About Us Advertise with us Be a Reporter E-Paper

ಗುರು

ಮೆಚ್ಚುಗೆ ಎಂಬುದು ನಿಸ್ವಾರ್ಥ ಕ್ರಿಯೆ

ಶ್ರೀನಿವಾಸ ಅರ್ಕ

ಮೆಚ್ಚುಗೆ ಎಂಬುದು ಸಹಜವಾದದ್ದು. ಇದು ವಿಶ್ವಾಸ ಪೂರ್ವಕವಾಗಿ, ನಿಷ್ಕಪಟದಿಂದ ಹೊರಬರುವ ಮನಸ್ಸಿನ ಭಾವನೆಗಳು.  ಭಾವನೆಗಳು ಯಾವುದೇ ಕೃತ್ರಿಮ ಅಲಂಕಾರವಿಲ್ಲದೆ ಹೊರ ಹೊಮ್ಮುತ್ತವೆ. ಗುಣಪೂರಕವಾದ ಮಾತುಗಳು ನೇರವಾಗಿ  ಹೃದಯದಿಂದ ಹೊರಬರುತ್ತವೆ. ಇಂತಹ ಹೃದಯದಿಂದ ಮೂಡಿಬರುವ ನಿಷ್ಕಲ್ಮಷವಾದ ಮೆಚ್ಚುಗೆ ಮಾತುಗಳು ಮಧ್ಯೆ ಮನಸ್ಸಿಗೆ ಏನೂ ಕೆಲಸವಿರುವುದಿಲ್ಲ. ಇನ್ನೊಬ್ಬರ ಸಾಧನೆಗಳ ಬಗ್ಗೆ. ಸೌಂದರ್ಯದ ಬಗ್ಗೆ, ಗುಣದ ಬಗ್ಗೆ, ಒಳ್ಳೆಯತನದ ಬಗ್ಗೆ ಮೆಚ್ಚುಗೆ ನುಡಿಗಳನ್ನು ಅಡಬಹುದು.

ಅದೇ ಹೊಗಳಿಕೆಯ ಮಾತು ಬಂದಾಗ, ನೀವು, ನಿಮ್ಮನ್ನೂ ಮತ್ತೊ ಬ್ಬರನ್ನೂ ಮೋಸ ಮಾಡುತ್ತಿರುತ್ತೀರಿ. ಇನ್ನೊಬ್ಬರ ವಿಶ್ವಾಸ ಮಾಡುತ್ತಿರುತ್ತೀರಿ. ಇನ್ನೊಬ್ಬರ ವಿಶ್ವಾಸ ಗಳಿಸಲು  ಈ ಮಾನಸಿಕ ತಂತ್ರವನ್ನು ಅಳವಡಿಸಿಕೊಂಡಿರುತ್ತೀರಿ. ಇದು ಸಂಚು ನಡೆಸಿದಂತೆ, ನಾಟಕವಾಡಿದಂತೆ, ಹೊಗಳುವಾಗ ನೀವು ಹೃದಯವನ್ನು ಉಪಯೋಗಿಸದೆ ಮನಸ್ಸನ್ನು ಉಪ ಯೋಗಿಸುತ್ತಿರುತ್ತೀರಿ. ಏತಕ್ಕೆ ಎಂದರೆ ಇದು ತೋರಿಕೆಯ ಮಾರ್ಗ ವಾಗಿರುತ್ತದೆ. ಮತ್ತೊಬ್ಬರ ಮೇಲೆ ಪ್ರಭಾವ ಬೀರಿ ನಿಮ್ಮ ಕೆಲಸ  ಮಾಡಿಸಿ ಕೊಳ್ಳಲು ನೀವು ಹೊಗಳಿಕೆ ಎಂಬ ಸಾಧನವನ್ನು ಉಪಯೋಗಿಸಿರುತ್ತೀರಿ. ಇದು ನಿಮ್ಮ ಗುರಿ ಸಾಧಿಸಲು ಅನುಸರಿಸಿದ ಅಪ್ರಾಮಾಣಿಕವಾದ ಮಾರ್ಗ. ಹೊಗಳುವಾಗ ನಿಮ್ಮ ಗಮನ ಸಾಮಾಜಿಕ ಉಪಯೋಗಗಳ ಕಡೆ, ಭೌತಿಕ ವಸ್ತುಗಳನ್ನು  ಕಡೆ ಇರುತ್ತದೆ. ಇದರಿಂದ ನಿಮ್ಮ ಪ್ರಜ್ಞೆ ವಿಕಾಸವಾಗುವುದಕ್ಕೆ ಅವಕಾಶವಿರುವುದಿಲ್ಲ.

ಮೆಚ್ಚುಗೆಯ ದಾರಿಯಲ್ಲಿ ಪ್ರಜ್ಞೆಯ ವಿಕಾಸಕ್ಕೆ ಹಾಗೂ ಪ್ರಗತಿಗೆ ಅವಕಾಶವಿರುತ್ತದೆ. ಮತ್ತೊಬ್ಬರನ್ನು ಮೆಚ್ಚುವುದು ಅಷ್ಟು ಸುಲಭವಲ್ಲ. ಮತ್ತೊಬ್ಬರಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸುವುದಕ್ಕೆ ನಿಮ್ಮಲ್ಲಿ ಶಕ್ತಿಯಿರಬೇಕು. ನೀವು ಮತ್ತೊಬ್ಬರನ್ನು ಮೆಚ್ಚಿದಾಗ, ಆ ವ್ಯಕ್ತಿಯಲ್ಲಿ ಸ್ಪೂರ್ತಿ ಮೂಡಲು ಕಾರಣರಾಗುತ್ತೀರಿ. ಮೆಚ್ಚುಗೆಯಿಂದ ನುಡಿದ ಮಾತುಗಳು ನಿಜವಾಗಿರುತ್ತವೆ. ಕಾರಣ, ಅವು ಸಹಜವಾದ ಭಾವನೆಗಳ ಅಭಿವ್ಯಕ್ತಿಯಾಗಿರುತ್ತವೆ. ನಿಮ್ಮ ಹೃದಯದಿಂದ ಪ್ರೇರಿತರಾಗಿ ನಿಮ್ಮದೇ ಶೈಲಿಯಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೀರಿ. ನಿಮ್ಮ  ಸರಳವಾಗಿರುತ್ತದೆ. ವಿನಯದಿಂದ ಕೂಡಿರುತ್ತದೆ. ನಿಮಗೆ ಈ ಮೆಚ್ಚುಗೆ ಯನ್ನು ಅಭಿವ್ಯಕ್ತ ಪಡಿಸಿ ಯಾವುದೇ ಲಾಭ ಸಂಪಾದಿಸಬೇಕಿಲ್ಲ. ಮತ್ತೊಬ್ಬ ರಲ್ಲಿ ಒಳಿತನ್ನು ಕಂಡು ನಿಮಗೆ ಅದನ್ನು ಮೆಚ್ಚಬೇಕು ಎನಿಸಿರುತ್ತದೆ. ಆ ಮತ್ತೊಬ್ಬ ನಿಮ್ಮ ಮೆಚ್ಚುಗೆಯನ್ನು ಸ್ವೀಕರಿಸಲು ಸಿದ್ದವಾಗಿದ್ದಾನೆಯೆ ಇಲ್ಲವೆ ಎಂದೂ ನೀವು ಅಲೋಚಿಸಿರುವುದಿಲ್ಲ. ಹಾಗಾಗಿ ನಿಮ್ಮ ಮೆಚ್ಚುಗೆ ಸಹಜ ವಾದ ಧಾರೆಯಾಗಿ ಹರಿದಿರುತ್ತದೆ.

ಮೆಚ್ಚುಗೆ ಎಂಬುದು ನಿಸ್ವಾರ್ಥ ಕ್ರಿಯೆ. ನಿಜವಾದ ಉತ್ಸಾಹದಿಂದ ಅರ್ಪಿಸಿದ ಕ್ರಿಯೆ. ಇದು ಮಾನವೀಯತೆಗೆ ನೀವು ಸಲ್ಲಿಸುವ  ಮೆಚ್ಚುಗೆಯನ್ನು ಪಡೆದವರು ಅದೆಷ್ಟು ಆನಂದವನ್ನು, ಉತ್ಸಾಹವನ್ನು ಹೊಂದುತ್ತಾರೆ ಎಂಬುದನ್ನು ಊಹಿಸಲು   ಸಾಧ್ಯವಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close