About Us Advertise with us Be a Reporter E-Paper

Breaking Newsದೇಶ
Trending

ನಾಯಿಮರಿಗಳನ್ನು ಸಾಯಿಸಿದ ಹಾವು, ತಾಯಿ ಶ್ವಾನದ ಆರ್ತನಾದ ಕಂಡು ಮರುಗಿದ ಜನ

ಭದ್ರಾಕ್: ತಾಯಿಗೆ ಮಕ್ಕಳೆಂದರೆ ಅತೀವ ಪ್ರೀತಿ, ಮಮತೆ. ಇದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಕೂಡ ತಾಯಿ-ಮಗುವಿನ ಮಮಕಾರವಿದೆ. ಮಕ್ಕಳಿಗಾಗಿ ಪ್ರಾಣಿಗಳೂ ಕೂಡ ಹಂಬಲಿಸುತ್ತವೆ.

ಒಡಿಶಾದ ಭದ್ರಾಕ್‍‍ನಲ್ಲಿ ಶ್ವಾನವೊಂದು ಐದು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ದುರದೃಷ್ಟವಶಾತ್ ಅಲ್ಲಿಗೆ ನಾಗರಹಾವೊಂದು ಎಂಟ್ರಿ ಕೊಟ್ಟಿದೆ. ಇದನ್ನು ನೋಡಿದ ಶ್ವಾನ ಹಾವಿನೊಂದಿಗೆ ಯುದ್ಧಕ್ಕೆ ನಿಂತಿತ್ತು. ಹಾವನ್ನು ಕಂಡು ಜೋರಾಗಿ ಬೊಗಳಲು ಶುರು ಮಾಡಿದೆ. ಕೂಡಲೇ ಅಲ್ಲಿದ್ದ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದ್ರೆ ಅವರು ಬಹಳ ತಡವಾಗಿ ಬಂದಿದ್ದರಿಂದ ಅಷ್ಟೊತ್ತಿಗಾಗಲೇ ಹಾವು ಕಡಿತದಿಂದ ನಾಲ್ಕು ಮರಿಗಳು ಮೃತಪಟ್ಟಿದ್ದವು. ಒಂದು ನಾಯಿಮರಿ ಮಾತ್ರ ಬದುಕುಳಿದಿದೆ.

ಬಹುಶಃ ಅರಣ್ಯ ಇಲಾಖೆ ಸಿಬ್ಬಂದಿ ಸ್ವಲ್ಪ ಬೇಗ ಬಂದಿದ್ದರೆ ನಾಲ್ಕೂ ನಾಯಿಮರಿಗಳು ಬದುಕುಳಿಯುತ್ತಿತ್ತು ಅಂತಾ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬದುಕುಳಿದಿರುವ ನಾಯಿಮರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close