About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪತ್ರಕರ್ತ ಬಹ್ಲ್‌ ನಿವಾಸ, ಕಚೇರಿ ಮೇಲೆ ಐಟಿ ದಾಳಿ

ದೆಹಲಿ: ಸುದ್ದಿ ಮನೆಯಲ್ಲಿ ಹೆಸರು ಮಾಡಿದ ‘ದಿ ಕ್ವಿಂಟ್’ ಸಹ ಸಂಸ್ಥಾಪಕ ಹಾಗೂ ನೆಟ್‌ವರ್ಕ್ 18’ ಪ್ರಾಯೋಜಕ ರಾಘವ್ ಬಹ್ಲ್‌ ಅವರ ನಿವಾಸ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತೆರಿಗೆ ವಂಚನೆ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿರುವ ಅಧಿಕಾರಿಗಳು ಬಹ್ಲ್‌ ಅವರ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಮಾಹಿತಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಈ ದಾಳಿಯ ನಂತರ ಸಂಪಾದಕರ ಸಂಘಕ್ಕೆೆ ಪತ್ರ ಬರೆದಿರುವ ಬಹ್ಲ್‌, ‘ಗುರುವಾರ ಮುಂಜಾನೆ ಮುಂಬೈನಲ್ಲಿದ್ದಾಗ, 12ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ನಮ್ಮ ನಿವಾಸ ಮತ್ತು ಕ್ವಿಂಟ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ನಾವು ಎಲ್ಲ ತೆರಿಗೆಯನ್ನು ಪಾವತಿಸಿದ್ದು ಬಾಕಿ ಉಳಿಸಿಕೊಂಡಿರುವುದಿಲ್ಲ. ಈ ಸಂಬಂಧ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇವೆ. ಮನೆಯಲ್ಲಿರುವ ಕೆಲವು ಸೂಕ್ಷ್ಮ ಪತ್ರಿಕೋದ್ಯಮದ ಮಾಹಿತಿಗಳಿರುವ ದಾಖಲೆಗಳನ್ನು ಮುಟ್ಟಬೇಡಿ ಎಂದು ಅಧಿಕಾರಿಗಳಿಗೆ ವಿನಂತಿ ಮಾಡಿದ್ದೇನೆ. ಅವರು ಆ ದಾಖಲೆಗಳನ್ನು ವಶಪಡಿಸಿಕೊಂಡರೆ ಮರಳಿಸುವಂತೆ ಮನವಿ ಮಾಡುತ್ತೇನೆ. ನೀವು ಎಲ್ಲ ನನ್ನ ಬೆಂಬಲಕ್ಕೆೆ ನಿಲ್ಲುತ್ತೀರಿ ಎಂಬ ವಿಶ್ವಾಸವಿದೆ ಎಂದು ಭಾವಿಸುತ್ತೇನೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ದೇಶದ ಮಾಧ್ಯಮ ಜಗತ್ತಿನಲ್ಲಿ ರಾಘವ್ ಬಹ್ಲ್‌ ಅವರಿಗೆ ಉತ್ತಮ ಹೆಸರಿದೆ. ಈ ದಾಳಿಗೆ ಹಲವು ಹಿರಿಯ ಪತ್ರಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ, ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಈ ದಾಳಿ ಮಾಧ್ಯಮಗಳಿಗೆ ಹಾಕುವ ಬೆದರಿಕೆಯಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close