ಸ್ಮಾಟ್‍೯ ಆಗುವ ಹಕ್ಕು ಸಿಟಿಗಳಿಗೆ ಮಾತ್ರವೇ, ಹಳ್ಳಿಗಳಿಗಿಲ್ಲವೇ?

Posted In : ರಾಜ್ಯ, ಸಂಗಮ, ಸಂಪುಟ

ಕಾನಾನು ಚಿಕ್ಕವನಿದ್ದಾಗ ಭಾರತ ಅಭೀವೃದ್ಧಿ ಹೊ೦ದಿದ ರಾಷ್ಟ್ರ ಎ೦ದು ಪರೀಕ್ಷೆಯಲ್ಲಿ ಬರೆದಿದ್ದೆ. ನಮ್ಮ ಕ್ಲಾಸ್ ಟೀಚರ್ ಎಲ್ಲರ ಮು೦ದೆ ಅದನ್ನು ಓದಿ ಹೇಳಿ,"ಭಾರತ ಇನ್ನೂ ಅಭೀವೃದ್ಧಿ ಹೊ೦ದುತ್ತಿರುವ ರಾಷ್ಟ್ರ. ಅಭೀವೃದ್ಧಿ ಹೊ೦ದಿದ ದೇಶ' ಎ೦ದು ಬರೆಯಬೇಡಿ ಎ೦ದು ಹೇಳಿದ್ದರು. ಅಭೀವೃದ್ಧಿ ಹೊ೦ದಿದ ರಾಷ್ಟ್ರವಾಗಿ ಭಾರತ ಬದಲಾಗುವುದು ಯಾವಾಗ? ಎ೦ದು ನಾನು ಅ೦ದಿನಿ೦ದಲೂ ಕಾಯುತ್ತಲೇ ಇದ್ದೇನೆ. ಅದು ಇ೦ದಿಗೂ ಸಾಧ್ಯವಾಗಿಲ್ಲ.

ಕೇ೦ದ್ರ ಸರಕಾರ ಹಲವು ನಗರಗಳನ್ನು"ಸ್ಮಾಟ್‍೯ ಸಿಟಿ' ಮಾಡಲು ಹೊರಟಿದೆ. ದೇಶ ಅಭೀವೃದ್ಧಿಯಾಗಬೇಕಾದರೆ ಕೈಗಾರಿಕೆಗಳು ಬೆಳೆಯಬೇಕು, ಜಿಡಿಪಿ ಹೆಚ್ಚಾಗಬೇಕು ಎ೦ದೆಲ್ಲ ಕಾರಣಗಳನ್ನು ನೀಡಿ ಭಾರತವನ್ನು ಅಭೀವೃದ್ಧಿ ಹೊ೦ದಿದ ದೇಶವನ್ನಾಗಿಸಲು ಸ್ಮಾಟ್‍೯ ಸಿಟಿಗಳ ನಿಮಾ೯ಣಕ್ಕೆ ನಾ೦ದಿ ಹಾಡಿದೆ. ಸಿಟಿಗಳೇನೋ ಸ್ಮಾಟ್‍೯ ಆಗುತ್ತವೆ. ಆದರೆ ನಮ್ಮ ಹಳ್ಳಿಗಳ ಕಥೆಯೇನು?

ಸ್ವಚ್ಛ ಭಾರತಕ್ಕೆ ಸ೦ದೇಶ ಕೊಡಲು ಬೇಕಾಗಿದ್ದ ಗಾ೦ಧೀಜಿಯು ಗ್ರಾಮಭಾರತದ ಪರಿಕಲ್ಪನೆ ಬ೦ದಾಗ ಕೇ೦ದ್ರ ಸರಕಾರಕ್ಕೆ ಬೇಡವಾದರು. ಕೈಗಾರೀಕರಣದ ನೆಪದಲ್ಲಿ ಸಣ್ಣ ಉದ್ಯಮಗಳು ನಾಶವಾಗುತ್ತಿರುವಾಗ ಅವರಿಗೆ ಗಾ೦ಧಿಕಾಣಲೇ ಇಲ್ಲ. ಸ್ಮಾಟ್‍೯ ಸಿಟಿ ಕಲ್ಪನೆ ಮತ್ತು ಅದರ ಸಾಕಾರ ಎರಡೂ ಒಳ್ಳೆಯದೆ. ಆದರೆ ನಮ್ಮ ಹಳ್ಳಿಗಳೇಕೆ "ಸ್ಮಾಟ್‍೯ ಹಳ್ಳಿ' ಆಗಬಾರದು? ಸಿಟಿಯಲ್ಲಿರುವ ಜನರಿಗೆ ಸ್ಮಾಟ್‍೯ ಆಗುವ ಹಕ್ಕಿದ್ದರೆ ಹಳ್ಳಿಗರಿಗೇಕೆ ಸ್ಮಾಟ್‍೯ ಆಗುವ ಹಕ್ಕಿಲ್ಲ?

ನಮ್ಮ ಹೊಟ್ಟೆ ತು೦ಬಬೇಕಾದರೆ ರೈತ ಆರೋಗ್ಯವಾಗಿ ರಬೇಕು. ಆದರೆ ನಮ್ಮ ಎಷ್ಟೋ ಹಳ್ಳಿಗಳಲ್ಲಿ ಆರೋಗ್ಯ ಕೇ೦ದ್ರಗಳೇ ಇಲ್ಲ. ಇನ್ನು ಕೆಲವೆಡೆ ಪ್ರಾಥಮಿಕ ಆರೋಗ್ಯ ಕೇ೦ದ್ರಗಳೇನೋ ಇವೆ ಆದರೆ ಅವುಗಳಿರುವ ಸ್ಥಿತಿ ನೋಡಿದರೆ ಜನರು ಅಲ್ಲಿಗೆ ಹೋಗುವುದಕ್ಕೇ ಭಯ ಪಡುತ್ತಾರೆ. ಗ್ರಾಮೀಣ ಭಾಗಗಳಲ್ಲಿ ವೈದ್ಯರ ಕೊರತೆ ಇದೆ, ಸಮಪ೯ಕವಾಗಿ ಔಷಧಗಳ ಪೂರೈಕೆಯಾಗುತ್ತಿಲ್ಲ. ಎ೦ಬಿಬಿಎಸ್ ಮುಗಿದ ನ೦ತರ ಸರಕಾರ ಒ೦ದು ವಷ೯ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿದೆ. ಅ೦ದರೆ ತರಬೇತಿಯಲ್ಲಿರುವ ವೈದ್ಯರು ಹಳ್ಳಿಗಳಿಗೆ ಹೋಗಿ ಅಲ್ಲಿನ ಜನರ ಹಿತ ಕಾಯಬೇಕು. ಅದು ಒಳ್ಳೆಯದೇ ಆದರೆ ತಜ್ಞ  ವೈದ್ಯರಿ೦ದ ತಾವಿರುವ ಸ್ಥಳದಲ್ಲೇ ಉತ್ತಮ ಚಿಕಿತ್ಸೆ ಪಡೆಯುವುದು ದೇಶದ ಎಲ್ಲ ಪ್ರಜೆಗಳ ಹಕ್ಕು. ಗ್ರಾಮೀಣ ಭಾಗದ ಬಹುತೇಕರು ತಜ್ಞ  ವೈದ್ಯರ ಆರೋಗ್ಯ ಸೇವೆಯಿ೦ದ ವ೦ಚಿತರಾಗಿದ್ದಾರೆ. ಸಾಮಾನ್ಯ ಜ್ವರ, ಕೆಮ್ಮು, ವಾ೦ತಿ ಭೇದಿಗಳಿಗೂ ನಗರಗಳಲ್ಲಿರುವ ಆಸ್ಪತ್ರೆಗಳಿಗೆ ಬರಬೇಕು. ಸದನದಲ್ಲಿ ಗದ್ದಲವೆಬ್ಬಿಸುವ ಸ೦ಸದರಿಗೆ ಭತ್ಯೆ ಕೊಡಲು ನಮ್ಮ ಸರಕಾರದ ಬಳಿ ದುಡ್ಡಿದೆ, ಕೋಟ್ಯ೦ತರ ರು. ಖಚು೯ ಮಾಡಿ ಜಾಹೀರಾತು ಹಾಕಿಸಲು ಹಣವಿದೆ. ಆದರೆ ಗ್ರಾಮೀಣ ವೈದ್ಯರಿಗೆ ಸೂಕ್ತ ವೇತನ ಹಾಗೂ ಸೌಲಭ್ಯಗಳನ್ನು ಕೊಡಲು ನಮ್ಮ ಸರಕಾರಕ್ಕೆ ಬಡತನ.

ಸಿಟಿಗಳು ಸ್ಮಾಟ್‍೯ ಆದರೆ ಅಲ್ಲಿನ ಜನರು ತಿನ್ನುವ ಅನ್ನ ಬರಬೇಕಾದುದು ಹಳ್ಳಿಯ ರೈತನಿ೦ದಲೇ. ಸಿಟಿಗಳು ಅಭೀವೃದ್ಧಿಗೊ೦ಡು ಕ೦ಗೊಳಿಸುತ್ತಿರುವಾಗ ಹಳ್ಳಿಯ ಜನರು ಸೂಕ್ತ ಆರೋಗ್ಯ ಸೇವೆ ಸಿಗದೇ ಒದ್ದಾಡುವುದು ನ್ಯಾಯವೇ? ಜಗತ್ತಿನ ಮು೦ದೆ ನಮ್ಮ ದೇಶವನ್ನು ಅಭೀವೃದ್ಧಿ ಹೊ೦ದಿದ ದೇಶ ಎ೦ದು ತೋರಿಸುವ ಪ್ರಯತ್ನದಲ್ಲಿರುವ ಸರಕಾರಗಳಿಗೆ ಹಳ್ಳಿಗಳು ನೆನಪಾಗುತ್ತಿಲ್ಲವಷ್ಟೆ.

ಇ೦ದು ನಗರಳಿಗೆ ಮಾತ್ರ ಇ೦ಟರ್‍ನೆಟ್ ಸೀಮಿತವಾಗಿದೆ. ಅನೇಕ ಹಳ್ಳಿಗಳು ಈ ಸೌಲಭ್ಯದಿ೦ದ ವ೦ಚಿತವಾಗಿವೆ. ಸರಕಾರದ ಯಾವುದೇ ಸೌಲಭ್ಯಕ್ಕಾಗಿ ಆನ್‍ಲ್ಯೆನ್‍ನಲ್ಲಿ ಅಜಿ೯ ಹಾಕುವುದಿದ್ದರೆ ಗ್ರಾಮೀಣ ಜನರು ನಗರಕ್ಕೇ ಬರಬೇಕು. ಹಳ್ಳಿಗಳಲ್ಲಿ ಸಿಗುವ ಇ೦ಟರನೆ೯ಟ್ ವೇಗಕ್ಕೇ ಫೈಲ್, ಫೋಟೋಗಳು ಅಪ್‍ಲೋಡ್ ಆಗುವುದೇ ಇಲ್ಲ. ಇ೦ಟನೆ೯ಟ್ ಬೇಕೆ೦ದರೆ ವಿದ್ಯುತ್ ಬೇಕು. ದೇಶದ ಬಹುತೇಕ ರಾಜ್ಯಗಳಲ್ಲಿ 24 ಗ೦ಟೆ ಸತತ ವಿದ್ಯುತ್ ಪಡೆಯುವುದು ಇನ್ನೂ ಕನಸಾಗಿಯೇ ಉಳಿದಿದೆ. ಕೆಲವು ಹಳ್ಳಿಗಳಲ್ಲಿ ನೀರಾವರಿಗೆ ಬೇಕಾದ ವಿದ್ಯುತ್ ಕೂಡ ಸಿಗುತ್ತಿಲ್ಲ.

ಬಹುತೇಕ ಹಳ್ಳಿಯ ಮಕ್ಕಳಿಗೆ ನಗರದ ಶಾಲೆಯ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಪೋಷಕರು ಮಕ್ಕಳನ್ನು ನಗರದ ಕಾನೆ್ವ೦ಟ್ ಗಳಿಗೇ ಸೇರಿಸುತ್ತಿದ್ದಾರೆ. ತಮ್ಮ ಮಕ್ಕಳು ತಮ್ಮ೦ತೆ ರೈತರಾಗಿ ಕಷ್ಟ ಪಡುವುದು ಬೇಡ ಎ೦ಬುದು ಅವರ ಆಶಯ. ಸ್ಮಾಟ್‍೯ ಸಿಟಿಗಳಿಗೆ ಹೋಗಿ ಮಕ್ಕಳು ಸ್ಮಾಟ್‍೯ ಆಗಲಿ ಎ೦ಬ ಭಾವನೆ ಅವರಲ್ಲಿ ಬೆಳೆದು ನಿ೦ತಿದೆ. ತಾವು ಹಳ್ಳಿಯ ಜನರು ಎ೦ಬ ಕೀಳರಿಮೆ ಹಳ್ಳಿಗರನ್ನು ಬಿಟ್ಟಿಲ್ಲ. ನಗರದ ಜನರು ಏನು ಪುಣ್ಯ ಮಾಡಿದ್ದಾರೆ೦ದು ಅವರಿಗೆ ಸ್ಮಾಟ್‍೯ ಸಿಟಿಯಲ್ಲಿ ಬದುಕುವ ಯೋಗವಿದೆ? ಹಾಗೆಯೇ ಹಳ್ಳಿಯ ಜನ ಯಾವ ಪಾಪ ಮಾಡಿದ್ದಾರೆ೦ದು ಹಳ್ಳಿಗಳ ಅಭೀವೃದ್ಧಿಯನ್ನು ನಿಲ೯ಕ್ಷಿಸ ಲಾಗುತ್ತಿದೆ?

ಹಳ್ಳಿಗಳನ್ನು ಮೂಲಸೌಕಯ೯ಗಳಿ೦ದ ಇನ್ನೂ ದೂರವಾಗಿಯೇ ಇಟ್ಟು ನಗರಗಳನ್ನು "ಸ್ಮಾಟ್‍೯' ಮಾಡುತ್ತೇವೆ ಎ೦ದು ಹೊರಟಿರುವುದು ಆಭಾಸವಾಗಿ ಕಾಣುತ್ತಿದೆ. ಪ್ರತಿಯೊಬ್ಬ ಸ೦ಸದ ಗ್ರಾಮಗಳನ್ನು ದತ್ತು ತೆಗೆದುಕೊ೦ಡು ಅವುಗಳನ್ನು ಮಾದರಿ ಗ್ರಾಮಗಳನ್ನಾಗಿಸಬೇಕೆ೦ದು ಅಧಿಕಾರಕ್ಕೆ ಬ೦ದ ಕೂಡಲೇ ಪ್ರಧಾನಿ ತಿಳಿಸಿದ್ದಾರೆ. ಆದರೆ ಆರೋಗ್ಯ ಸೇವೆ, ವಿದ್ಯುತ್, ಕೃಷಿಗೆ ಬೇಕಾದ ಭೂಮಿ, ನೀರು ಸರಿಯಾಗಿ ಸಿಗದೇ ಗ್ರಾಮಗಳು ಅಭೀವೃದ್ಧಿಯಾಗುವುದಾದರೂ ಹೇಗೆ?

ಚಂದ್ರು ಹಿರೇಮಠ್

One thought on “ಸ್ಮಾಟ್‍೯ ಆಗುವ ಹಕ್ಕು ಸಿಟಿಗಳಿಗೆ ಮಾತ್ರವೇ, ಹಳ್ಳಿಗಳಿಗಿಲ್ಲವೇ?

  1. SMART CITY ANDARENU> ASNUKULATEGALIGAGI REPAIRY KELASA MADUVADU YENDU ARTHA! ADARE IND IDE NAGARAGALALLI SARVACHANIK TOILETS BIDU> URINALS GALIGU KOKKE BANDIDEYELLA! HALLIGALU YESTO VASDI> YERADANEYADAGI> RAITA RASI MADABEKKIDDADDARE>> HOLAGALALLI GUDISALUNIRMISUVAD ANIVARYA! CANNAVEERA KAVI SALU> nammuraguddadoreya badiya kiruhalla nenapige bantu….!

Leave a Reply

Your email address will not be published. Required fields are marked *

17 + 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top