About Us Advertise with us Be a Reporter E-Paper

Breaking Newsಸಿನಿಮಾಸ್

ಅಣ್ಣಯ್ಯನ ಚೆಲುವೆ ಜಗ್ಗಣ್ಣನಿಗೆ ಜೋಡಿಯಂತೆ..!

ಕ್ರೇಜ್ಹಿಸ್ಟಾರ್ ರವಿಚಂದ್ರನ್ ಅವರ ಅಣ್ಣಯ್ಯ ಚಿತ್ರದಲ್ಲಿ ಕಮಾನು ಡಾರ್ಲಿಂಗ್.. ಅಯ್ಯೋ.. ಅಯ್ಯೋ.. ಎಂಬ ಹಾಡಿನಲ್ಲಿ ನಡು ಬಳುಕಿಸಿ ಸಿನಿಪ್ರಿಯರ ಮನಗೆದ್ದ ಚೆಲುವೆ ಮಧುಬಾಲಾ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗುತ್ತಿದ್ದಾರೆ.

ಹೌದು. ಅಣ್ಣಯ್ಯ ಸಿನಿಮಾದ ಬಳಿಕ ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡು ನಂತರ ಮರೆಯಾಗಿದ್ದ ಮಧುಬಾಲಾ, ಬಳಿಕ ಕಿಚ್ಚ ಸುದೀಪ್ ಅಭಿನಯದ ರನ್ನ ಚಿತ್ರದ ಮೂಲಕ ಕಂ ಬ್ಯಾಕ್ ಆಗಿದ್ದರು. ಅದಾದ ಬಳಿಕ ನಾನು ಮತ್ತು ವರಲಕ್ಷ್ಮೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮಧುಬಾಲಾ, ಸದ್ಯ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

ಇವೆಲ್ಲದರ ನಡುವೆ ಮಧುಬಾಲಾ ನವರಸ ನಾಯಕ ಜಗ್ಗೇಶ್ ಅವರಿಗೆ ನಾಯಕಿಯಾಗಿ ಜೊತೆಯಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮೂಲಗಳ ಪ್ರಕಾರ ಈಗಾಗಲೇ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿರುವ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ನಟ ಜಗ್ಗೇಶ್ ಮಧುಬಾಲಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಿರುತೆರೆ ನಿರ್ದೇಶಕ ರಮೇಶ್ ಇಂದಿರಾ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರದ ಚಿತ್ರೀಕರಣ ಆರಂಭಗೊಂಡಿದ್ದು, ಚಿತ್ರದಲ್ಲಿ ಜಗ್ಗೇಶ್ ಮತ್ತು ಮುಧುಬಾಲಾ ಜೊತೆಯಾಗಿರುವ ಕೆಲ ಫೋಟೋಗಳು ಹೊರಬಿದ್ದಿವೆ. ಇನ್ನು ಈ ಚಿತ್ರದಲ್ಲಿ ಮಧುಬಾಲಾ ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close