ರಾಷ್ಟ್ರಪತಿ ಆಯ್ಕೆ ಹಿನ್ನೆಲೆ: ಬಿಜೆಪಿ ಸಭೆ ಇಂದು

Posted In : ದೇಶ

ದೆಹಲಿ: ಮುಂದಿನ ರಾಷ್ಟ್ರಪತಿಗಳ ಆಯ್ಕೆಗಾಗಿ ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಇಂದು ಬಿಜೆಪಿ ಸಂಸದೀಯ ಪಕ್ಷದ ಸಭೆ ಕರೆಯಲಾಗಿದೆ.

ಇನ್ನೊಂದೆಡೆ ಬಿಜೆಪಿ ತನ್ನ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದ ಬಳಿಕವೇ ತಮ್ಮ ನಿರ್ಧಾರ ಅಂತಿಮ ಎಂದು ಪ್ರತಿಪಕ್ಷಗಳು ಹೇಳಿವೆ. ಇವತ್ತು ನಡೆಯಲಿರುವ ಸಭೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಯಾರು ಎಂಬ ಅಂತಿಮ ತೀರ್ಮಾನ ಹೊರಬೀಳಲಿದೆ. ಈ ಕುರಿತಂತೆ ಬಿಜೆಪಿ ವಿಪಕ್ಷಗಳ ಜೊತೆಗೂ ಸಮಾಲೋಚನೆ ನಡೆಸಲು ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಹಾಗೂ ವೆಂಕಯ್ಯ ನಾಯ್ಡು ಅವರನ್ನೊಳಗೊಂಡ ಸಮಿತಿ ರಚಿಸಿದೆ.

ಎಐಎಡಿಎಂಕೆ, ಟಿಡಿಪಿ ಹಾಗೂ ಎಜೆಪಿ ಪ್ರಧಾನಿ ಮೋದಿ ಅವರ ನಿರ್ಧಾರ ವನ್ನೇ ಬೆಂಬಲಿಸುವುದಾಗಿ ಹೇಳಿವೆ. ಇದೇ ತಿಂಗಳ 23ರಂದು ಎನ್‌ಡಿಎ ಅಭ್ಯರ್ಥಿ ರಾಷ್ಟ್ರಪತಿ ಚುನಾವಣೆಗಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

fourteen − 6 =

 
Back To Top