About Us Advertise with us Be a Reporter E-Paper

ಅಂಕಣಗಳು

ನೆರೆ ಪೀಡಿತ ಜನರ ರಕ್ಷಣೆ ಮಾಡಿ

ರಾಜ್ಯದೆಲ್ಲೆಡೆ ವರುಣನ ಅಬ್ಬರ ಜೋರಾಗಿಯೇ ಆಗುತ್ತಿದೆ. ಇದು ರೈತರಿಗೆ ಆಶಾದಾಯಕ ಮತ್ತು ಸಂತಸದ ವಿಚಾರ. ಕೆಲವು ಕಡೆ ನಿರೀಕ್ಷೆಗಿಂತ ಹೆಚ್ಚು ಮಳೆಯಾಗುತ್ತಿದ್ದರೆ, ಇನ್ನೂ ಕೆಲವೆಡೆ ಸ್ವಲ್ಪ ಮಟ್ಟಿನ ಕೊರತೆ ಕಂಡುಬಂದಿದೆ. ಆದಾಗ್ಯೂ ಒಕ್ಕಲುತನಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ, ಮತ್ತೊಂದೆಡೆ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣೆ, ಕಾವೇರಿ, ಕಪಿಲೆ, ನೇತ್ರಾವತಿ, ತುಂಗಭದ್ರಾ, ಕುಮಾರಧಾರದಂತಹ ನದಿಗಳು ತುಂಬಿ ಹರಿಯುತ್ತಿವೆ. ಅಣೆಕಟ್ಟೆಗಳು ಭರ್ತಿಯಾಗಿ ಹೆಚ್ಚುವರಿಯಾದ ನೀರನ್ನು ಹೊರ ಬಿಡಲಾಗುತ್ತಿರುವ ಪರಿಣಾಮ ಹಲವು ಕಡೆ ಪ್ರವಾಹವೂ ಉಂಟಾಗಿದೆ. ಕೆರೆ ಕಟ್ಟೆಗಳು ಕೋಡಿ ಬಿದ್ದು ಸುತ್ತಮುತ್ತಲಿನ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪರಿಸ್ಥಿತಿ ಹೀಗಿರುವಾಗ ನೆಮ್ಮದಿಯ ಮಳೆ ಬರುತ್ತಿದೆಯಲ್ಲಾ ಎಂದು ಮೈಮರೆತು ಕುಳಿತುಕೊಳ್ಳುವಂತಿಲ್ಲ. ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸರಕಾರ ಧಾವಿಸುವ ಕೆಲಸ ಜರೂರಾಗಿ ಆಗಬೇಕಿದೆ. ಸ್ಥಳೀಯ ಮಟ್ಟದಿಂದ ರಾಜ್ಯಮಟ್ಟದವರೆಗಿನ ಅಽಕಾರಿ ವರ್ಗ ನಾಲ್ಕು ಗೋಡೆಯೊಳಗಿನ ಕಚೇರಿ ಎಂಬ ಪಂಜರದಿಂದ ಹೊರ ಬಂದು ಸಂತ್ರಸ್ತರಿಗೆ ಪರಿಹಾರಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಿದೆ. ವಿಶೇಷವಾಗಿ ಮಲೆನಾಡು, ಉತ್ತರ ಕರ್ನಾಟಕ, ಕರಾವಳಿ, ಹಳೆಯ ಮೈಸೂರು ಭಾಗದ ಹಲವು ಜಿಲ್ಲೆಗಳಲ್ಲಿ ತಲೆದೋರಿರುವ ಪ್ರವಾಹದಲ್ಲಿ ಸಿಲುಕಿ ನರಳುತ್ತಿರುವವರಿಗೆ ಸಾಂತ್ವನ ನೀಡಬೇಕು. ಮನೆ, ಮಠ ಕಳೆದುಕೊಂಡಿರುವ ಸಾವಿರಾರು ಕುಟುಂಬಗಳಿಗೆ ಪುನರ್‌ವಸತಿ ಕಲ್ಪಿಸಬೇಕು, ಪ್ರವಾಹ ಮುನ್ಸೂಚನೆ ಇರುವ ಪ್ರದೇಶಗಳ ಜನರು ಪ್ರವಾಹಕ್ಕೆ ಸಿಲುಕಿ ಸಾವು-ನೋವು ಸಂಭವಿಸುವ ಮುನ್ನವೇ ಅವರನ್ನು  ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ಇನ್ನು ಜನಪ್ರತಿನಿಽಗಳು ಮತ್ತು ರಾಜಕಾರಣಿಗಳು ನಗರ ಸ್ಥಳೀಯ ಸಂಸ್ಥೆ ಮತ್ತು ಲೋಕಸಭೆ ಚುನಾವಣೆ ಗುಂಗಿನಲ್ಲಿ ಈ ನೆರೆ ಪೀಡಿತ ಪ್ರದೇಶಗಳ ಜನರನ್ನು ಮತಗಳಿಕೆಯ ದಾಳವಾಗಿ ಬಳಸಿಕೊಳ್ಳಬಾರದು. ಆಡಳಿತ ಪಕ್ಷಗಳಿಗೆ ಇದು ಒಂದು ರೀತಿಯ ಸವಾಲಿನ ಪರಿಸ್ಥಿತಿ. ಎಲ್ಲಿಯಾದರೂ ಸ್ವಲ್ಪ ಲೋಪವಾದರೂ ಜನರು ಮತ್ತು ಪ್ರತಿಪಕ್ಷದ ಕೆಂಗಣ್ಣಿಗೆ ಗುರಿಯಾಗುವುದು ಒಂದು ಕಡೆಯಾದರೆ, ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ರಾಜಕೀಯವನ್ನು ಬದಿಗಿಟ್ಟು ಸರಕಾರದ ಎಲ್ಲಾ ಸಚಿವರೂ ತಮ್ಮ ತಮ್ಮ ಜಿಲ್ಲೆಗಳ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿ ಅಽಕಾರಿಗಳಿಂದ ಪರಿಹಾರ ಕಾರ್ಯಾಚರಣೆ ಆಗುವಂತೆ ನೋಡಿಕೊಳ್ಳಬೇಕು. ಅದೇ ರೀತಿ, ಪ್ರತಿಪಕ್ಷವೂ ಮತಗಳಿಕೆ ಯತ್ನಕ್ಕೆ ಕೈ ಹಾಕದೇ ಲೋಪವಿದ್ದರೆ ತಿದ್ದಿ ಹೇಳಿ ಸಂತ್ರಸ್ತ ಜನರ ರಕ್ಷಣೆಗೆ ಧಾವಿಸಬೇಕು. ಈ ಮೂಲಕ ಎಲ್ಲಾ ಪಕ್ಷಗಳೂ ಒಗ್ಗಟ್ಟಿನಿಂದ ಸಂತ್ರಸ್ತ ಜನರ ನೆರವಿಗೆ ಧಾವಿಸಬೇಕು. ಇದು ಎಲ್ಲಾ ಪಕ್ಷಗಳ ಮತ್ತು ಜನಪ್ರತಿನಿಽಗಳ ಕರ್ತವ್ಯವೂ ಹೌದು.

Tags

Related Articles

Leave a Reply

Your email address will not be published. Required fields are marked *

Language
Close