About Us Advertise with us Be a Reporter E-Paper

ಸಿನಿಮಾಸ್

ಪ್ರಿಯಾಮಣಿ ಲೀಡ್ ರೂಲ್‌ನಲ್ಲಿ ‘ಡಾಕ್ಟರ್ 56’

ಪ್ರಿಯಾಮಣಿ ಅಭಿನಯದ ನಾಯಕಿ ಪ್ರಧಾನ ಚಿತ್ರ ‘ಡಾಕ್ಟರ್ 56’ ಕಳೆದ ಶನಿವಾರ ಸೆಟ್ಟೇರಿತು. ಮದುವೆಯಾದ ನಂತರ ಸಣ್ಣ ಗ್ಯಾಪ್ ನೀಡಿದ್ದ ಪ್ರಿಯಾಮಣಿ ಹೊಸ ಜರ್ನಿ ಆರಂಭಿಸುವ ಉದ್ದೇಶದಿಂದ ಒಂದು ಗಟ್ಟಿಕಥೆಯ ಹುಡುಕಾಟದಲ್ಲಿ ಇದ್ದರಂತೆ, ಆಗ ಸಿಕ್ಕಿದ್ದೇ ‘ಡಾಕ್ಟರ್ 56’. ಇದೊಂದು ಸಸ್ಪೆನ್‌ಸ್ ಥ್ರಿಲ್ಲರ್ ಸಿನಿಮಾ. ಪ್ರಿಯಾಮಣಿ ಈ ಸಿನಿಮಾದಲ್ಲಿ ಸಿಬಿಐ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದು ಎಲ್ಲಾ ಸಿನಿಮಾಗಳಲ್ಲಿ ಇರುವಂಥ ಸಿಬಿಐ ಪಾತ್ರವಲ್ಲ.

ಇದೊಂದು ಹೆಚ್ಚು ಮಾತನಾಡದೇ ಕೂಲಾಗಿ ಇದ್ದು. ವಿಭಿನ್ನವಾಗಿ ಯೋಚಿಸುವ ಆಫೀಸರ್ ಪಾತ್ರ. ಯಾರೋ ಹೊಸಬರು ಬಂದ ಕತೆ ಹೇಳುತ್ತೇನೆ ಎಂದಾಗ ನೆಪ ಹೇಳಲು ದಾರಿ ಕಾಣದೇ ಸುಮ್ಮನೆ ಒಪ್ಪಿದ್ದರಂತೆ. ಆದರೆ ಕತೆಯನ್ನು ಕೇಳುತ್ತಾ ಕೇಳುತ್ತಾ ಎರಡು ಗಂಟೆ ಸಮಯ ಹೋಗಿದ್ದೇ ನನಗೆ ಹೇಳಿದ ಹಾಗೆಯೇ ತೆರೆಯ ಮೇಲೆ ತಂದರೆ ಇದೊಂದು ದೊಡ್ಡ ಹಿಟ್ ಚಿತ್ರವಾಗುತ್ತದೆ ಎಂಬುದು ಪ್ರಿಯಾಮಣಿ ಅಭಿಪ್ರಾಯ.

‘ಲೂಸಿಯಾ’ ಸಿನಿಮಾ ಸೇರಿದಂತೆ 16 ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ರಾಜಿ ಆನಂದ್ ಲೀಲಾ, ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕನಾಗಿದ್ದಾರೆ. ಸಿನಿಮಾದಲ್ಲಿ ‘56’ ಎನ್ನುವುದು ಒಂದು ಪಾತ್ರ ಎನ್ನುವುದನ್ನು ಬಿಟ್ಟರೆ ಸಿನಿಮಾದ ಕತೆ ಅಥವಾ ಯಾವ ಬೇಸ್ ಮೇಲೆ ಮಾಡಿದ ಸಿನಿಮಾ ಎನ್ನುವ ಸಣ್ಣ ಸುಳಿವನ್ನೂ ಬಿಟ್ಟು ಚಿತ್ರತಂಡ, ಎಲ್ಲವನ್ನೂ ಚಿತ್ರಮಂದಿರಲ್ಲೇ ನೋಡಿ ಎನ್ನುತ್ತಿದೆ.

ಈ ಸಿನಿಮಾಗೆ ಚಿತ್ರಕತೆಯನ್ನು ಬರೆದಿರುವ ಪ್ರವೀಣ್, ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದು, ನಿರ್ಮಾಣ ಕೂಡಾ ಅವರದ್ದೇ. ಚಿತ್ರಕ್ಕೆ ನೋಬಿನ್ ಪೌಲ್ ಸಂಗೀತ ಸಂಯೋಜನೆ ಮಾಡಿದ್ದು, ರಾಕೇಶ್ ಛಾಯಾಗ್ರಹಣವಿದೆ. ‘ಡಾಕ್ಟರ್ 56’ ಸಿನಿಮಾಕ್ಕೆ ‘1956-2019’ ಎನ್ನುವ ಅಡಿಬರಹವಿದ್ದು, ಮುಂದಿನ ವರ್ಷ ಬಿಡುಗಡೆ ಮಾಡುವ ಪ್ಲ್ಯಾನ್ ಮಾಡಿಯೇ ಇದನ್ನು ಇಟ್ಟಿದ್ದೇವೆ ಎನ್ನುವುದು ಚಿತ್ರತಂಡದ ಮಾತು.

Tags

Related Articles

Leave a Reply

Your email address will not be published. Required fields are marked *

Language
Close