About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ರಫೇಲ್ ಒಪ್ಪಂದ: ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು

ಮಾಜಿ ಸಂಸದ ಜಿ.ಎಸ್.ಬಸವರಾಜು ಹೇಳಿಕೆ

ತುಮಕೂರು: ಬಹು ಕೋಟಿ ರಫೇಲ್ ಯುದ್ದ ವಿಮಾನ ಖರೀದಿಯ ಒಪ್ಪಂದದಲ್ಲಿ ಅವ್ಯವಹಾರಗಳು ನಡೆದಿದೆ ಎಂದು ಕಾಂಗ್ರೆಸ್ ಪಕ್ಷವು ದೇಶದ ತುಂಬಾ ಸುಳ್ಳು ಆರೋಪ ಮಾಡುತ್ತಿದೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ದೂರಿದರು.

ನಗರದಲ್ಲಿ ಜಿಲ್ಲಾ ಬಿಜೆಪಿವತಿಯಿಂದ ಬುಧವಾರ ಕಾಂಗ್ರೆಸ್ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಜಗತ್ತನ್ನೆ ಭಾರತದತ್ತ ತಿರುಗುವಂತೆ ಮಾಡುತ್ತಿರುವ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಅತ್ಯಾಧುನಿಕ ಸುಸಜ್ಜಿತ ಗುಣ ಮಟ್ಟದ ಉನ್ನತಿ ಹೊಂದಿರುವ ಇದರಲ್ಲಿ ಯಾವುದೇ ಅನುಮಾನವಿಲ್ಲ ಅಪ್ರಬುದ್ದ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್‌ಗಾಂಧಿ ಸುಳ್ಳು ಆರೋಪ ಮಾಡುತ್ತಿದ್ದಾನೆ ಎಂದು ಹೇಳಿದರು.

ಮಾಜಿ ವಿಧಾನಪರಿಷತ್ ಸದಸ್ಯರಾದ ಡಾ॥ ಎಂ.ಆರ್.ಹುಲಿನಾಯ್ಕ್‌‌ರ್ ಮಾತನಾಡಿ, ಕಾಂಗ್ರೆಸ್ ಪಕ್ಷವು ರಕ್ಷಣಾ ವಿಷಯದಲ್ಲಿ ಹಲವು ಅವ್ಯವಹಾರಗಳನ್ನು ಹಿಂದಿನಿಂದ ಮಾಡಿಕೊಂಡು ಬಂದಿದ್ದು ಅದನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವನ್ನು ಅವ್ಯವಹಾರದಲ್ಲಿ ಸಿಲುಕಿಸುತ್ತಿರುವುದು ಖಂಡನಾರ್ಹವಾದದ್ದು ಕೇಂದ್ರ ಸರ್ಕಾರವು ಅತ್ಯಂತ ಪಾರದರ್ಶಕವಾಗಿ ರಫೇಲ್ ಒಪ್ಪಂದವನ್ನು ನಡೆಸಿದೆ ಎಂದು ಹೇಳಿದರು.

ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಮಾತನಾಡಿ, ಕಾಂಗ್ರೆಸ್‌ನ ಯುಪಿಎ ಸರ್ಕಾರವಿದ್ದಾಗ ನಡೆದ 2ಜಿ ಸೆಕ್ಟ್ರಂ, ಕಲ್ಲಿದ್ದಲು ನಂತಹ ದೊಡ್ಡ ಹಗರಣಗಳು ನಡೆದಾಗ ರಾಹುಲ್‌ಗಾಂಧಿ ಎಲ್ಲಿ ಹೋಗಿದ್ದರು. ನಿಖರವಾದ ಸರಿಯಾದ ಮಾಹಿತಿ ಇಲ್ಲದೆ ಕಾಂಗ್ರೆಸ್ ಸುಳ್ಳು ಹೇಳುವುದರ ಮೂಲಕ ನಮ್ಮ ರಕ್ಷಣಾ ಇಲಾಖೆಯನ್ನು ಅವಮಾನಿಸುತ್ತದೆ ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಗೋಪಾಲಗೌಡ ಮಾತನಾಡಿ, ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ರಫೇಲ್ ಖರೀದಿ ಅವ್ಯವಹಾರ ಕುರಿತು ತನಿಖೆ ಆಗಬೇಕೆಂದು ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಈಗಾಗಲೇ ತಿರಸ್ಕರಿಸಿದ್ದ, ಈ ಡೀಲ್‌ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close