About Us Advertise with us Be a Reporter E-Paper

Breaking Newsಕ್ರೀಡೆ
Trending

ಪುಜಾರಾ ಆಟವನ್ನು ಶ್ಲಾಘಿಸಿದ ಸಚಿನ್‌, ಸೆಹ್ವಾಗ್‌, ಲಕ್ಷ್ಮಣ್‌, ವಾನ್‌

ಸ್ಮರಣೀಯ ಶತಕ ಬಾರಿಸಿದ ಭಾರತ ಕ್ರಿಕೆಟ್‌ ತಂಡದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರಾ ಆಟದ ಕುರಿತು ಹಿರಿಯ ಆಟಗಾರರಿಂದ ಶ್ಲಾಘನೆಯ ಮಹಾಪೂರ ಹರಿದುಬಂದಿದೆ.

“ಸಂಕಲ್ಪ ತೊಟ್ಟಿದ್ದ ಚೇತೇಶ್ವರ್‌ ಪೂಜಾರಾ ಆಟ ನೋಡವುದು ಸಂತಸ ನೀಡಿದೆ. ಮಹತ್ವದ ಇನಿಂಗ್ಸ್‌, ಪಂದ್ಯ ಸಾಕಷ್ಟು ಮುಕ್ತವಾಗಿದೆ” ಎಂದು ಮಾಜಿ ನಾಯಕ ಸಚಿನ್‌ ತೆಂಡೂಲ್ಕರ್‌ ಟ್ವೀಟ್ ಮಾಡಿದ್ದಾರೆ.

“ಕೆಲವೇ ಕೆಲವು ಇನಿಂಗ್ಸ್‌ಗಳು ನಿಮಗೆ ಅವಿಸ್ಮರಣೀಯ ಅನುಭೂತಿ ನೀಡುತ್ತವೆ. ಪುಜಾರಾ ಇನಿಂಗ್ಸ್‌ ಇದರಲ್ಲಿ ಒಂದಾಗಿದ್ದು ಸುದೀರ್ಘಕಾಲ ನೆನಪಲ್ಲಿರಲಿದೆ” ಎಂದು ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ.

 

“ಚೇತೇಶ್ವರ್‌ ಆಡಿದ ರೀತಿಯನ್ನು ಪ್ರೀತಿಸುತ್ತೇನೆ. ಟೆಸ್ಟ್‌ ಕ್ರಿಕೆಟ್ ಹೇಗೆ ಆಡಬೇಕು ಅನ್ನುವುದನ್ನು ಅವರು ತೋರಿಸುತ್ತಿದ್ದಾರೆ. ಫೆಂಟಾಸ್ಟಿಕ್‌” ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್‌ ತಿಳಿಸಿದ್ದಾರೆ.

“ತಂಡದಿಂದ ಕೈಬಿಡಲಾಗಿತ್ತು. ಮರಳಿ ಬಂದ ಕೂಡಲೇ ಕೊಲಂಬೋದ ಹಸಿರು ಪಿಚ್‌ನಲ್ಲಿ ಶತಕ ಬಾರಿಸಿ ಅಜೇಯರಾಗುಳಿದರು. ಎಡ್ಜ್‌ಬಾಸ್ಟನ್‌ ಪಂದ್ಯಕ್ಕೆ ಕೈಬಿಡಲಾಗಿತ್ತು, ನಾಟಿಗ್‌ಹ್ಯಾಮ್‌ನಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇಲ್ಲಿ ಶತಕ. ಎಲ್ಲಕ್ಕಿಂತ ಮೊದಲು ಪುಜಾರಾರನ್ನು ಏಕೆ ಕೈಬಿಡಲಾಗುತ್ತದೆ?” ಎಂದು ತಂಡದ ಮಾಜಿ ನಾಯಕ ಆಕಾಶ್‌ ಚೋಪ್ರಾ ತಂಡದ ಮ್ಯಾನೇಜ್‌ಮೆಂಟ್‌ಗೆ ಗಂಭೀರವಾದ ಪ್ರಶ್ನೆ ಎಸೆದಿದ್ದಾರೆ.

“ಒತ್ತಡದ ನಡುವೆ ಅದ್ಭುತ ಆಟವನ್ನು ಪುಜಾರಾ ಆಡಿದ್ದಾರೆ. ಪಂದ್ಯದಲ್ಲಿ ಭಾರತದ ಸಾಧ್ಯತೆಗಳನ್ನು ಜೀವಂತವಿಡಲು ಅವರು ಆಡಿದ ಆಟ ನೋಡಿ ಖುಷಿಯಾಗಿದೆ. ನಿಜಕ್ಕೂ ಅತ್ಯುತ್ತಮ ಆಟ” ಎಂದು ವಿವಿಎಸ್‌ ಲಕ್ಷ್ಮಣ್‌ ತಿಳಿಸಿದ್ದಾರೆ.

ನಾಲ್ಕನೇ ಟೆಸ್ಟ್‌ನ ತನ್ನ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ 246ರನ್‌ ಗುರಿ ಬೆನ್ನತ್ತಿದ್ದ ಭಾರತ ಒಂದು ಹಂತದಲ್ಲಿ 195ರನ್‌ ಆಗುವಷ್ಟರಲ್ಲಿ ಎಂಟು ವಿಕೆಟ್‌ ಕಳೆದುಕೊಂಡು ಇನಿಂಗ್ಸ್‌ ಹಿನ್ನಡೆ ಭೀತಿ ಎದುರಿಸಿತ್ತು. ಆದರೆ ಈ ಹಂತದಲ್ಲಿ 9ನೇ ವಿಕೆಟ್‌ಗೆ ಇಶಾಂತ್‌ ಶರ್ಮಾರೊಂದಿಗೆ 32 ರನ್‌ ಹಾಗು 10ನೇ ವಿಕೆಟ್‌ ಜಸ್ಪ್ರೀತ್‌ ಬುಮ್ರಾ ಜತೆಗೆ 46ರನ್‌ಗಳ ಅಮೋಘ ಜತೆಯಾಟವಾಡಿದ ಪೂಜಾರಾ, ತಂಡಕ್ಕೆ 27ರನ್‌ಗಳ ಅಮೂಲ್ಯ ಮುನ್ನಡೆ ದಕ್ಕಿಸಿಕೊಟ್ಟಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close