About Us Advertise with us Be a Reporter E-Paper

Breaking Newsದೇಶಪ್ರಚಲಿತ

ರಫೇಲ್: ಭ್ರಷ್ಟಾಚಾರ ಅಂಶ ಕೈ ಬಿಟ್ಟಿದ್ದೇಕೆ..?

ದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಮತ್ತೆ ಪ್ರಧಾನಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದೆ. ರಪೇಲ್ ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಅಂಶಗಳನ್ನು ಕೈ ಬಿಟ್ಟಿದ್ದೇಕೆ ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಅಂಶಗಳನ್ನು ಕೈ ಬಿಡಲಾಗಿದೆ ಎಂದು ಆಂಗ್ಲ ಪತ್ರಿಕೆಯೊಂದರ ತನಿಖಾ ವರದಿಯ ಆಧಾರದ ಮೇಲೆ ರಾಹುಲ್ ಈ ಪ್ರಶ್ನೆ ಎತ್ತಿದ್ದು, ಪ್ರಧಾನಿ ಮೋದಿ ತನ್ನ ಮಿತ್ರ ಅನಿಲ್ ಅಂಬಾನಿ ಅವರಿಗೆ 30,000 ಕೋಟಿ ರು.ಗಳನ್ನು ದೋಚಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆಪಾದಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರೂ, ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, 126 ಯುದ್ಧ ವಿಮಾನಗಳಿಗೆ ತಗುಲುವ ವೆಚ್ಚವನ್ನು ಕೇವಲ 36 ವಿಮಾನಗಳಿಗೆ ನೀಡಿ ಡಸ್ಸಾಲ್ಟ್ ಸಂಸ್ಥೆಗೆ ಆಜೀವ ಪರ್ಯಂತ ಲಾಭ ಮಾಡಿಕೊಡಲಾಗಿದೆ ಎಂದಿದ್ದಾರೆ.

ಸರ್ಕಾರಿ ವ್ಯವಹಾರದಲ್ಲಿ ಪ್ರಧಾನಿ ಕಚೇರಿ ಖಾಸಗಿಯಾಗಿ ಚರ್ಚೆ ನಡೆಸುವ ಅವಶ್ಯಕತೆ ಏನಿತ್ತು? ಒಪ್ಪಂದದಲ್ಲಿ ಯಾವುದೇ ಅಧಿಕೃತ ಖಾತರಿ ಇಲ್ಲ, ಯಾವುದೇ ಬ್ಯಾಂಕಿನ ಖಾತರಿ ಇಲ್ಲ, ಅಧಿಕೃತ ಸ್ವೀಕೃತಿದಾರನೂ ಇಲ್ಲ. ಆದರೂ ಸಾವಿರಾರು ಕೋಟಿ ರು.ಗಳ ಪ್ರಮಾಣದಲ್ಲಿ ವ್ಯವಹಾರ ನಡೆದಿದೆ. ಈ ಒಪ್ಪಂದದಲ್ಲಿ ಪ್ರಧಾನಿ ಅವರ ಸ್ನೇಹಿತರಿಗೆ ಕಿಕ್ ಬ್ಯಾಕ್ ತಲುಪಿರುವುದು ಸ್ಪಷ್ಟವಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close