ಸಮುದ್ರವಾಗಿ ಅಬ್ಬರಿಸಬೇಡ, ನದಿಯಂತೆ ಉಪಯೋಗಿ ಆಗು

Posted In : ಅಂಕಣಗಳು, ಪ್ರಾಣೇಶ್ ಪ್ರಪಂಚ್

ಈಗ ಎಲ್ಲೆಲ್ಲೂ ಬುದ್ಧಿವಂತರು, ಬುದ್ಧಿಜೀವಿಗಳು, ವಿಚಾರವಾದಿಗಳು ಎಂದು ತಾವೇ ಭಾವಿಸಿದವರು, ಸರಕಾರ ಅದರಲ್ಲೂ ಸಿದ್ದರಾಮರ ಸರಕಾರದವರು ತಿಳಿದಿರುವವರು, ಬರೀ ಬ್ರಾಹ್ಮಣರನ್ನೆ ಬೈದು, ಅವರ ಆಚರಣೆಗಳನ್ನೆ ಅಪಹಾಸ್ಯ ಮಾಡುತ್ತಾ ತಾವಿನ್ನು ಬದುಕಿದ್ದೇವೆ ಎಂಬುದನ್ನು ಜನ ಮರೆಯಬಾರದು ಎಂದು ಏನೇನೋ ಹೇಳಿಕೆ ಕೊಟ್ಟು ಪ್ರಸಿದ್ಧರಾಗುತ್ತಿರುವವರನ್ನು ನಿತ್ಯ ಟಿವಿ, ಪತ್ರಿಕೆಗಳಲ್ಲಿ ನೋಡಿ, ಓದಿ ಸಹಿಸಿದ್ದೇನೆ, ನಕ್ಕಿದ್ದೇನೆ, ಅವರ ಬೌದ್ಧಿಕ ದಾರಿದ್ರ್ಯಕ್ಕೆ ಮರುಗಿದ್ದೇನೆ. ಬ್ರಾಹ್ಮಣ ಎಂಬುದೊಂದು ಜಾತಿ ಎಂದು ತಿಳಿದ ಅವರ ಅಜ್ಞಾನಕ್ಕೆ ಕನಿಕರ ಪಟ್ಟಿದ್ದೇನೆ.

ಬಾಲ್ಯದಿಂದಲೂ, ಬಹುತೇಕ ಬ್ರಾಹ್ಮಣರ ಮನೆಗಳಲ್ಲಿ ಅವರ ಪಾಡಿಗೆ ಅವರಿರುವುದನ್ನು, ಶಿಸ್ತು, ಸ್ವಚ್ಛತೆಗಳನ್ನು, ಸ್ನಾನ, ಸಂಧ್ಯಾವಂದನೆ, ದೇವರ ಪೂಜೆ ಮಾಡುವುದನ್ನು ಕೈಲಾದಷ್ಟು ತನು,ಮನ, ಧನಗಳ ಸಹಾಯವನ್ನು ಇತರರಿಗೆ ಮಾಡಿಕೊಡುವುದನ್ನು, ಮಕ್ಕಳಿಗೆ ಹೇಳಿಕೊಟ್ಟು ಬೆಳೆಸುತ್ತಾರಾಗಲಿ, ‘ಹಕ್ಕು ಸ್ಥಾಪಿಸು, ಹೋರಾಟಕ್ಕೆ ಇಳಿ, ಒದ್ದು ಬಾ, ಕದ್ದು ತಾ, ಬೈದು ಬಾ’ ಎಂದು ಹೇಳಿಕೊಡುವುದಿಲ್ಲ. ‘ಚೆಂದ ಓದು, ನಾಲ್ಕು ಮಂದಿಗೆ ಬೇಕಾದವನಾಗು, ನಿನ್ನ ಕಾಲ ಮೇಲೆ ನೀನು ನಿಲ್ಲು, ನಿಂದು ಅಂತ ಒಬ್ಬ ಹೆಂಡತಿ, ಒಂದು ಮನಿ’ ಇಷ್ಟೆ ಸರಳ ಸೂತ್ರದ ಬದುಕು ಕಟ್ಟಿಕೊಳ್ಳಲು ಉಪದೇಶಿಸುತ್ತಾರಾಗಲಿ ಬೇರೆ ಹುಂಬತನದ ಉದ್ದೇಶಗಳಲ್ಲಿ ಶಕ್ತಿ ವ್ಯಯ ಮಾಡುವುದನ್ನು ಕಲಿಸುವುದಿಲ್ಲ. ಸಿಖ್ ಸಮುದಾಯದಲ್ಲಿ ಹೇಗೆ ಭಿಕ್ಷುಕರಿಲ್ಲವೋ ಹಾಗೆ ಬ್ರಾಹ್ಮಣ ಸಮುದಾಯದಲ್ಲಿ ಕಳ್ಳರಿಲ್ಲ, ರೇಪಿಸ್ಟ್‌‌ಗಳಿಲ್ಲ, ತಾಯಿಗಂಡರಿಲ್ಲ, ಆಯೋಗ, ಪ್ರಾಧಿಕಾರ, ಪರಿಷತ್, ಪ್ರಶಸ್ತಿ ಸಮ್ಮೇಳನಾಧ್ಯಕ್ಷಗಿರಿಗೆ ಚಟ್ಟಕ್ಕೇರುವ ವಯಸ್ಸಿನವರೆಗೂ ಪ್ರಯತ್ನಿಸುವವರಿಲ್ಲ, ಒಳಿತಾಗಲಿ, ಕೆಡುಕಾಗಲಿ, ‘ಶ್ರೀಹರಿ ಇಚ್ಛಾ’ ಎಂಬ ಧ್ಯೇಯವಾಕ್ಯದೊಂದಿಗೆ ಬದುಕುತ್ತಾರಾಗಲಿ, ‘ಪಾರ್ಟಿಇಚ್ಛಾ’ ‘ಸಿಎಂ ಇಚ್ಛಾ’, ‘ಸರಕಾರದ ಇಚ್ಛಾ’ ಎಂದು ಬದುಕುವವರ ಸಂಖ್ಯೆ ಬೆರಳೆಣಿಕೆಯಷ್ಟು.

ನಮ್ಮ ಬಾಲ್ಯದಿಂದಲೂ ಯಾವ ಮಕ್ಕಳ ಜತೆ ಜಗಳಾಡಿಬಂದರೂ ನಮ್ಮ ತಾಯಂದಿರು ‘ಹೋಗ್ಲಿ ಬಿಡು, ಅವರ ಪಾಪ ಅವರ ಸುತ್ತ, ನೀ ಸುಮ್ಮನಿದ್ದು ಬಿಡು’ ಎಂದು ಶಾಂತಿ ಮಂತ್ರ ಭೋದಿಸುತ್ತಾರೆ. ‘ನಿನ್ನ ಹತ್ತರ ಇರೋದನ್ನ ಕದಿಯಲು, ಸಾಧ್ಯವಾಗದವರೇ ನಿನ್ನ ನೋಡಿ ಕುದಿಯುತ್ತಾರೆ’ ಎಂಬ ಅರ್ಥಪೂರ್ಣ ಸಂದೇಶ ಕೊಡುತ್ತಾರೆ. ಹಣ, ಒಡವೆ, ಅಧಿಕಾರ ಎಲ್ಲ ಹೆಚ್ಚಿದ್ದರೆ ಮತ್ತೊಬ್ಬರ ಕಣ್ಣು ಬೀಳುತ್ತದೆ. ಕಳ್ಳರಿಂದ ಹಿಡಿದು ಆದಾಯ ತೆರಿಗೆ ಇಲಾಖೆಯವರೆಗೂ, ಕದಿಯಲಾರದ ಸಂಪತ್ತೆಂದರೆ ಅದು ವಿದ್ಯೆ, ಜ್ಞಾನ. ಇದನ್ನು ಗಳಿಸಿಬಿಡಿ ಎಂಬುದನ್ನು ಬಾಲ್ಯದಿಂದಲೇ ಕೇಳುವ ಬ್ರಾಹ್ಮಣರು ಇದನ್ನೆ ಗಳಿಸಿ ಬದುಕುವ ದಾರಿ,ಹೊತ್ತಿಗಾಗುವಷ್ಟು ಅನ್ನ ಪಡೆಯುತ್ತಾರಾಗಲಿ, ಇನ್ನೊಬ್ಬರ ಅನ್ನ ಕಸಿದ ಉದಾಹರಣೆಗಳು ತೀರಾ ತೀರಾ ಕಮ್ಮಿ. ನಮ್ಮ ಗುರು ಬೀಚಿ ಹೇಳುತ್ತಿದ್ದ ತಮಾಷೆಯ ಮಾತು.
‘ಉಪವಾಸ ಸತ್ತ ಬ್ರಾಹ್ಮಣನ ಉದಾಹರಣೆ ಬಹಳ ಕಮ್ಮಿ, ಅಜೀರ್ಣದಿಂದ ಸತ್ತವರ ಬಗ್ಗೆ ಹೇಳಬಲ್ಲೆ’ ಎನ್ನುತ್ತಿದ್ದರು.

ಹೊಟ್ಟೆ ತುಂಬಿದ ಮೇಲೆ ಬ್ರಾಹ್ಮಣ ಮಲಗುತ್ತಾನಾಗಲಿ, ಇನ್ನೊಬ್ಬರನ್ನು ಕಂಡು ಮರುಗುವವನಲ್ಲ. ಎಲ್ಲ ಸಿಕ್ಕರೂ ಇನ್ನಷ್ಟು ಬೇಕೆಂದು ಕೂಡಿಡುವ ತೋಳದಂತಲ್ಲ, ಹೊಟ್ಟೆ ತುಂಬಿದ ಮೇಲೆ ಮುಂದೆ ಹೋಗುವ ಜಿಂಕೆಯನ್ನು ಮುಟ್ಟದ ಹುಲಿ ಬ್ರಾಹ್ಮಣ. ಪಾಪ ಭೀರು, ಈ ಎಲ್ಲ ಗುಣಗಳನ್ನು ಅಳವಡಿಸಿಕೊಂಡವನೆ ಬ್ರಾಹ್ಮಣನಾಗಲಿ ಜಾತಿಯಿಂದ, ಆಚಾರ್ಯ, ಪಂಡಿತರ ಮನೆಯಲ್ಲಿ, ಅವರ ಉದರದಲ್ಲೇ ಹುಟ್ಟಿದವನಲ್ಲ. ಹೆಂಡತಿ ಮಕ್ಕಳೊಂದಿಗಿದ್ದು ಸನ್ಯಾಸಿಯಂತಿರುವ ವ್ಯಕ್ತಿಗಳಿದ್ದಾರೆ. ಸನ್ಯಾಸಿ ಎಂಬ ಹೆಸರಿಟ್ಟುಕೊಂಡು ಊರಿಗೊಬ್ಬ ಹೆಂಡತಿ, ಹಲವಾರು ಮಕ್ಕಳನ್ನು ಪಡೆದವರ ಪಟ್ಟಿಯೇ ನಿತ್ಯ ಕಾಣುತ್ತೇವೆ.

ಒಂದು ಉದಾ; ಸನ್ಯಾಸ ಬೇಸರವಾಗಿ,ಅಪಾರವಾಗಿದ್ದ ಅಧಿಕಾರ ,ಸಂಪತ್ತಿನ ಮಠವನ್ನು ಬಿಟ್ಟು ವಿವಾಹ ಆಗಲು ಹೊರ ಬಂದ ಸ್ವಾಮಿಗಳೊಬ್ಬರಿಗೆ ಮಾಡರ್ನ್ ಸ್ವಾಮಿ ಒಬ್ಬ ‘ಒಂದು ಹೆಣ್ಣಿಗಾಗಿ ಮಠ ಬಿಡುತ್ತೀರಾ ?’ ಎಂದು ಒಂದು ಸಭೆಯಲ್ಲಿ ಜೋರಾಗಿ ಕೂಗಿ, ಆಮೇಲೆ ಅವರ ಕಿವಿಯಲ್ಲಿ ಮೆಲ್ಲಗೆ ‘ಇಂಥ ಮಠ,ಆಸ್ತಿ, ವ್ಯವಹಾರ, ಶಿಷ್ಯ ವೃಂದ ಬಿಡುತ್ತೀರಾ ? ಆ ಹೆಣ್ಣಿನ ವ್ಯವಸ್ಥೆನೂ ಮಾಡೋಣ, ಈತರದ್ದು ಎಷ್ಟೋ ಇದೆ’ ಎಂದು ಕಣ್ಣು ಮಿಟುಕಿಸಿದರಂತೆ ! ಆದರೆ ಆ ಸ್ವಾಮಿಗಳು ನಕ್ಕು ಹೊರಬಂದು, ಎಲ್ಲ ಬಿಟ್ಟೇ ಗೃಹಸ್ಥ ಜೀವನ ಸ್ವೀಕರಿಸಿ ಮಾದರಿಯಾದರು. ಇದು ಬ್ರಾಹ್ಮಣತ್ವದ ತತ್ವ. ಜಾತಿಯಲ್ಲ, ಗುಣ, ಆದರ್ಶ, ಮಾದರಿ. ಇಂಥ ಆದರ್ಶಗಳನ್ನು ರೂಢಿಸಿಕೊಂಡರೆ ಅವನು ಎಲ್ಲೆ, ಯಾರ ಹೊಟ್ಟೆಯಲ್ಲೇ ಹುಟ್ಟಿರಲಿ ಅವನು ಬ್ರಾಹ್ಮಣನೆ !

ಬ್ರಾಹ್ಮಣರನ್ನು ಕಂಡು ಬೊಗಳುವವರೆಲ್ಲರೂ ಒಂದು ವಾರ,ಒಂದು ತಿಂಗಳು ಬ್ರಾಹ್ಮಣರ ಮನೆಗಳಲ್ಲಿದ್ದು ಅವರ ದಿನಚರಿ ಗಮನಿಸಿದರೆ ಸಾಕು. ನಿಮ್ಮ ವಿಚಾರಗಳೆಲ್ಲ ಕಪೋಲಕಲ್ಪಿತ, ನಾವು ಸುಮ್ಮನೆ ಒದರಿದಿವಿ ಎಂಬ ಅರಿವಾಗುತ್ತದೆ. ‘ಗುಡ್ಡಕ್ಕೆ ಬೊಗಳಿದ ನಾಯಿ ಹೊಟ್ಟೆ ಉಬ್ಬಿಸುತ್ತಿತ್ತು.’ ಎಂಬ ಸ್ಥಿತಿ ಅವನದಾಗುತ್ತದೆ. ನಮ್ಮ ಅಜ್ಜಿ ಅಂಬಕ್ಕ ಒಂದು ವಿಷಯ ಹೇಳುತ್ತಿದ್ದಳು. ತುಂಬಾ ಸ್ವಾರಸ್ಯಕರವದು. ಆಗೆಲ್ಲ ಬೇಸಿಗೆ ಕಾಲದಲ್ಲಿ ಏಸಿ, ಫ್ಯಾನು ಇರದ ದಿನಗಳಲ್ಲಿ ರಾತ್ರಿ ಮಳಿಗೆಗಳ ಮೇಲೆ ಮನೆ ಮಂದಿಯೆಲ್ಲ ಮಲಗುತ್ತಿದ್ದರು. ಮಾಳಿಗೆಯ ಮೇಲೆ ಮಲಗಿದ್ದಾರೆ ಎಂಬ ಅರಿವಾದ ಕೂಡಲೇ ಕೆಳಗೆ ಕೀಲಿ ಹಾಕಿದ ಮನೆಗಳ ಬೀಗ ಮುರಿದೋ, ಕನ್ನ ಕೊರೆದೋ ಕಳ್ಳರು ದೋಚುತ್ತಿದ್ದರು. ಸಿಸಿ ಕ್ಯಾಮೆರಾಗಳಿಲ್ಲದ ಆ ದಿನಗಳಲ್ಲಿ ಸಿಸಿ ಕ್ಯಾಮೆರಾದ ಕೆಲಸ ಮಾಡುತ್ತಿದ್ದವುಗಳೆಂದರೆ ಬೀದಿ ನಾಯಿಗಳೇ.

ಎಲ್ಲ ನಾಯಿ ಬೊಗಳುವ ಸದ್ದು ಕೇಳಿದರೆ ಉಳಿದ ಓಣಿಯ ನಾಯಿಗಳೆಲ್ಲ ಬೊಗಳುತ್ತಿದ್ದವು, ಅವು ಮಾಳಿಗೆ ಹತ್ತಿ ಬಂದು ಕತ್ತೆತ್ತಿ, ಎಲ್ಲೋ ಬೊಗಳುವ ಬೇರೊಂದು ನಾಯಿ ಧ್ವನಿಗೆ ತಮ್ಮ ಧ್ವನಿ ಸೇರಿಸುತ್ತಿದ್ದವು. ಗಾಬರಿಯಾಗಿ ಎದ್ದು ಕೂತ ನಮ್ಮನ್ನು ಅಜ್ಜಿ ಅಂಬಕ್ಕ ಯಾರದೋ ಮನಿಗೆ ಕಳ್ಳರು ಬಂದಾರ ಪಾಪ ಅದಕ್ಕ ನಾಯಿ ಅಷ್ಟು ಒದರತಾವ ಮಲಗ್ರಿ, ಮಲಗ್ರಿ’ ಎಂದು ಮಲಗಿಸಿಬಿಡುತ್ತಿದ್ದಳು. ಬೆಳಗ್ಗೆ ಏಳುವಲ್ಲಿ ಯಾರ ಮನೆ ಕಳವು ಆಗಿದೆ ಎಂದು ಇಡೀ ದಿನ ಚರ್ಚೆ, ಅದಕ್ಕೆ ನಾಯಿ ಇರಬೇಕು ಎಂದು ತೀರ್ಮಾನಿಸಿ ನಾಯಿಗಳಿಗೆ ಉಳಿದ ಅನ್ನ ಹಾಕಿ, ಮನೆಮುಂದೆ ಮಲಗಿರುವಂತೆ ನೋಡಿಕೊಳ್ಳುತ್ತಿದ್ದರು.

ಕಳ್ಳರಿಗೆ ನಾಯಿಯ ಬಾಯಿ ಮುಚ್ಚಿಸುವುದೇ ದೊಡ್ಡ ಸವಾಲಾಯಿತು. ಆಗ ಕಳ್ಳರಿಗೆ ತಿಳಿದಿದ್ದ ಉಪಾಯವೆಂದರೆ ನಾಯಿಯನ್ನು ಕೊಲ್ಲದೇ ಬಾಯಿ ಮುಚ್ಚಿಸುವ ವಿಧಾನ ‘ಕೇರು’ ಎಂಬ ಒಂದು ಕಾಯಿ ಸಿಗುತ್ತಿತ್ತು. ಆ ಕೇರಿನ ಒಳಗಿನ ಎಣ್ಣೆ ಚರ್ಮಕ್ಕೆ ಬಿದ್ದರೆ, ಚರ್ಮ ಸುಟ್ಟು, ಗಾಯವಾಗಿ ನರಳಬೇಕಾಗಿತ್ತು. ಅಂಥಾ ಕೇರಿನ ಎಣ್ಣೆಯನ್ನು ಕಳ್ಳರು ಅನ್ನ, ಬಿಸ್ಕೀಟು ಹಾಕಿ ನಾಯಿಯನ್ನು ಹತ್ತಿರ ಕರೆದು ಅದು ತಿನ್ನುವಾಗ ಅದರ ತಿಕಕ್ಕೆ ಕೇರಿನ ಎಣ್ಣೆ ಹಚ್ಚುತ್ತಿದ್ದರು. ನಾಯಿಯ ತಿಕವೂ ಗಾಯವಾಗಿ, ವೃಣವಾಗಿ ನಾಯಿ ಬೊಗಳಿದರೆ ಸಾಕು ತಿಕದ ಗಾಯ ಅರಳಿದಂತಾಗಿ ಬಿರಿದು ನೋಯುತ್ತಿತ್ತು. ಹೀಗಾಗಿ ನಾಯಿಗಳು ಕಳ್ಳನನ್ನು ನೋಡಿದರೂ ಬೊಗಳಲಾರದೇ,ಬೊಗಳಿದರೆ ಹಿಂಭಾಗದ ಬೇನೆಗೆ ಅಂಜಿ ಸುಮ್ಮನೆ ಮಲಗಿ ನೋಡಲಾರಂಭಿಸಿದವು. ಕಳ್ಳತನ ಸುಸೂತ್ರವಾಗಿ ನಡೆಯಲಾರಂಭಿಸಿತು.

ಬೆಳಗ್ಗೆ ಕಳ್ಳತನ ಆದ ಓಣಿಯ ನಾಲ್ಕೆಂಟು ಮನೆಗಳವರು ‘ಹೋ’ ಎಂದು ಅಳುತ್ತಿದ್ದರೆ, ಇತರೇ ಜನ ‘ಈ ನಾಯಿಗಳಿಗೆ ಅನ್ನ ಹಾಕಿದ್ದು ದಂಡ ಒಂದೂ ಬೊಗಳಲಿಲ್ಲ’ ಎಂದು ಬೈಯ್ಯುತ್ತಿದ್ದರೆ, ಪಾಪ, ನಾಯಿಗಳು ಹಿಂದಿನ ನೋವಿಗೆ ಜನರ ಈ ತಿರಸ್ಕಾರದ ನುಡಿ ಕೇಳಲಾರದೇ ಅಸಹಾಯಕತೆಗೆ ಕಣ್ಣೀರಿಡುತ್ತಿದ್ದವು. ಆಗ ಓಣಿಯ ಹಿರಿಯ ಅನುಭವಿ ಜೀವಿಗಳು ‘ಪಾಪಾ, ನಾಯಿಗೆ ಬೈಯ್ಯಬ್ಯಾಡರಿ, ಕಳ್ಳ ಸೂ…ಮಕ್ಳು ನಾಯಿ ಕುಂಡಿಗೆ ಕೇರು ಹಾಕ್ಯಾರ ಅವುಗಳ ಒದರಾಟ ಬಂದ್ ಮಾಡ್ಯಾರ, ಹಿಂದೆ ಗಾಯ ಆದರೆ ಮುಂದಿನ ಬಾಯಿ ಬಂದ್ ಆಗ್ತದ’ ಎಂದು ಸಾಂತ್ವಾನ ಮಾಡುತ್ತಿದ್ದರು. ಈ ಕಥೆಯ ನೀತಿ ಇಷ್ಟೆ ಕಂಡ ಕಂಡ ದೇವರು,ಧರ್ಮ,ಗ್ರಂಥಗಳನ್ನು ಕಂಡು ಸುಮ್ಮನೆ ಬೊಗಳುವ ನಮ್ಮ ನಡುವಿನ, ನಮ್ಮ ಅನ್ನದಿಂದಲೆ ಮೈ ಬೆಳೆಸಿಕೊಂಡ ಆ ಗ್ರಂಥಗಳಿಂದಲೇ ವಿಷಯ ಸಂಗ್ರಹಿಸಿದ, ಬುದ್ಧಿ ಬೆಳೆಸಿಕೊಂಡ ಇವರ ಬೊಗಳುವಿಕೆಗೆ ಯಾವ ಹಿಂಬಂದಿಗೆ ಯಾವ ಕೇರು ಹಾಕಬೇಕು ?

ಯಾರು ಯಾರನ್ನು ಬೈಯ್ಯಬಾರದು. ಅವರವರ ಕರ್ಮದ ಅನುಸಾರ, ಸಂಸ್ಕಾರಗಳ ಅನುಸಾರ ಅವರು ಜೀವಿಸುತ್ತಾರೆ. ಅದರಲ್ಲೂ ಮನುಸ್ಮತಿಯೊಂದನ್ನೆ ಅದರಲ್ಲಿನ ಕೆಲ ಶ್ಲೋಕಗಳಿಂದ ಅದನ್ನು ಸುಡುವುದು,ಅದನ್ನು ಓದಿದವರನ್ನು ನಿಂದಿಸುವುದು ಬುದ್ಧಿಜೀವಿಗಳೆಂಬ ಅಲ್ಪರ ಮೊದಲ ಕೆಲಸ ಇಲ್ಲಿ ಕುವೆಂಪುರವರ ಸಾಲುಗಳು ನೆನಪಾಗುತ್ತವೆ. ‘ಎಂದೋ ಮನು ಬರೆದಿಟ್ಟುದು ನಮಗೆ ಕಟ್ಟೇನು ? ನಿನ್ನ ಧ್ವನಿಯೇ ನಿನಗೆ ಋಷಿ, ನಿನಗೆ ನೀನೇ ಮನು.’

ಬ್ರಾಹ್ಮಣ ಪರಿಸರ ಸಜ್ಜನಿಕೆ, ಸಂಸ್ಕೃತಿಗಳ ಆಗರ. ಬೈಯ್ಯುವಾಗಲೂ ಶಿಷ್ಟಾಚಾರ ಪಾಲಿಸುವ ನಾವು, ಲಾಂಗು, ಮಚ್ಚು, ಚಾಕು, ಚೂರಿಗಳನ್ನು ಮುಟ್ಟಿದವರೂ ಅಲ್ಲ. ನಾವು ಶಾಪ ಕೊಡುವುದು ಕೂಡ ‘ಉಪವಾಸ ಸಾಯಿ,ಅನ್ನ ಕಾಣದೇ ಹೋಗು, ನಿನ್ನ ಅನ್ನದಾಗ ಹುಳು ಬೀಳಲಿ’ ಇಷ್ಟೆ. ಮಳಖೇಡದ ಟೀಕಾರಾಯರ ಆರಾಧನೆಯಲ್ಲಿ ಒಂದು ದಿನ ಎಲೆ ಹಾಕಿ ಬಡಿಸಿದ ಮೇಲೆ ಇನ್ನೇನು ಊಟಕ್ಕೆ ಕೂರಬೇಕೆನ್ನುವಾಗ ಮಳೆ ಬಂದು ಅನ್ನ-ನೀರು ಸೇರಲೇಬೇಕು. ಇದು ಕೂಡ ಶಾಪವೇ ! ಮಹಾಭಾರತದಲ್ಲಿ ದೂರ್ವಾಸರು ಪಾಂಡವರ ಆಶ್ರಮಕ್ಕೆ ಬಂದು ಹಣ,ಅಧಿಕಾರ ಏನು ಕೇಳಲಿಲ್ಲ, ಕೇಳಿದ್ದು ಒಂದು ಹೊತ್ತಿನ ಊಟ ಅಷ್ಟೆ. ಅನ್ನದಾನಕ್ಕಿಂತ ದೊಡ್ಡ ದಾನವಿಲ್ಲ. ಈ ದಾನ ಒಂದೇ ಬೇಡಲು ಬಂದವನನ್ನು ಸಾಕು ಸಾಕು ಎನ್ನುವಂತೆ ಮಾಡಬಲ್ಲನು ಒಲ್ಲೆ ಒಲ್ಲೆ ಎನ್ನುವಂತೆ ನುಡಿಸಬಲ್ಲನು.

‘ಹಸಿದ ಬ್ರಾಹ್ಮಣರನ್ನು ಉಂಡ ತುರುಕರನ್ನು ಎದುರಿಸಬಾರದು ಎಂಬ ಗಾದೆಯೊಂದು ನಮ್ಮ ಹೈದರಾಬಾದ್ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ. ಅದಕ್ಕಾಗಿ ಬ್ರಾಹ್ಮಣ್ಯವನ್ನು ನಿಂದಿಸುವ, ಅವರ ಅನ್ನವನ್ನು ಕಸಿಯುವ,ಅವರನ್ನು ತುಳಿಯುವ ಪ್ರಯತ್ನ ಮಾಡಿದಷ್ಟೂ ಪುಟಿದು ನಿಲ್ಲುವುದೇ ಅವರ ಧೀ ಶಕ್ತಿ. ‘ಬ್ರಹ್ಮ ಬಲವೇ ಬಲ, ಬುದ್ಧಿ ಶಕ್ತಿಯೇ ಅಸ್ತ್ರ’ ಇದನ್ನು ನೀವೂ ಪಡೆಯಲು ಸಾಧ್ಯ. ನಾಲ್ಕಕ್ಷರ ನುಡಿಯಲು ಬಾರದ ನಿಮ್ಮ ನಾಲಿಗೆ ಪರಾನ್ನ,ಪರನಿಂದೆ,ಪರಸೊತ್ತಿನ ಅಪಹರಣಗಳಿಂದ ಕಲುಷಿತವಾಗಿದೆ. ಸಮುದ್ರದಂತೆ ಅಬ್ಬರಿಸಿ, ಹೆದರಿಸಿ, ಯಾರೂ ಬಳಿಬಾರದಂತೆ ಮಾಡಿಕೊಂಡಿರುವುದರಿಂದಲೇ ಸಮುದ್ರದ ನೀರನ್ನು ಒಂದು ಹನಿ ಕುಡಿಯಲೂ ಸಾಧ್ಯವಿಲ್ಲ. ಸಲೀಲ,ಶುಭ್ರ ನದಿಗಳಂತೆ ಹರಿಯುವ ಸಾತ್ವಿಕರು ಕುಡಿಯಲು,ಮೀಯಲು ಯೋಗ್ಯವಾದ ನೀರಿನಂತೆ. ಅಬ್ಬರಿಸಿ ಬರುವ ತೆರೆಗಳು ದಡದಲ್ಲೇ ನಿಲ್ಲುವುದಿಲ್ಲ. ಮತ್ತೆ ಹಿಂದೆ ಹೋಗುತ್ತವೆ. ಆದರೆ ನದಿಯ ನೀರು ಮುಂದೆ ಮುಂದೆ ಹರಿಯುತ್ತಲೇ ಬೆಳೆಯುತ್ತಲೇ ಸಾಗುತ್ತದೆ.

 

3 thoughts on “ಸಮುದ್ರವಾಗಿ ಅಬ್ಬರಿಸಬೇಡ, ನದಿಯಂತೆ ಉಪಯೋಗಿ ಆಗು

  1. tiruguniya madau sikaga yenu madabekendu tiliyabekittala!!
    2 yadva tadva kelasa nadeyuttide sticker hachchi nadeva vyavaharagale jasti AVARU ILLE IDDARE > ADARE ARTHAMADIKOLLALIKKAQGUTTILLAVEMBUDE>> APANAMBIKE<> namma janasankhye nudi nadegalu bere bere aqgiruvade durdaivavannisutte!
    4 YAVAGA JANARU KUDIYALU LICENCE SIKKITO ANDININDA NAVU TILIDURVANTAHA JKATIGALE KADEGANISALPATTIVE!!
    JORU KARUBARU BRANDA GALADDE AQGIDE ALAVE!!!

Leave a Reply

Your email address will not be published. Required fields are marked *

7 − seven =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Tuesday, 20.03.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ತೃತಿಯಾ,ಮಂಗಳವಾರ, ನಿತ್ಯ ನಕ್ಷತ್ರ -ಅಶ್ವಿನಿ , ಯೋಗ-ಐಂದ್ರ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 20.03.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ತೃತಿಯಾ,ಮಂಗಳವಾರ, ನಿತ್ಯ ನಕ್ಷತ್ರ -ಅಶ್ವಿನಿ , ಯೋಗ-ಐಂದ್ರ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top