ಬೆಂಗಳೂರು: ವೇತನ ತಾರತಮ್ಯ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ಪಿಯು ಉಪನ್ಯಾಸಕರು ಮತ್ತು ಪ್ರಾಂಶುಪಾಲರು, ಸರಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳದಿದ್ದರೆ ಮೌಲ್ಯಮಾಪನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಆನಂದ್ರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕರು ಮಂಗಳವಾರ ದೇಶದೆಲ್ಲೆಡೆ ಶಿವರಾತ್ರಿ ಸಂಭ್ರಮವಾದರೆ, ನಮ್ಮ ಪಾಲಿಗೆ ಕರಾಳ ಶಿವರಾತ್ರಿಯಾಗಿದೆ. ನಮ್ಮ ವೇತನದಲ್ಲಿ ಸಾಕಷ್ಟು ತಾರತಮ್ಯವಿದೆ. ಸರಕಾರ ಇದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಸುತ್ತೇವೆ. ಮೌಲ್ಯಮಾಪನವನ್ನೂ ಬಹಿಷ್ಕರಿಸುವುದಾಗಿ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.
ಎಸ್ಮಾ ಜಾರಿ ಮಾಡಿದರೂ, ನಮ್ಮನ್ನು ಜೈಲಿಗೆ ತಳ್ಳಿದರೂ ನಾವು ಬಗ್ಗಲ್ಲ. ಬೇಡಿಕೆ ಈಡೇರಿರುವವರೆಗೆ ಪ್ರತಿಭಟನೆ ಮುಂದು ವರೆಸುತ್ತೇವೆ ಎಂದು ತಿಳಿಸಿದ್ದಾರೆ.