ನು, ಗೆಲಾಕ್ಸಿಗಳನ್ನು ವೀಕ್ಷಿಸಲು, ಅವುಗಳ ಕುರಿತು ಅಧ್ಯಯನ ಕೈಗೊಳ್ಳಲು ಹಬಲ್ ಟೆಲೆಸ್ಕೋಪ್‌ನ್ನು 1990ರಲ್ಲಿ ಅಂತರಿಕ್ಷಕ್ಕೆ ಹಾರಿಬಿಡಲಾಗಿದೆ. ಈ ಟೆಲೆಸ್ಕೋಪಿನ ದೃಷ್ಟಿ ಬ್ರಹ್ಮಾಂಡದಾಚೆಗೂ ದಾಟಿದೆ. ಕ್ಷಣಕ್ಷಣಕ್ಕೂ ಹೊಸ ಹೊಸ ಆಕಾಶಕಾಯಗಳ ಉಗಮ, ನಶಿಸುವಿಕೆ ಮುಂತಾದ ಮಹತ್ವದ ಮಾಹಿತಿಗಳನ್ನು ಈ ಹಬಲ್ ಟೆಲೆಸ್ಕೋಪ್ ಚಾಚೂ ತಪ್ಪದೇ ಕಳೆದ 28 ವರ್ಷಗಳಿಂದಲೂ ಭೂಮಿಗೆ ಕಳಿಸುತ್ತಿದೆ ಎಂದು ನಾಸಾ ಈಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತದೆ.

ನಕ್ಷತ್ರಗಳ ಹುಟ್ಟು,ಸಾವುಗಳ ಕುರಿತಾದ ಖಗೋಳ ಶಾಸ್ತ್ರಜ್ಞರ ಅಧ್ಯಯನ ಎಲ್ಲರಲ್ಲಿಯೂ ಕುತೂಹಲ ಮಾಡುತ್ತದೆ. ಈ ನಮ್ಮ ಭೂಮಿಯಿಂದ ಹಲವಾರು ಜ್ಯೋತಿವರ್ಷಗಳಷ್ಟು ದೂರದಲ್ಲಿರುವ ಬ್ರಹ್ಮಾಂಡದಲ್ಲಿ ಅಂದಾಜು 15 ಸಾವಿರ ಗೆಲಾಕ್ಸಿಗಳಿವೆ.ಒಂದು ಅಂದಾಜು ಸರಾಸರಿಯಂತೆ 12 ಸಾವಿರ ಗೆಲಾಕ್ಸಿಗಳಲ್ಲಿ ನಕ್ಷತ್ರಗಳು ಉಗಮಗೊಳ್ಳುತ್ತಿವೆ ಎಂಬುದಾಗಿ ಇತ್ತೀಚೆಗೆ ವಿಜ್ಞಾನಿಗಳು ಹಬಲ್ ಟೆಲೆಸ್ಕೋಪ್ ಬಳಸಿ, ಚಿತ್ರಗಳನ್ನು ಸೆರೆಹಿಡಿದು ವಿಶ್ಲೇಷಿಸಿದ್ದಾರೆ.

ಈ ನಕ್ಷತ್ರಗಳು ರೂಪಗೊಳ್ಳುವ ಸಮಯದಲ್ಲಿ ನೆರಳಾತೀತ ಕಿರಣಗಳ ರೂಪದಲ್ಲಿ ಬೆಳಕು ಹೊರಬರುತ್ತದೆ. ಈ ಬ್ರಹ್ಮಾಂಡ ರೂಪಗೊಳ್ಳುವಾಗ ಬೆಳಕು ಅವೆಗೆಂಪು ತರಂಗಾಂತರಗಳಿಗೆ ಮಾರ್ಪಾಡು ಹೊಂದುತ್ತದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ. ಪ್ರಕ್ರಿಯೆ ನಡೆದು 3 ಶತಕೋಟಿ ವರ್ಷಗಳ ತರುವಾಯದಲ್ಲಿ ನಕ್ಷತ್ರಗಳು ರೂಪಗೊಳ್ಳುವ ಪ್ರಕ್ರಿಯೆ ಆರಂಭವಾಯಿತು ಎಂದು ವಿವರಣೆಯಲ್ಲಿದೆ. ಈಗ ಹೊಸದಾಗಿ 12 ಸಾವಿರ ಗೆಲಾಕ್ಸಿಗಳಲ್ಲಿ ಉಗಮಿಸುತ್ತಿರುವ ಈ ನಕ್ಷತ್ರಗಳ ಆಯಸ್ಸು 11 ಶತಕೋಟಿ ವರ್ಷ ಗಳಾಗಲಿವೆ. ಎಂಬು ದಾಗಿ ಚಿತ್ರಗಳ ಸಮೇತವಾಗಿ ಹಬಲ್ ಮಾಹಿತಿ ಒದಗಿಸುತ್ತಿದೆ. ಈ ಕುರಿತು ಖಗೋಳ ವಿಜ್ಞಾನಿ ಗ್ಲೇನ್ ಹೀಗೆ ಹೇಳುತ್ತಾರೆ ‘ಅವೆಕೆಂಪು ಕಿರಣಗಳ ವಿಶಾಲ ತರಂಗಗಳಿಂದ ಮಾತ್ರ ಬಹುದೂರದಲ್ಲಿರುವ ಗೆಲಾಕ್ಸಿಗಳನ್ನು ವೀಕ್ಷಿಸಿ ಅಧ್ಯಯನ ಕೈಗೊಳ್ಳಲು ಈ ನಕ್ಷತ್ರಗಳ ಉಗಮದ ಚಿತ್ರಗಳನ್ನು ಸಮೀಪದ ಮತ್ತು ದೂರದ ಬ್ರಹ್ಮಾಂಡಗಳಿಗೆ ಹೋಲಿಸಿದಾಗ, ನಮಗೆ ಸಮೀಪದ ಗೆಲಕ್ಸಿಯಲ್ಲಿ ನಕ್ಷತ್ರಗಳ ಗುಂಪುಗಳ ನಿಖರವಾದ ರಚನೆಯನ್ನು ತಿಳಿದುಕೊಳ್ಳಬಹುದಾಗಿದೆ.’ ಏನೇ ಆಗಲಿ ನಭೋ ಮಂಡಲದಲ್ಲಿ ನಡೆಯುವ ಈ ಚಿತ್ರ ವಿಚಿತ್ರ ಘಟನೆಗಳು ನಮ್ಮಲ್ಲಿ ಕುತೂಹಲ ಹೆಚ್ಚಿಸುವುದಲ್ಲದೇ ವಿಶೇಷ ಜ್ಞಾನವನ್ನು ಒದಗಿಸಿಕೊಡುತ್ತವೆ!

Tags

Related Articles

Leave a Reply

Your email address will not be published. Required fields are marked *

Language
Close