ಸಿಎಂ ವಿರುದ್ದ ಬಂಡಾಯವೆದ್ದ ಕಾಂಗ್ರೆಸ್ ಕಾರ್ಯಕರ್ತರು

Posted In : ಕಲಬುರಗಿ, ತುಮಕೂರು, ಮಂಡ್ಯ, ರಾಜ್ಯ

ಕಲಬುರಗಿ: ಶಾಸಕರ ಸಚಿವ ಸ್ಥಾನಕ್ಕೆ ಕುತ್ತು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯಾದಾಧ್ಯಂತ ಹಲವು ಶಾಸಕರ ಬೆಂಬಲಿಗರಿಂದ ಸರಕಾರದ ವಿರುದ್ದ ಪ್ರತಿಭಟನೆ ತೀರ್ವಗೊಂಡಿದೆ. ರಾಜ್ಯ ಸರಕಾರದ ಈ ನಿಲುವಿಗೆ ಬೇಸರಗೊಂಡ ಕನಿಷ್ಟ 14 ರಿಂದ 18 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ಅಪಜಲಪುರ ಶಾಸಕ ಮಾಲೀಕಯ್ಯ ಗುತ್ತೆದಾರ್ ಬೆಂಬಲಿಗರಿಂದ ಕೆಎಸ್ಆರ ಟಿಸಿ ಸ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಅಪಜಲಪುರ ಶಾಸಕ ಗುತ್ತೆದಾರ್ ಐದು ಬಾರಿ ಕಾಂಗ್ರೆಸ್ ನಿಂದ ಆಯ್ಕೆ ಯಾಗಿದ್ದರೂ ಅವರಿಗೆ ಸಚಿವ ನೀಡದಿರುವ ರಾಜ್ಯ ಸರಕಾರದ ನಡೆಯನ್ನು ವಿರೋಧಿಸಿ ಅವರ ಬೆಂಬಲಿಗರು ಫರಹತಾಬಾದ್ ಬಳಿ ಬಸ್ ಗೆ ಬೆಂಕಿಹಚ್ಚಿ ಸರಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಕೈತಪ್ಪಲು ಮಲ್ಲಿಕಾರ್ಜುನ ಖರ್ಗೆಯೇ ಕಾರಣವೆಂದು ಬೆಂಬಲಿಗರು ದೂರಿದ್ದಾರೆ.  

ಇನ್ನು ಮಂಡ್ಯ, ಕಲಬುರ್ಗಿ ಹಾಗೂ ತಮುಕೂರಿನಲ್ಲೂ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು ಕಲಬುರಗಿಯ ಸರ್ದಾರ್ ವಲ್ಲಭಾಯ್ ಪಟೇಲ್ ವೃತ್ತದ ಬಳಿ ಬೈಕ್ ಹೊತ್ತಿಸಿದ ಖಮರುಲ್ಲಾ ಇಸ್ಲಾಂ ಬೆಂಬಲಿಗರು ಸಿದ್ದರಾಮಯ್ಯ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಇಲ್ಲೂ ಖರ್ಗೆ ವಿರುದ್ದ ಆಕ್ರೋಷವ್ಯಕ್ತ ಪಡಿಸಿದ್ದಾರೆ. ಮಂಡ್ದಲ್ಲಿ ಸಚಿವ ಅಂಬರೀಷ್ ಬೆಂಬಲಿಗರೊಬ್ಬರು ಸೀಮೆಎಣ್ಣೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತುಮಕೂರಿನಲ್ಲೂ ಮದುಗಿರಿ ಶಾಸಕ ಕೆ.ಎನ್ ರಾಜಣ್ಣರಿಗೆ ಸಚಿವ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.  
 

One thought on “ಸಿಎಂ ವಿರುದ್ದ ಬಂಡಾಯವೆದ್ದ ಕಾಂಗ್ರೆಸ್ ಕಾರ್ಯಕರ್ತರು

  1. GUTTEDARA GUMPU SASDHISUVADADARU YENIDE!! KELAVE SAMAYA BAAKI IRUVADARINDA INTHA PRACHODANEGALU YELLINDALO NADEYUTTIRUTTAVE!! APARADHI TADAMADI KANUUUNIONA KKSHEGE BARABAHUDALLA!!!

Leave a Reply

Your email address will not be published. Required fields are marked *

four × four =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top