About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ

ರಾಹುಲ್‌ ವೈಫಲ್ಯದ ಕಾರಣ ಪ್ರಿಯಾಂಕಾ ಕಣಕ್ಕೆ: ಬಿಜೆಪಿ

ದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌, ಪ್ರಿಯಾಂಕಾ ವಾದ್ರಾಗೆ ಉತ್ತರ ಪ್ರದೇಶದ ಉಸ್ತುವಾರಿ ನೀಡಿರುವ ವಿಚಾರವಾಗಿ ಮಾತನಾಡಿದ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ, “ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ನನ್ನ ಸಹೋದರಿ ಪ್ರಿಯಾಂಕಾ ನನ್ನೊಂದಿಗೆ ನಿಲ್ಲಲಿರುವ ವಿಚಾರವಾಗಿ ನನಗೆ ಸಂತಸವಾಗಿದೆ. ಆಕೆ ಸಮರ್ಥರಿದ್ದಾರೆ” ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಅಣಕ ಮಾಡಿರುವ ಬಿಜೆಪಿಯ ವಕ್ತಾರ ಸಂಬಿತ್‌ ಪಾತ್ರಾ, “ಬಿಜೆಪಿಗೆ ಇದು ಸವಾಲಲ್ಲ. ಇದು ನಿರೀಕ್ಷಿತವೇ ಆಗಿತ್ತು. ಇದು ಕುಟುಂಬ ರಾಜಕಾರಣ. ರಾಹುಲ್ ಗಾಂಧಿ ವಿಫಲರಾಗಿದ್ದಾರೆ ಎಂದು ಇದರಿಂದ ತಿಳಿಯುತ್ತದೆ. ಭವಿಷ್ಯದಲ್ಲಿ ರಾಬರ್ಟ್ ವಾದ್ರಾ ಕೂಡಾ ರಾಜಕೀಯಕ್ಕೆ ಬರಲಿದ್ದಾರೆ. ಪಕ್ಷಕ್ಕೆ ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಬಹುದು” ಎಂದು ಲೇವಡಿ ಮಾಡಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್‌ ಶರ್ಮಾ, “2014ರ ಲೋಕಸಭಾ ಚುನಾವಣೆಯನ್ನು ಗಮನಿಸಿದರೆ, ಪ್ರಿಯಾಂಕಾ ಪ್ರಚಾರ ಮಾಡಿದ 46 ಕ್ಷೇತ್ರಗಳ ಪೈಕಿ 2ರಲ್ಲಿ ಮಾತ್ರವೇ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಅಲೆಯನ್ನು ತನ್ನ ಪರವಾಗಿ ಬದಲಿಸಿಕೊಳ್ಳಲು ಆಗದು ಎಂದು ಕಾಂಗ್ರೆಸ್‌ ಚೆನ್ನಾಗಿ ತಿಳಿದಿದೆ. ಪ್ರಿಯಾಂಕಾ ನೇಮಕದಿಂದ ಖುದ್ದು ಪಕ್ಷದ ಕಾರ್ಯಕರ್ತರಿಗೇ ಕುಟುಂಬ ರಾಜಕಾರಣದ ಮೇಲೆ ವ್ಯತಿರಿಕ್ತ ಭಾವನೆ ಮೂಡಿಸಲಿದೆ” ಎಂದು ಹೇಳಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close