About Us Advertise with us Be a Reporter E-Paper

Breaking Newsದೇಶಪ್ರಚಲಿತ

ನನಗೆ ಮತ್ತು ನನ್ನ ಸಮುದಾಯಕ್ಕೆ ರಕ್ಷಣೆ ಒದಗಿಸಿ: ಇಕ್ಬಾಲ್ ಅನ್ಸಾರಿ

ಲಖನೌ: ಅಯೋಧ್ಯೆ ರಾಮ ಜನ್ಮಭೂಮಿ ಭೂ ವಿವಾದ ಪ್ರಕರಣದಲ್ಲಿ ಕಕ್ಷಿದಾರರಲ್ಲೊಬ್ಬರಾಗಿರುವ ಇಕ್ಬಾಲ್ ಅನ್ಸಾರಿ ಅಯೋಧ್ಯೆಯಲ್ಲಿನ ಮುಸ್ಲಿಂ ಸಮುದಾಯಕ್ಕೆ ರಕ್ಷಣೆ ನೀಡಬೆಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ. ಇದೇ ನವಂಬರ್. 25ರಂದು ವಿವಿಧ ರಾಜಕೀಯ ಪಕ್ಷಗಳು ಮತ್ತು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಅಯೋಧ್ಯೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಭದ್ರತೆಗೆ ಮನವಿ ಸಲ್ಲಿಸಿದ್ದಾರೆ.

1992ರಲ್ಲಿ ನಾವು ವಿವಾದಿತ ಸ್ಥಳಕ್ಕೆ ಹೋಗದೇ ಇದ್ದರೂ ನಮ್ಮ ಮನೆಗಳನ್ನು ಸುಟ್ಟು ಹಾಕಲಾಯಿತು. ನಾನು ಇಲ್ಲಿನ ಹಿಂದೂ ಮುಸ್ಲಿಮರಿಬ್ಬರಿಗೂ ಭದ್ರತೆ ಒದಗಿಸುವಂತೆ ಕೋರುತ್ತೇನೆ. 1992ರಲ್ಲಿ ಆದಂತೆ ನ.25ರಂದು ಅಯೋಧ್ಯೆಗೆ ಜನಸಾಗರವೇ ಹರಿದು ಬರುವ ಸಾಧ್ಯತೆಗಳಿದ್ದು ನನಗೆ ಮತ್ತು ನನ್ನ ಸಮುದಾಯಕ್ಕೆ ರಕ್ಷಣೆ ಒದಗಿಸಬೇಕು ಎಂದರು.

ನನ್ನ ಭದ್ರತೆಗೆ ಇಬ್ಬರು ಭದ್ರತಾ ಸಿಬಂದಿಗಳನ್ನು ನಿಯೋಜಿಸಲಾಗಿದೆ. ಆದರೆ ನನ್ನನ್ನು ಕಾಣಲು ಅನೇಕ ಜನರು ಬರುತ್ತಿದ್ದಾರೆ. ಮೇಲಾಗಿ ನ.25ರಂದು ಬೃಹತ್ ಪ್ರಮಾಣದಲ್ಲಿ ಜನರು ಆಗಮಿಸುವ ಸಾಧ್ಯತೆಗಳಿದ್ದು, ನನ್ನ ಭದ್ರತೆಯನ್ನು ಹೆಚ್ಚಿಸದಿದ್ದರೆ ಇಲ್ಲಿಂದ ಬೇರೆ ಸ್ಥಳಕ್ಕೆ ಹೋಗಬೇಕಾದೀತು ಎಂದಿದ್ದಾರೆ.

ಹೂಂಕಾರ ರ‍್ಯಾಲಿ
ನ.25ರಂದು ಆಯೋಧ್ಯೆಗೆ ತೆರಳುವುದಾಗಿ ಈಗಾಗಲೇ ಆರ್‌ಎಸ್‌ಎಸ್, ಶಿವ ಸೇನೆ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವಾರು ಸಂಘಟನೆಗಳು ಘೋಷಿಸಿವೆ.

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ನ.25ರಂದು ‘ಹೂಂಕಾರ’ ರ‍್ಯಾಲಿ ನಡೆಸುವುದಾಗಿ ಸಂಘ ಪರಿವಾರ ಘೋಷಿಸಿದೆ. ತಾವೂ ಸಹ ಅಯೋಧ್ಯೆಗೆ ಹೋಗುವುದಾಗಿ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಪ್ರಕಟಿಸಿದ್ದಾರೆ. ಅಯೋಧ್ಯೆಯಲ್ಲಿನ ನಿವಾಸಿಗಳು ಆತಂಕಪಡುವ ಅವಶ್ಯಕತೆ ಇಲ್ಲ. ನ.25ರಂದು ಯಾವುದೇ ಅನಾಹುತಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಶಿವಸೇನೆ ಭರವಸೆ ನೀಡಿದೆ.

Tags

Related Articles

Leave a Reply

Your email address will not be published. Required fields are marked *

Language
Close