About Us Advertise with us Be a Reporter E-Paper

ದೇಶಪ್ರಚಲಿತ

ಕ್ವಿಟ್ ಇಂಡಿಯಾ ಚಳವಳಿಗೆ 76 ವರ್ಷ

ದೆಹಲಿ: ಕ್ವಿಟ್ ಇಂಡಿಯಾ ಚಳವಳಿ ನಡೆದು ಇಂದಿಗೆ 76 ವರ್ಷವಾಗಿದೆ. ಚಳವಳಿಯಲ್ಲಿ ‘ಮಾಡು ಇಲ್ಲವೆ ಮಡಿ’ ಎಂಬ  ಗಾಂಧೀಜಿಯ ಘೋಷವಾಕ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡಿದ್ದಾರೆ.

ಅಂದು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಎಲ್ಲ ದೇಶಭಕ್ತರ ಬಗ್ಗೆ ಮೋದಿ ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಂಡ ಮೋದಿ, ಚಳವಳಿಯಲ್ಲಿ ವಾಜಪೇಯಿ ಬರೆದಿದ್ದ ಕವಿತೆಯನ್ನು ಹಂಚಿಕೊಂಡಿದ್ದಾರೆ. 1946ರಲ್ಲಿ ಮದನ್ ಮೋಹನ್ ಮಾಳವೀಯ ಅವರ ಅಭ್ಯುದಯ ಪತ್ರಿಕೆಯಲ್ಲಿ ಈ ಕವಿತೆ ಪ್ರಕಟಗೊಂಡಿತ್ತು.

ಮಹಾತ್ಮ ಗಾಂಧಿ ನೇತೃತ್ವದಲ್ಲಿ ಮುಂಬಯಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ನಡೆಸಲಾಯಿತು. ಬ್ರಿಟೀಷರೇ ಭಾರತ ಬಿಟ್ಟು ತೊಲಗಿ. ಮಾಡು ಇಲ್ಲವೆ ಮಡಿ ಎಂಬ ಘೋಷವಾಕ್ಯವನ್ನು ಗಾಂಧೀಜಿ ಹೊರಡಿಸಿದರು. ಚಳವಳಿಯ ತೀವ್ರತೆ ಅರಿತ ಬ್ರಿಟೀಷರು ಪ್ರಮುಖ ನಾಯಕರನ್ನು ಜೈಲಿಗಟ್ಟಿದ್ದರು. ಇದರಿಂದ ಹೋರಾಟ ಮತ್ತಷ್ಟು ತೀವ್ರಗೊಂಡಿತು. ಈ ಚಳವಳಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close