About Us Advertise with us Be a Reporter E-Paper

ಅಂಕಣಗಳು

ಪ್ರಧಾನಿ ವಿದೇಶ ಯಾತ್ರೆ ಹೋಗುವುದು ತಪ್ಪಲ್ಲ , ಹೋಗದಿರುವುದು!

ಪ್ರಧಾನಿ ನರೇಂದ್ರ ಮೋದಿ ಅವರು ಆಗಾಗ ವಿದೇಶ ಪ್ರವಾಸಕ್ಕೆ ಹೋಗುವುದರಿಂದ, ಅವರಿಗೆ ವಿದೇಶ ಪ್ರವಾಸದ ಹುಚ್ಚು ಅಥವಾ ವ್ಯಾಮೋಹ ಎಂದು ಕೆಲವರು ಭಾವಿಸಿದ್ದಿರಬಹುದು. ಆದರೆ, ಅಮೆರಿಕ ಹಾಗೂ ರಷ್ಯಾ ಅಧ್ಯಕ್ಷರಿಗೆ ಹೋಲಿಸಿದರೆ ಮೋದಿ ಅವರ ವಿದೇಶ ಪ್ರವಾಸ ಕಡಿಮೆಯೇ.

 ವಿದೇಶ ಪ್ರವಾಸ ಹೋಗುವುದೆಂದರೆ, ಮೋಜು, ಮಸ್ತಿಗೆಂದು ಭಾವಿಸುವ ಮೂರ್ಖರಿದ್ದಾರೆ. ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸದಲ್ಲಿದ್ದಾಗ ಅವರ ಕಾರ್ಯಕ್ರಮ ಪಟ್ಟಿಯಲ್ಲಿ ಬಿಡುವೇ ಇರುವುದಿಲ್ಲ. ಅವರು ಯಾವುದೇ ದೇಶಕ್ಕೆ ಹೋದರೂ ವಿಹಾರಕ್ಕೆ ಹೋಗುವುದಿಲ್ಲ, ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಸಹ ಸಮಯವಿರುವುದಿಲ್ಲ. ಅಧಿಕೃತ ಕಾರ್ಯಕ್ರಮದ ಹೊರತಾಗಿ ಅವರು ಬೇರೆ ಯಾವುದಕ್ಕೂ ಆಸ್ಪದ ನೀಡುವುದಿಲ್ಲ.

ಮೊನ್ನೆ ಅವರು ರವಾಂಡಕ್ಕೆ ಹೋದಾಗಲೂ ಹಾಗೇ ಆಯಿತು. ಕಿಗಾಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ಸಾಯಂಕಾಲ ಐದೂವರೆ  ಮೋದಿ ಅವರು ನೇರವಾಗಿ ಅಧ್ಯಕ್ಷರ ನಿವಾಸಕ್ಕೆ ತೆರಳಿ ಎರಡು ತಾಸು ನಾಲ್ಕು ಬೇರೆ- ಬೇರೆ ಮಾತುಕತೆಗಳಲ್ಲಿ ಪಾಲ್ಗೊಂಡರು. ಹಲವು ಒಪ್ಪಂದಗಳಿಗೆ ಸಹಿ ಹಾಕಿದರು. ಆ ನಂತರ ರಾತ್ರಿ ಒಂಬತ್ತೂವರೆಗೆ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತಾಡಿದರು. ಅಂದು ಅವರು ಮಲಗಿದಾಗ ರಾತ್ರಿ ಹನ್ನೆರಡು ದಾಟಿರಬಹುದು.

ಮರುದಿನ ಏಳು ಗಂಟೆಯಿಂದ ಅವರ ಅಧಿಕೃತ ಕಾರ್ಯಕ್ರಮ ಶುರು. ಮಧ್ಯಾಹ್ನ ಮೂರು ಗಂಟೆಗೆ ಉಗಾಂಡಕ್ಕೆ ತೆರಳುವವರೆಗೆ ಎಂಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಡಾ.ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ  ನಾಲ್ಕಕ್ಕಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಅಲ್ಲದೇ ವಿಮಾನದಿಂದ ಇಳಿದವರು ಹೋಟೆಲ್‌ಗೆ ಹೋಗಿ ಲಘು ವಿಶ್ರಾಂತಿ ಪಡೆದು, ಫ್ರೆಶ್ ಅಪ್ ಆಗಿ ಹೊರ ಬೀಳುತ್ತಿದ್ದರು. ಮೋದಿ ಅವರು ವಿಮಾನದಿಂದ ಇಳಿದವರೇ ‘ಬಿಜಿನೆಸ್’ ಶುರು ಮಾಡುತ್ತಾರೆ. ರಾತ್ರಿ ಹನ್ನೊಂದರವರೆಗೆ ಬಿಡುವಿಲ್ಲದೇ ಒಂದರ ಹಿಂದೆ ಮತ್ತೊಂದು ಕಾರ್ಯಕ್ರಮ ಜೋಡಣೆಯಾಗಿರುತ್ತದೆ.

ಮೋದಿಯವರ ವಿದೇಶ ಪ್ರವಾಸದ ವೈಶಿಷ್ಟ್ಯವೆಂದರೆ, ಅವರು ಪ್ರಯಾಣದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ. ಹತ್ತು-ಹನ್ನೆರಡು ತಾಸು ಪ್ರವಾಸ ಮಾಡುವಾಗ, ಐದು ತಾಸಿಗಿಂತ ಹೆಚ್ಚು ಕಾಲ  ದಿಲ್ಲಿಯ ತಮ್ಮ ಕಾರ್ಯಾಲಯದಲ್ಲಿದ್ದಾಗ ಹೇಗೆ ಕೆಲಸ ಮಾಡುತ್ತಾರೋ, ಅದೇ ರೀತಿ ವಿಮಾನದೊಳಗಿರುವ ತಮ್ಮ ಕಚೇರಿಯಲ್ಲಿ ಕಾರ್ಯಮಗ್ನರಾಗಿರುತ್ತಾರೆ. ಹೀಗಾಗಿ ಅವರು ದಿಲ್ಲಿಯಲ್ಲಿರಲಿ, ವಿಮಾನದಲ್ಲಿರಲಿ ಅಥವಾ ಇನ್ನಿತರೆಡೆ ಇರಲಿ ಹೆಚ್ಚಿನ ಫರಕು ಆಗುವುದಿಲ್ಲ. ವಿಮಾನ ಪ್ರಯಾಣದಲ್ಲಿದ್ದಾಗ ಫೈಲ್‌ಗಳನ್ನು ನೋಡಲು, ಕ್ಲಿಯರ್ ಮಾಡಲು ಸಾಕಷ್ಟು ಸಮಯ ಸಿಗುತ್ತದೆ. ದಿಲ್ಲಿಯಲ್ಲಿರುವಾಗ ಸಿಗುವುದಕ್ಕಿಂತ ಹೆಚ್ಚಿನ ಸಮಯ ವಿದೇಶಯಾತ್ರೆ ಸಂದರ್ಭದಲ್ಲಿ ವಿಮಾನದಲ್ಲಿ ಸಿಗುತ್ತದೆ. ಇದನ್ನು ಅವರು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. ಪ್ರಧಾನಿಯಾದವರು ವಿದೇಶಿ ಪ್ರವಾಸ ಮಾಡಿದಾಗ, ಪ್ರತಿ ಕ್ಷಣವೂ  ರೀತಿಯಲ್ಲಿ ಆಯೋಜಿಸಲಾಗಿರುತ್ತದೆ. ವ್ಯಾಪಾರ-ವ್ಯವಹಾರ, ವಾಣಿಜ್ಯಕ್ಕೆ ಸಂಬಂಧಿಸಿದ ಹತ್ತಾರು ಒಪ್ಪಂದ, ಮಾತುಕತೆಗಳಾಗುತ್ತವೆ. ವಿಚಾರ ವಿನಿಮಯಗಳಾಗುತ್ತವೆ. ಇದರ ಪ್ರಯೋಜನ ಅಷ್ಟಿಷ್ಟಲ್ಲ. ಅವುಗಳನ್ನು ಅಳೆಯಲಾಗದು. ಪ್ರಧಾನಿಯವರು ಬೇರೆ ದೇಶಗಳಲ್ಲಿ ಇದ್ದಷ್ಟು ಹೊತ್ತು ಆ ದೇಶದ ಗಮನವೆಲ್ಲ ಪ್ರಧಾನಿ ಹಾಗೂ ಭಾರತದ ಕಡೆ ಇರುತ್ತದೆ. ಸ್ವಾಭಾವಿಕವಾಗಿ ಎರಡು ದೇಶಗಳ ಜನರೂ ಹತ್ತಿರವಾಗುತ್ತಾರೆ. ಮೊನ್ನೆ ಮೋದಿಯವರಿಗೆ ರವಾಂಡದಲ್ಲಿ ಭಾರತೀಯ ರಾಯಭಾರಿ ಕಚೇರಿ ಮಹತ್ವ ಅರಿವಾಯಿತು. ತಕ್ಷಣ ಅವರು ಅದನ್ನು ಆರಂಭಿಸುವಂತೆ ಆದೇಶಿಸಿದರು. ಇದಕ್ಕೂ ಮುನ್ನ ರವಾಂಡದ  ಭಾರತಕ್ಕೆ ಬರಲು ಉಗಾಂಡ ಅಥವಾ ಕೀನ್ಯಾದಲ್ಲಿರುವ ರಾಯಭಾರಿ ಕಚೇರಿ ಮೂಲಕ ವಿಸಾ ಪಡೆಯಬೇಕಿತ್ತು. ಇನ್ನು ಮುಂದೆ ಅವರು ಅದನ್ನು ರವಾಂಡದಲ್ಲಿಯೇ ಪಡೆಯಲಿದ್ದಾರೆ. ಮೋದಿ ಆ ದೇಶಕ್ಕೆ ಹೋಗದಿದ್ದರೆ, ಈ ಕಚೇರಿ ಆರಂಭವಾಗಲು ಇನ್ನೆಷ್ಟು ವರ್ಷಗಳು ಕಾಯಬೇಕಿತ್ತೋ?

‘ಮನೆ ಮಗ ಕೂತು ಕೆಟ್ಟ, ಮಗಳು ತಿರುಗಿ ಕೆಟ್ಟಳು’ ಎಂಬ ಗಾದೆ ಕೇಳಿರಬಹುದು. ಪ್ರಧಾನಿಯಾದವರು ರೆಕ್ಕೆ ಕಟ್ಟಿಕೊಂಡು ಹಾರುತ್ತಿರಬೇಕು. ಅವರು ವಿದೇಶ ಪ್ರವಾಸ ಮಾಡಿದಷ್ಟೂ ಅದರ ಲಾಭ ಭಾರತಕ್ಕೆ. ಅದರಲ್ಲೂ ಮೋದಿಯವರು  ದೇಶಕ್ಕೆ ಹೋದರೂ, ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತಾಡುವುದರಿಂದ ಅವರ ನೈತಿಕತೆ ವೃದ್ಧಿಸುತ್ತದೆ. ಅವರಲ್ಲಿ ತಮ್ಮ ಬಗ್ಗೆ ಹಾಗೂ ಭಾರತದ ಬಗ್ಗೆ ಹೊಸ ಆತ್ಮವಿಶ್ವಾಸ ಮೂಡುತ್ತದೆ. ಪ್ರಧಾನಿಯವರ ಈವರೆಗಿನ ವಿದೇಶ ಪ್ರವಾಸದಿಂದ 1,300 ಚಿಲ್ಲರೆ ಕೋಟಿ ರುಪಾಯಿ ಖರ್ಚಾಯಿತೆಂದು ಟೀಕಿಸುವ ಅವಿವೇಕಿಗಳಿದ್ದಾರೆ. ಒಂದು ವೇಳೆ ಅವರು ಆ ಯಾವ ದೇಶಗಳಿಗೂ ಹೋಗದೇ ದಿಲ್ಲಿಯಲ್ಲೇ ಉಳಿದಿದ್ದರೆ, ಅಷ್ಟು ಹಣ ಉಳಿಸಬಹುದಿತ್ತು ಅಲ್ಲವಾ ಅಂದರೆ, ‘ನಾನು ಹೇಳಿದ್ದು ಆ ಅರ್ಥದಲ್ಲಿ ಅಲ್ಲ’ ಎಂದು ‘ರಾಗ’  ಪ್ರಧಾನಿಯವರು ಯಾವುದೇ ದೇಶಕ್ಕೆ ಹೋಗಲಿ, ದೇಶದಲ್ಲೇ ಸುತ್ತಾಡಲಿ, ಹಣ ಖರ್ಚಾಗುತ್ತದೆ. ಸುತ್ತಾಡದಿದ್ದರೆ ಇನ್ನೂ ಹೆಚ್ಚು ಹಾನಿಯಾಗುತ್ತದೆಂಬುದು ಗೊತ್ತಿರಬೇಕು. ಮತ್ತೇನಲ್ಲದಿದ್ದರೂ, ಮೋದಿ ಅವರ ವಿದೇಶ ಪ್ರಯಾಣದಿಂದ ಜಗತ್ತಿನಲ್ಲಿ ಭಾರತದ ವರ್ಚಸ್ಸು ಹೆಚ್ಚಿದೆ. ಮೋದಿಗೆ ವಿಶ್ವಮಾನ್ಯತೆ ದೊರಕಿದೆ. ಅದರ ಪ್ರಯೋಜನ ಭಾರತಕ್ಕೇ ಸಿಗುತ್ತದೆ.

‘ಮೋದಿಯವರು ಹೆಚ್ಚು ವಿದೇಶ ಪ್ರಯಾಣ ಮಾಡುತ್ತಾರೆ’ ಎಂಬುದು ಟೀಕೆಯ ವಸ್ತುವಾಗುವ ಬದಲು ‘ಮೋದಿ ವಿದೇಶಿ ಪ್ರಯಾಣ ಮಾಡುವುದು ಸಾಕಾಗೊಲ್ಲ’ ಎಂದು ಪ್ರತಿಪಕ್ಷಗಳ ನಾಯಕರು ಟೀಕಿಸಬೇಕು. ಇನ್ನೂ ನಮ್ಮ  ಯಾವ ಕಾಲದಲ್ಲಿ ಇದ್ದಾರೋ?

ಮೋದಿ ಪ್ರಭಾವಿ ಭಾಷಣಕಾರ, ಹೇಗೆ?

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರವಾಣಿಯಿಂದ ಮಾತಾಡಲು ಸಾಧ್ಯವಾಗಿರುವುದಕ್ಕೆ ಮುಖ್ಯ ಕಾರಣ ಅವರು ಇಂಗ್ಲಿಷಿನಲ್ಲಿ ಮಾತಾಡದಿರುವುದು. ಅವರಿಗೆ ಚೆನ್ನಾಗಿ ಗೊತ್ತಿದೆ, ತಮ್ಮ ಇಂಗ್ಲಿಷ್ ಪ್ರಬುದ್ಧವಾಗಿಲ್ಲ ಅಥವಾ ಚೆನ್ನಾಗಿಲ್ಲವೆಂದು. ಅವರು ಗುಜರಾತಿ ್ಚ್ಚಛ್ಞಿಠಿ ನಲ್ಲಿ ಇಂಗ್ಲಿಷ್ ಮಾತಾಡುತ್ತಾರೆ. ಕೆಲವು ಪದ, ಉಚ್ಚಾರ ವಿಚಿತ್ರವಾಗಿ ಕೇಳಿಸುತ್ತದೆ. ನಿರಂತರವಾಗಿ, ದೀರ್ಘಕಾಲ ಇಂಗ್ಲಿಷಿನಲ್ಲಿ ಸಂವಾದ ನಡೆಸುವುದರಲ್ಲಿ ಅವರಿಗೆ ್ಚಟಞ್ಛಟ್ಟಠ್ಞಿಛಿ ಇರುವುದಿಲ್ಲ. ಈ ಬಗ್ಗೆ ಅವರಿಗೆ ಸ್ವಲ್ಪವೂ  ಅದಕ್ಕಿಂತ ಹೆಚ್ಚಾಗಿ ಅವರು ಇದನ್ನು ತಮ್ಮ ಪರವಾದ ತುರುಫನ್ನಾಗಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಪ್ರಭಾವಿ ಭಾಷಣಕಾರ, ಧೀಮಂತ ನಾಯಕ ಎಂದು ಕರೆಯಿಸಿಕೊಂಡಿದ್ದಾರೆ. ಇಂಗ್ಲಿಷ್‌ನಲ್ಲಿ ಮಾತಾಡದಿದ್ದರೂ ಈ ಅಗ್ಗಳಿಕೆಗೆ ಪಾತ್ರರಾಗಿರುವುದು ಅವರ ವೈಶಿಷ್ಟ್ಯ.

ಪ್ರಧಾನಿ ಮೋದಿ ಎಲ್ಲಿ ಹೋದರೂ ತಮ್ಮ ಅಸ್ಖಲಿತ ಹಿಂದಿಯಲ್ಲಿ ಮಾತಾಡುತ್ತಾರೆ. ತಮ್ಮ ಮಾತುಗಳನ್ನು ಭಾಷಾಂತರಿಸಲು ಜತೆಯಲ್ಲಿ ದುಭಾಷಿಗಳನ್ನು ಇಟ್ಟುಕೊಂಡಿರುತ್ತಾರೆ. ಇದರಿಂದ ಅವರಿಗೆ ಅನಿಸಿದ್ದನ್ನು ಸಮರ್ಥವಾಗಿ, ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಹೇಳಲು ಸಹಾಯಕವಾಗಿದೆ. ಇದು  ಬಲಹೀನತೆಯಾಗುವ ಬದಲು ವರದಾನವಾಗಿದೆ.

ಇತ್ತೀಚೆಗೆ ರವಾಂಡ ಹಾಗೂ ಉಗಾಂಡದಲ್ಲಿ ಉಭಯ ದೇಶಗಳ ಉದ್ದಿಮೆದಾರರನ್ನುದ್ದೇಶಿಸಿ ಮೋದಿಯವರು ಹಿಂದಿಯಲ್ಲೇ ಮಾತಾಡಿದರು. ಇಂಥ ವೇದಿಕೆಯಲ್ಲಿ ಪ್ರಧಾನಿ ಅಥವಾ ಅಧ್ಯಕ್ಷರಾದವರು ಸಾಮಾನ್ಯವಾಗಿ ಇಂಗ್ಲಿಷಿನಲ್ಲಿ ಸಿದ್ಧಪಡಿಸಿದ ಭಾಷಣವನ್ನು ಓದುತ್ತಾರೆ. ಮೋದಿಯವರಿಗೆ ಸಿದ್ಧ ಭಾಷಣ ಓದುವುದೆಂದರೆ ಅಲರ್ಜಿ. ಅವರಿಗೆ ಹಿಂದಿ ಮೇಲೆ ಒಳ್ಳೆಯ ಹಿಡಿತವಿರುವುದರಿಂದ ಆಶು ಭಾಷಣ ಮಾಡಲು ಬಯಸುತ್ತಾರೆ. ಅವರಿಗೆ ಇಂಗ್ಲಿಷಿನಲ್ಲಿ ಆಶು ಭಾಷಣ ಸ್ವಲ್ಪ ಕಷ್ಟವಾಗಬಹುದು. ಒಂದು ವೇಳೆ ಕಷ್ಟವಾಗದಿದ್ದರೂ, ಹಿಂದಿಯಲ್ಲಿ ಮಾತಾಡಿದಷ್ಟು ಲೀಲಾಜಾಲವಾಗಿ  ಇದಾವುದರ ಉಸಾಬರಿಯೇ ಬೇಡವೆಂದು ಅವರು ದುಭಾಷಿ ನೆರವಿನೊಂದಿಗೆ ಹಿಂದಿಯಲ್ಲೇ ಮಾತಾಡುತ್ತಾರೆ.

ಮೋದಿ ಹಿಂದಿಯಲ್ಲಿ ಮಾತಾಡುವುದಕ್ಕಿಂತ ಮುನ್ನ ಸಂಘಟಕರು, ‘ಪ್ರಧಾನಿಯವರ ಮಾತುಗಳನ್ನು ಇಂಗ್ಲಿಷ್ ಅನುವಾದದಲ್ಲಿ ಕೇಳಬಯಸುವವರು ಇಯರ್‌ಫೋನ್‌ಗಳನ್ನು ಬಳಸಬಹುದು’ ಎಂದು ಸೂಚಿಸುತ್ತಾರೆ. ಮೋದಿ ಅವರ ಹಿಂದಿಯನ್ನು ನುರಿತ ಅನುವಾದಕರು ಅಷ್ಟೇ ಪರಿಣಾಮಕಾರಿಯಾಗಿ ಇಂಗ್ಲಿಷಿನಲ್ಲಿ ಹೇಳುವುದರಿಂದ ಅವರ ಮಾತು ಗಾಢವಾಗಿ ತಟ್ಟುತ್ತದೆ.

ಹೀಗಾಗಿ ಅವರು ಏನು ಹೇಳಬೇಕೋ ಅದನ್ನೇ ಹೇಳುತ್ತಾರೆ. ಇಂಗ್ಲಿಷಿನಲ್ಲಿ ಏನನ್ನೋ ಹೇಳಲು ಹೋಗಿ ಇನ್ನೇನೋ ಹೇಳುವುದಿಲ್ಲ ಅಥವಾ ಅವರ  ಅಪಾರ್ಥ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಅಷ್ಟಾಗಿಯೂ ಯಡವಟ್ಟಾದರೆ, ಅನುವಾದಕರ ಮೇಲೆ ಹಾಕಬಹುದು.

ಚೀನಾ ನಾಯಕರೂ ಇದೇ ‘ತಂತ್ರ’ ಬಳಸುತ್ತಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಭಾಷೆಯಲ್ಲೇ ಮಾತಾಡುತ್ತಾರೆ. ಇದು ಆಯಾ ನಾಯಕರ ಭಾಷಾ ಪ್ರೇಮದ ದ್ಯೋತಕವೂ ಹೌದು. ಕೆಲ ಸಂದರ್ಭಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಸಹ ಇಂಗ್ಲಿಷ್ ಬದಲು ರಷ್ಯನ್ ಭಾಷೆಯಲ್ಲೇ ಮಾತಾಡುತ್ತಾರೆ.

ಇದು ನಮ್ಮ ರಾಜ್ಯದ ನಾಯಕರಿಗೂ ಪ್ರೇರಣೆಯಾಗಬೇಕು. ಎಸ್.ಎಂ ಕೃಷ್ಣ ಅವರ ನಂತರ ಮುಖ್ಯಮಂತ್ರಿಯಾದ ಎಲ್ಲ ನಾಯಕರ  ಅಷ್ಟಕ್ಕಷ್ಟೆ. ಬಾಯಿಬಿಟ್ಟರೆ ಬಣ್ಣಗೇಡು! ಈ ಸಂಗತಿ ಅವರೆಲ್ಲರಿಗೂ ಗೊತ್ತಿದೆ. ಆದರೂ ಕೆಟ್ಟ ಇಂಗ್ಲಿಷಿನಲ್ಲೇ ಮಾತಾಡಿ ಮುಖ ಕೆಡಿಸಿಕೊಳ್ಳುತ್ತಾರೆ. ಅದರ ಬದಲು ಅನುವಾದಕರ ಸಹಾಯ ಪಡೆದು ಅಚ್ಚ, ಶುದ್ಧ ಕನ್ನಡದಲ್ಲಿ ಮಾತಾಡಬಹುದಲ್ಲ? ಇದರಿಂದ ಅವರ ಗ್ರೇಡ್ ಕಡಿಮೆಯಾಗುವುದಿಲ್ಲ. ಅಷ್ಟಕ್ಕೂ ಕಸಿವಿಸಿಯಾದರೆ. ‘ನಾನು ಇಂಗ್ಲಿಷ್‌ನಲ್ಲಿ ಮಾತಾಡಬಲ್ಲೆ. ಆದರೆ ಮಾತೃಭಾಷೆ ಮೇಲಿನ ಪ್ರೀತಿಯಿಂದ ಕನ್ನಡದಲ್ಲಿ ಮಾತಾಡುತ್ತಿದ್ದೇನೆ’ ಎಂದು ಹೇಳಿದರೆ ಎಲ್ಲರೂ ಅಭಿಮಾನ ಪಡುತ್ತಾರೆ. ವಿದೇಶಿ ಗಣ್ಯರು ಬಂದಾಗಲೂ ರಾಜ್ಯದ ಮುಖ್ಯಮಂತ್ರಿಯವರು ಕೆಟ್ಟ ಇಂಗ್ಲಿಷಿನಲ್ಲಿ  ಮರ್ಯಾದೆ ಕಳಕೊಳ್ಳುವ ಬದಲು ಅನುವಾದಕರ ನೆರವಿನಿಂದ ಕನ್ನಡದಲ್ಲೇ ಮಾತಾಡಬಹುದು.

ಆದರೆ ಈ ವಿಷಯದಲ್ಲಿ ಮೋದಿಯವರನ್ನು ಅನುಸ(ಕ)ರಿಸಿದಂತಾಗುವುದಿಲ್ಲವೇ ಎಂದು ಅನಿಸಿದರೂ ಪರವಾಗಿಲ್ಲ. ಕಾರಣ ಅದಕ್ಕಿಂತ ಹೆಚ್ಚಾಗಿ ಅವರ ಮರ್ಯಾದೆಯಾದರೂ ಉಳಿಯುವುದಲ್ಲ!

ವಿದೇಶಯಾತ್ರೆ: ಅವರು-ಇವರು!

ಮೋದಿ ಅವರ ವಿದೇಶ ಪ್ರವಾಸದಿಂದ ದೇಶದ ಬೊಕ್ಕಸಕ್ಕೆ ಇಷ್ಟು ಖರ್ಚಾಯಿತು ಎಂದು ಟೀಕಿಸುವವರು ಕೂಪಮಂಡೂಕಗಳು. ಪ್ರಧಾನಿಯವರು ದೇಶದ ಪ್ರತಿನಿಧಿಯಾಗಿ ವಿದೇಶ ಪ್ರವಾಸ ಮಾಡಬೇಕಾದುದು ಅನಿವಾರ್ಯ. ಬ್ರಿಕ್‌ಸ್, ಜಿ-20, ಯುಎನ್ ಜನರಲ್ ಅಸೆಂಬ್ಲಿ, ಕಾಮನ್‌ವೆಲ್‌ತ್ ಶೃಂಗಸಭೆ, ಆಸಿಯಾನ  ಸೇರಿದಂತೆ ಪ್ರಧಾನಿಯವರು ಪ್ರತಿವರ್ಷ ಹೋಗಲೇಬೇಕಾದ, ಭಾಗವಹಿಸಲೇಬೇಕಾದ ಹದಿನಾಲ್ಕು ಶೃಂಗಸಭೆಗಳಿವೆ.

ಈ ಸಂದರ್ಭದಲ್ಲಿ ಹತ್ತಾರೂ ದೇಶಗಳ ಪ್ರಮುಖರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ. ಇದನ್ನು ತಪ್ಪಿಸಿಕೊಳ್ಳುವಂತಿಲ್ಲ. ತಪ್ಪಿಸಿಕೊಳ್ಳಲೂಬಾರದು. ಈ ಸದವಕಾಶಕ್ಕಾಗಿ ಎಲ್ಲ ದೇಶಗಳ ಪ್ರಮುಖರೂ ಹಾತೊರೆಯುತ್ತಾರೆ. ಮೋದಿಯವರಿದ್ದರೆ ಮಾತ್ರ ಅಲ್ಲ, ಯಾರೇ ಪ್ರಧಾನಿಯಾಗಿದ್ದರೂ, ಭಾಗವಹಿಸಲೇಬೇಕು. ಒಂದು ವೇಳೆ ಅಂಥ ಶೃಂಗದಲ್ಲಿ ಪಾಲ್ಗೊಳ್ಳದಿದ್ದರೆ ಅದರ ಹಾನಿ ಪ್ರಧಾನಿಗಲ್ಲ, ಭಾರತಕ್ಕೆ.

ಡಾ. ಮನಮೋಹನ ಸಿಂಗ್ ಅವರು ಕಾಲಕಾಲಕ್ಕೆ ವಿದೇಶ ಪ್ರವಾಸ ಮಾಡುತ್ತಿದ್ದರು. ಅವರು  ಬಂದಿದ್ದು ಗೊತ್ತಾಗುತ್ತಿರಲಿಲ್ಲ. ಆದರೂ ಡಾ. ಸಿಂಗ್ ಅವರಿಗಿಂತ ಮೋದಿಯವರೇ ವಿದೇಶದಲ್ಲಿ ಹೆಚ್ಚು ಕಾಲ ಇರುತ್ತಾರೆಂಬ ಅಭಿಪ್ರಾಯವಿದೆ.

ಡಾ. ಸಿಂಗ್ ಅವರು ಎರಡನೆ ಅವಧಿಗೆ ಪ್ರಧಾನಿಯಾಗಿ ಪುನರಾಯ್ಕೆಯಾದ ಮೊದಲ ವರ್ಷ, 111 ದಿನಗಳನ್ನು ವಿದೇಶ ಯಾತ್ರೆಯಲ್ಲೇ ಕಳೆದಿದ್ದರು. ಇದು ಒಳ್ಳೆಯ ಬೆಳವಣಿಗೆ. ‘ಡಾ. ಸಿಂಗ್ ವಿದೇಶಯಾತ್ರೆ ಹೋಗಲು ಇಷ್ಟಪಡುತ್ತಾರೆ. ಕಾರಣ ಕನಿಷ್ಠ ಅಲ್ಲಿ ಅವರಿಗೆ ಮೌನ ಮುರಿಯುವ ಅವಕಾಶವಾದರೂ ಸಿಗುತ್ತದೆ’ ಎಂದು ಚಟಾಕಿ ಹಾರಿಸುತ್ತಿದ್ದರು.

ಡಾ. ಸಿಂಗ್ ಅವರು ಹತ್ತು  ಕಾಲ ಪ್ರಧಾನಿಯಾಗಿದ್ದ ಅವಧಿಯಲ್ಲಿ ಒಂದು ಸಲವೂ ಮಧ್ಯ ಏಷಿಯಾದ ದೇಶಗಳಿಗೆ ಹೋಗಲಿಲ್ಲ. ಆದರೆ, ಮೋದಿ ಅವರು ಈ ನಾಲ್ಕು ವರ್ಷಗಳಲ್ಲಿ ಹನ್ನೊಂದು ಸಲ ಹೋಗಿ ಬಂದಿದ್ದಾರೆ.

ಡಾ. ಸಿಂಗ್ ಅವರಿಗೆ ಯುರೋಪ್ ಹಾಗೂ ಅಮೆರಿಕದ ದೇಶಗಳೆಂದರೆ ಪಂಚಪ್ರಾಣವಾಗಿತ್ತು. ಅವರು ಹತ್ತು ವರ್ಷಗಳಲ್ಲಿ ಒಟ್ಟು 109 ಸಲ ಈ ಎರಡು ಖಂಡಗಳ ದೇಶಗಳಿಗೆ ಹೋಗಿದ್ದರು. ಮೋದಿ ಅವರು ಈ ನಾಲ್ಕೂ ಕಾಲು ವರ್ಷಗಳಲ್ಲಿ ಮೂವತ್ತೈದು ಸಲ ಹೋಗಿದ್ದಾರೆ. ಇನ್ನೊಂದು ಅವಧಿಗೆ  ಆರಿಸಿ ಬಂದರೂ ಡಾ. ಸಿಂಗ್ ದಾಖಲೆ ಮುರಿಯುವುದು ಕಷ್ಟ.

ಪ್ರಧಾನಿಯಾದವರಿಗೆ ವಿದೇಶಾಂಗ ವ್ಯವಹಾರಗಳಲ್ಲಿ ಆಸಕ್ತಿಯಿರಬೇಕು. ಜವಾಹರಲಾಲ್ ನೆಹರು ಅವರಿಗೆ ಈ ಖಾತೆ ಅತ್ಯಂತ ಪ್ರೀತಿಯದ್ದಾಗಿತ್ತು. ಅವರು ಈ ಖಾತೆಯನ್ನು ಹಲವು ವರ್ಷ ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದರು. ಹಾಗೆ ನೋಡಿದರೆ, ಈ ಖಾತೆ ಪ್ರಧಾನಿ ಮೂಗಿನಡಿಯಲ್ಲೇ ಕಾರ್ಯನಿರ್ವಹಿಸಬೇಕಾದುದು ಸೂಕ್ತ.

ಮೋದಿಯವರು ತಿಂಗಳಲ್ಲಿ ಒಂದು ಸಲವಾದರೂ ವಿದೇಶ ಪ್ರವಾಸ ಹೋಗದಿದ್ದರೆ ಟೀಕಿಸಬೇಕು, ಆಗಾಗ ಹೋಗುತ್ತಿದ್ದರೆ ಪ್ರಶಂಸಿಸಬೇಕು. ಆದರೆ, ಅವರ ಟೀಕಾಕಾರರು ಮಾಡುತ್ತಿರುವುದು  ಉಲ್ಟಾ!

ಸದಾ ಒಂದಕ್ಕಿಂತ ಹೆಚ್ಚು

ಪ್ರಧಾನಿ ಮೋದಿ ಅವರ ವಿದೇಶ ಯಾತ್ರೆಯ ವೈಶಿಷ್ಟ್ಯವೆಂದರೆ ಅವರು ಯಾವತ್ತೂ ಒಂದೇ ದೇಶಕ್ಕೆ ಹೊಗುವುದಿಲ್ಲ. ಎರಡು ಅಥವಾ ಅದಕ್ಕಿಂತ ಹೆಚ್ಚು ದೇಶಗಳನ್ನು ಜೋಡಿಸಿಕೊಂಡು ಹೋಗುತ್ತಾರೆ.

ಮೊನ್ನೆ ಆಫ್ರಿಕಾ ಖಂಡದ ರವಾಂಡ, ಉಗಾಂಡ ಹಾಗೂ ದಕ್ಷಿಣ ಆಫ್ರಿಕಾವನ್ನು ಸೇರಿಸಿಕೊಂಡು ಹೋಗಿದ್ದರು. ಮೂಲತಃ ಅವರು ಬ್ರಿಕ್‌ಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾಕ್ಕೆ ಹೋಗಲೇ ಬೇಕಿತ್ತು. ಅದರೆ ಜತೆಯಲ್ಲಿ ಅಕ್ಕ-ಪಕ್ಕದ ರವಾಂಡ ಹಾಗೂ ಉಗಾಂಡವನ್ನೂ ಸೇರಿಸಿಕೊಂಡರು. ಈ  ದೇಶಗಳೂ ಭಾರತದ ಜತೆಗೆ ಉತ್ತಮ ಸಂಬಂಧ ಹೊಂದಿದೆಯಲ್ಲದೇ, ಹೊಸ ಆರ್ಥಿಕತೆಗೆ ತೆರೆದುಕೊಳ್ಳುತ್ತಿವೆ. ಅಲ್ಲದೇ ರವಾಂಡಕ್ಕೆ ಭಾರತದ ಪ್ರಧಾನಿ ಈ ತನಕ ಭೇಟಿ ನೀಡಿರಲೇ ಇಲ್ಲ.

ಒಮ್ಮೆ ವಿದೇಶ ಪ್ರವಾಸ ಹೊರಟರೆ ಒಂದಕ್ಕಿಂತ ಹೆಚ್ಚು ದೇಶಗಳಿಗೆ ಭೇಟಿ ನೀಡುವ ಉದ್ದೇಶವೇನು ಎಂದು ಪತ್ರಕರ್ತರು ಮೋದಿಯವರನ್ನು ಕೇಳಿದ್ದರು. ಅದಕ್ಕೆ ಅವರು I am from Ahmedabad where we have a saying, single fare, double journey’’ ಎಂದರು.

ಆದರೆ ಇದು ತಮಾಷೆಯಲ್ಲ, ವಾಸ್ತವ. ಕೆಲವು ಸಲ ಮೋದಿಯವರು ಒಂದೇ ನೆಗೆತಕ್ಕೆ ಐದು ದೇಶಗಳಿಗೆ ಹೋಗಿ ಬಂದಿದ್ದು ಇದೆ.

ಮೋದಿ ವಿದೇಶ ಯಾತ್ರೆಯ ವಕ್ರತುಂಡೋಕ್ತಿಗಳು

ಮೋದಿ ಅವರ ವಿದೇಶ ಯಾತ್ರೆಯ ಕುರಿತು ಹಲವು ವಕ್ರತುಂಡೋಕ್ತಿಗಳನ್ನು ಸವಿಯಬಹುದಾದರೆ….

        ಜಗತ್ತಿನಲ್ಲಿ ಎರಡು ರೀತಿಯ ದೇಶಗಳಿವೆ. ಮೋದಿ ಭೇಟಿ ನೀಡಿದ್ದು ಹಾಗೂ ಅವರು ಭೇಟಿ ನೀಡದಿರುವುದು.

        ಮೋದಿ ಅವರು ಚುನಾವಣೆಯಲ್ಲಿ ಗೆದ್ದಿದ್ದಾರೋ ಅಥವಾ ಫಾರಿನ್ ಟೂರ್ ಪ್ಯಾಕೇಜ್‌ನ್ನೋ ಎಂಬುದು ಗೊತ್ತಾಗುವುದಿಲ್ಲ.

        ಭಾರತದ ಹಿಂದಿನ  ಮೊಬೈಲ್ ಸೈಲಂಟ್ ಮೋಡ್‌ನಲ್ಲಿ ಇರುತ್ತಿತ್ತು. ಈಗಿನವರದು ಫ್ಲೈಟ್ ಮೋಡ್.

       ಮೋದಿಯವರಿಗೆ ನಾಸಾ, ಇಸ್ರೋದ ಮೇಲೆ ನಂಬಿಕೆ ಇಲ್ಲ. ಭೂಮಿ ದುಂಡಗಿದೆಯೋ ಇಲ್ಲವೋ ಎಂಬುದನ್ನು ಖುದ್ದಾಗಿ ತಾವೇ ಪರೀಕ್ಷಿಸಲು ನಿರ್ಧರಿಸಿದ್ದಾರೆ.

    ಮೋದಿಯವರು ಆಗಾಗ ವಿದೇಶಗಳಿಗೆ ಹೋಗುವುದಿಲ್ಲ. ಬದಲು ಆಗಾಗ ಭಾರತಕ್ಕೆ ಬರುತ್ತಾರೆ.

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close