About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಪ್ರೊ ಕಬಡ್ಡಿ ಲೀಗ್‌ ಫೈನಲ್: ನಾಳೆ ಪ್ರಶಸ್ತಿಗಾಗಿ ಬೆಂಗಳೂರು ಬುಲ್ಸ್‌-ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಪೈಪೋಟಿ

ಮುಂಬೈ: ಬೆಂಗಳೂರು ಬುಲ್ಸ್‌ ಮತ್ತು ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡದವರು ‍ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಉಭಯ ತಂಡಗಳ ನಡುವಣ ಫೈನಲ್‌ ‘ಫೈಟ್‌’ ಶನಿವಾರ ನಡೆಯಲಿದೆ. ಬುಲ್ಸ್‌ ಮತ್ತು ಫಾರ್ಚೂನ್‌ಜೈಂಟ್ಸ್‌ ಈ ಬಾರಿಯ ಮೊದಲ ಕ್ವಾಲಿಫೈಯರ್‌ ಹಣಾಹಣಿಯಲ್ಲಿ ಎದುರಾಗಿದ್ದವು. ಆಗ ರೋಹಿತ್‌ ಕುಮಾರ್‌ ಸಾರಥ್ಯದ ಬೆಂಗಳೂರಿನ ತಂಡ ಗೆಲುವಿನ ತೋರಣ ಕಟ್ಟಿತ್ತು.

ಹೀಗಾಗಿ ಶನಿವಾರದ ಹೋರಾಟ ಕುತೂಹಲದ ಗಣಿಯಾಗಿದೆ. ಗುರುವಾರ ನಡೆದ ಎರಡನೇ ಕ್ವಾಲಿಫೈಯರ್‌ ಹಣಾಹಣಿಯಲ್ಲಿ ಫಾರ್ಚೂನ್‌ಜೈಂಟ್ಸ್‌ 38–31 ಪಾಯಿಂಟ್ಸ್‌ನಿಂದ ಯು.ಪಿ.ಯೋಧಾ ತಂಡವನ್ನು ಪರಾಭವಗೊಳಿಸಿತು.

Tags

Related Articles

Leave a Reply

Your email address will not be published. Required fields are marked *

Language
Close