About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕಾಂಗ್ರೆಸ್ಸಿಗರಿಗೆ ಮಾನ ಮರ್ಯಾದೆ ಇಲ್ಲವೇ?: ಪ್ರಹ್ಲಾದ ಜೋಶಿ ಟೀಕೆ

ಹುಬ್ಬಳ್ಳಿ: ಅಟಲ್ ಬಿಹಾರಿ ವಾಜಪೇಯಿ ಅಸ್ಥಿ ಹಿಡಿದುಕೊಂಡು ನಾವು ಮತ ಕೇಳುತ್ತಿಲ್ಲ. ಬಿಜೆಪಿ ವಿರುದ್ಧ ಮಾತನಾಡಲು ಕಾಂಗ್ರೆಸ್ಸಿಗರಿಗೆ ನಾಚಿಕೆ ಬರುವುದಿಲ್ಲವೇ? ಕಾಂಗ್ರೆಸ್ಸಿಗರಿಗೆ ಮಾನ ಮರ್ಯಾದೆ ಇಲ್ಲವೇ?. ಇಂದಿರಾ ಗಾಂಧಿ ತೀರಿಕೊಂಡಾಗ ಅವರ ಮಗ ರಾಜೀವ ಗಾಂಧಿ ಅಸ್ಥಿಯನ್ನು ಮುಂದಿಟ್ಟುಕೊಂಡು ಮತ ಕೇಳಿರಲಿಲ್ಲವೇ? ನಾವೇಲ್ಲಿ ಮತ ಕೇಳಿದ್ದೇವೆ. ಆರೋಪ ಮಾಡುವುದಕ್ಕೂ ಒಂದು ಮಿತಿಯಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ವಾಜಪೇಯಿ ಅಸ್ಥಿಯನ್ನು ಮುಂದಿಟ್ಟುಕೊಂಡು ನಾವೆಲ್ಲೂ ಮತ ಕೇಳಿಲ್ಲ. ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ. ಹಿಂದೂ ವಿರೋಧಿ ಹೇಳಿಕೆ ನೀಡುವುದೇ ಕೆಲಸ. ನಿರುದ್ಯೋಗ ಸಮಸ್ಯೆಯಿಂದಾಗಿ ಯುವಕರು ಉಗ್ರವಾದಿ ಸಂಘಟನೆ ಸೇರುತ್ತಿದ್ದಾರೆಂಬ ಹುಚ್ಚುಚ್ಚು ಹೇಳಿಕೆ ನೀಡಿದ್ದಾರೆ.

ರಾಹುಲ್ ಗಾಂಧಿಗೆ ಮೆದುಳಿಲ್ಲ. ಪೆದ್ದು ಪೆದ್ದಾಗಿ ಮಾತನಾಡುತ್ತಾರೆ. ನಮ್ಮ ವಿರೋಧಿ ದೇಶಗಳು ಬಯಸುವ ಹೇಳಿಕೆಯನ್ನು ಕಾಂಗ್ರೆಸ್ ನೀಡುತ್ತಿದ್ದೆ. ತನ್ಮೂಲಕ ಭಾರತ ವಿರೋಧಿ ದೇಶವನ್ನು ಬೆಂಬಲಿಸಲಾಗುತ್ತಿದೆ. ರಾಹುಲ್‌ಗಾಂಧಿ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಿದ್ದರೆ, ಅವರನ್ನು ಅನುಸರಿಸುತ್ತಿರುವ ದಿನೇಶ ಗುಂಡೂರಾವ್ ಸಹ ಇದೇ ರೀತಿಯ ಹುಚ್ಚು ಹೇಳಿಕೆ ನೀಡುತ್ತಿದ್ದಾರೆಂದು ಹರಿಹಾಯ್ದರು.

Tags

Related Articles

Leave a Reply

Your email address will not be published. Required fields are marked *

Language
Close