ವಿಶ್ವವಾಣಿ

ಸಿಲಿಕಾನ್ ಸಿಟಿಯಲ್ಲಿ ಸೈಕೋ ಕಾಟ; ಬೆಚ್ಚಿಬಿದ್ದ ಮಹಿಳೆಯರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಸೈಕೋ ಕಾಟ ಬೆಳಕಿಗೆ ಬಂದಿದ್ದು, ಸೈಕೋ ಕಾಟಕ್ಕೆ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ.

ನಡುರಸ್ತೆಯಲ್ಲಿ ಬೆತ್ತಲೆ ನಿಂತು ಅಸಭ್ಯವಾಗಿ ವರ್ತನೆ ತೋರಿದ ಕಾಮುಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಹಮ್ಮದ್ ಸಿದ್ದಿಕ್ ಬಂಧಿತ ಆರೋಪಿ. ಬೆಂಗಳೂರಿನ ಆರ್.ಟಿ ನಗರದಲ್ಲಿ ಸಂಜೆ ವೇಳೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದ ಸೈಕೋ ಕೆಲ ಮನೆಗಳಿಗೆ ಆಯುರ್ವೇದಿಕ್ ಡಾಕ್ಟರ್‌ ಎಂದು ಹೋಗಿ ಮಹಿಳೆಯರ ಎದುರು ಅಸಭ್ಯವಾಗಿ ವರ್ತಿಸುತ್ತಿದ್ದ.

ಇನ್ನು ಈ ಸೈಕೋನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸೈಕೋ ವರ್ತನೆಗೆ ಬೇಸತ್ತ ಆರ್.ಟಿ ನಗರ ಮಹಿಳೆಯರು ಸೈಕೋನನ್ನ ರೆಡ್ ಹ್ಯಾಂಡಾಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಬಳಿಕ ಹೊಯ್ಸಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.