ವಿಶ್ವವಾಣಿ

ಮೋದಿ ಜತೆ ನೇಪಾಳದ ಮಾಜಿ ಪ್ರಧಾನ ದಹಲ್‌ ಚರ್ಚೆ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ  ಮಾಜಿ ಪ್ರಧಾನ ಮಂತ್ರಿ ಪುಷ್ಪಾ ಕಮಲ್‌ ದಹಲ್‌ ಅವರು  ಭಾರತ ಮತ್ತು ನೇಪಾಳದ ಪ್ರಗತಿಪರ ವಿಷಯಗಳ ಕುರಿತು ಶನಿವಾರ ಚರ್ಚೆ ನಡೆಸಿದರು.

ನೇಪಾಳ ಹಾಗೂ ಭಾರತದ ಸಂಬಂಧವನ್ನು ಬಲ ಪಡಿಸುವಲ್ಲಿ ದಹಲ್‌‌ ಅವರ ಕೊಡುಗೆಗೆ ಮುಖ್ಯವಾಗಿದೆ ಎಂದು ಮೋದಿ ಧನ್ಯವಾದ ಸಲ್ಲಿಸಿದರು. ಅಲ್ಲದೇ ಈ ವರ್ಷ ನೇಪಾಳಕ್ಕೆ ಎರಡು ಬಾರಿ ಭೇಟಿ ನೀಡಿದಾಗ ಇಂಡೋ- ನೇಪಾಳ ಸಂಬಂಧ ಇನ್ನಷ್ಟು ಉನ್ನತ ಮಟ್ಟಕ್ಕೇರಿದೆ ಎಂದು  ಹೇಳಿದರು.