About Us Advertise with us Be a Reporter E-Paper

Breaking Newsದೇಶಪ್ರಚಲಿತ

ರಾಕೇಶ್ ಅಸ್ತನಾ ಅರ್ಜಿ ವಜಾಗೊಳಿಸಿ, ತನಿಖೆಗೆ ಗಡವು ವಿಧಿಸಿದ ದೆಹಲಿ ಹೈಕೋರ್ಟ್

ದೆಹಲಿ: ತಮ್ಮ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದು ಕೋರಿ ರಾಕೇಶ್ ಅಸ್ತನಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ರದ್ದು ಮಾಡಿದೆ.​

ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತನಾ, ಡಿಎಸ್​ಪಿ ದೇವೇಂದ್ರ ಕುಮಾರ್ ಸೇರಿ ಇತರರ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್​ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ​ ಶುಕ್ರವಾರ ವಜಾಗೊಳಿಸಿ, 10 ವಾರದೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಸಿಬಿಐಗೆ ಸೂಚಿಸಿದೆ.

ಸರ್ಕಾರದ ಅನುಮತಿ ಪಡೆಯದೆ ಅಲೋಕ್ ವರ್ಮಾ ಆಜ್ಞೆ ಮೇರೆಗೆ ದಾಖಲಿಸಲಾಗಿರುವ ಎಫ್​ಐಆರ್​ ಅನ್ನು ರದ್ದುಗೊಳಿಸಬೇಕು ಎಂಬ ರಾಕೇಶ್ ಅಸ್ತನಾ ನಿಲುವನ್ನು ತಿರಸ್ಕರಿಸಿದ ನ್ಯಾಯಾಲಯ ಅಪರಾಧ ಕಂಡು ಬಂದರೆ ತನಿಖೆ ನಡೆಯಲೇಬೇಕು ಎಂದು ಹೇಳಿತು.

Tags

Related Articles

Leave a Reply

Your email address will not be published. Required fields are marked *

Language
Close