About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಪ್ರಧಾನಿ ಮೋದಿ ಒಬ್ಬ ಸರ್ವಾಧಿಕಾರಿ: ಕಾರ್ಮಿಕ ಸಚಿವ ವೆಂಕಟರಮಣಪ್ಪ

ಚಿತ್ರದುರ್ಗ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾರ್ವಜನಿಕರು, ಬಡವರ ಪರ ಅನುಕಂಪ ಉಳ್ಳವರು. ಪ್ರಧಾನಿ ನರೇಂದ್ರ ಮೋದಿ ಒಬ್ಬ ಸರ್ವಾಧಿಕಾರಿ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದರು.

ಚಿತ್ರದುರ್ಗದ ಜಿಲ್ಲೆಯಲ್ಲಿ ಸಚಿವ ಸಂಪುಟದ ಉಪ ಸಮಿತಿಯಿಂದ ಆಗಮಿಸಿದ್ದ ಬರ ಅಧ್ಯಯನ ತಂಡದೊಂದಿಗೆ ಆಗಮಿಸಿ ಚಳ್ಳಕೆರೆ ತಾಲೂಕಿನ ಹೆಗ್ಗೆರೆಯ ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದ ಹೊಲಗಳ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ,  ಮೋದಿ ಮುಂದೆ ಯಾವ ಮಂತ್ರಿಗಳು ಮಾತಾಡುವಂತಿಲ್ಲ. ಬಿಜೆಪಿಯವರ ಆಟವು ಸಹ ಮೋದಿ ಮುಂದೆ ನಡೆಯಲ್ಲ ಎಂದರು.

ಚಿತ್ರದುರ್ಗದ ಜನ ಬರದಿಂದ ತತ್ತರಿಸಿದ್ದಾರೆ. ಅಧ್ಯಯನ ತಂಡ ಮಾಡಿ ವರದಿ ಸಲ್ಲಿಸಲಿದೆ. ಅದನ್ನು ಸದನದಲ್ಲಿ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು. ಈ ವೇಳೆ ಸಚಿವ ಶಿವಶಂಕರ ರೆಡ್ಡಿ, ಡಿ.ಸಿ ತಮ್ಮಣ್ಣ, ಶ್ರಿನಿವಾಸ್ ಇದ್ದರು.

Tags

Related Articles

Leave a Reply

Your email address will not be published. Required fields are marked *

Language
Close