About Us Advertise with us Be a Reporter E-Paper

Breaking Newsದೇಶಪ್ರಚಲಿತ

ಸಿಂಗಾಪುರ್‌‌‌ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ

ದೆಹಲಿ: ನವಂಬರ್ 14 ಮತ್ತು 15 ರಂದು ಸಿಂಗಾಪುರ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತಿ ದೊಡ್ಡ ಮುಕ್ತ ವ್ಯಾಪಾರ ಪ್ರದೇಶ, ಇಂಡೋ-ಪೆಸಿಫಿಕ್ ಪ್ರಾಂತದಲ್ಲಿ ಭದ್ರತೆ ಕುರಿತು ಶೃಂಗದಲ್ಲಿ ಭಾಗವಹಿಸುವುದರ ಜತೆಗೆ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಪ್ರಾದೇಶಿಕ ಸಮಗ್ರ ಸಹಭಾಗಿತ್ವ (ಆರ್‌ಸಿಇಪಿ) ಶೃಂಗದಲ್ಲಿ ಭಾಗವಹಿಸುವುದರ ಜತೆಗೆ ಪೂರ್ವ ಏಷ್ಯಾ ಶೃಂಗ ಮತ್ತು ಭಾರತ-ಏಷಿಯಾನ್ ಶೃಂಗದಲ್ಲೂ ಮೋದಿ ಪಾಲ್ಗೊಳ್ಳಲಿದ್ದಾರೆ. ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನು ಒಳಗೊಂಡಿರುವ ಕ್ವಾಡ್(4 ರಾಷ್ಟ್ರಗಳ ಒಕ್ಕೂಟ) ನಾಯಕರ ಸಭೆಯಲ್ಲಿ ಮೋದಿ ಸಮಾಲೋಚನೆ ನಡೆಸಲಿದ್ದಾರೆ.

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ವಿಧಿಸಿರುವ ನಿರ್ಬಂಧ ಮತ್ತು ರಷ್ಯಾದಿಂದ ರಕ್ಷಣಾ ಖರೀದಿಗಳ ಒಪ್ಪಂದ ಕುರಿತು ಪ್ರಧಾನಿ ಮೋದಿ ಅವರು ಪೆನ್ಸ್ ಜತೆ ನವಂಬರ್ 14ರಂದು ಚರ್ಚೆ ನಡೆಸಲಿದ್ದಾರೆ.

ಹತ್ತು ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ವಲಯ ನಿರ್ಮಾಣ ಕುರಿತಾದ ಆರ್‌ಸಿಇಪಿ ಕುರಿತು ಭಾರತದ ನಿಲುವನ್ನು ಆಸಿಯಾನ್ ಒಕ್ಕೂಟ ಎದುರು ನೋಡುತ್ತಿದೆ. ಇದೇ ಸಂದರ್ಭದಲ್ಲಿ ಮೋದಿ ಸಿಂಗಾಪುರ ಪ್ರಧಾನಿ ಲೀ ಲೂಂಗ್ ಅವರೊಂದಿಗೂ ದ್ವಿಪಕ್ಷೀಯ ಮಾತುಕಕತೆ ನಡೆಲಿದ್ದಾರೆ.

ನ.15ರಂದು ನಡೆಯಲಿರುವ ಪೂರ್ವ ಏಷ್ಯಾ ಸಮ್ಮೇಳನದಲ್ಲಿ 10 ಆಸಿಯಾನ್ ದೇಶಗಳು ಮತ್ತು ಆಸ್ಟ್ರೇಲಿಯಾ, ಚೀನಾ, ಭಾರತ, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ ಮತ್ತು ರಷ್ಯಾ ಭಾಗವಹಿಸಲಿವೆ. ಐಸಿಟಿ, ಕಡಲ ಭದ್ರತೆ ಮತ್ತು ಗಡಿಯಾಚೆಗಿನ ಕುರಿತು ಚರ್ಚೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿಜಯ್ ಠಾಕೂರ್ ಸಿಂಗ್ ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close