ಹೆಚ್‌ಡಿಕೆ ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತಿದ್ದಾರೆ: ಪ್ರಕಾಶ್ ಜಾವಡೇಕರ್

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ಬಿಜೆಪಿ ಪಕ್ಷ ಜೆಡಿಎಸ್ ಶಾಸಕರಿಗೆ 100 ಕೋಟಿ ರು. ಆಮಿಷವೊಡ್ಡಿ ಸೆಳೆಯುವ ತಂತ್ರ ಮಾಡುತ್ತಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಪ್ರಕಾಶ್ ಜಾವಡೇಕರ್ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಕುದುರೆ ವ್ಯಾಪಾರ ಮಾಡುವ ಹವ್ಯಾಸವಿಟ್ಟುಕೊಂಡಿದ್ದಾರೆ. ಅದಕ್ಕೆ ಅವರು ಈ ರೀತಿ ಆಪಾದನೆ ಮಾಡುತ್ತಿದ್ದಾರೆ. ನಮಗೆ ರಚಿಸುವ ವಿಶ್ವಾಸವಿದೆ ಎಂದು ಹೇಳಿದರು.

ಜೆಡಿಎಸ್ ಹಾಗೂ ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡು ಸರಕಾರ ರಚನೆಗೆ ಕುತಂತ್ರ ಹೆಣೆದಿದ್ದಾರೆ. ಆದರೆ, ಇದು ಅಸಾಧ್ಯದ ಕೆಲಸ. ಆದರೂ ಈ ವಿಚಾರವಾಗಿ ನ್ಯಾಯಾಲಕ್ಕೆ ಹೋಗುತ್ತೇವೆ ಎನ್ನುವವರು ಹೋಗಲಿ. ಕೋರ್ಟ್‌ನಲ್ಲಿಯೂ ಅವರಿಗೆ ಮುಖಭಂಗವಾಗುವುದು ನಿಶ್ಚಿತ ಎಂದು ಹೇಳಿದರು.

Leave a Reply

Your email address will not be published. Required fields are marked *

2 × 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top