About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಫೇಲ್‌ ಖರೀದಿ: ಯುಪಿಎಗಿಂತಲೂ 9% ಕಡಿಮೆ ಖರ್ಚಿನಲ್ಲಿ ಡೀಲ್ ಮಾಡಿದ ಎನ್‌ಡಿಎ!

2011ರಲ್ಲಿ ಬಿಡ್‌ಅನ್ನು ಆರಂಭಿಸಿದಾಗ ಉದ್ದೇಶಿ ಬೆಲೆಯು, ಪ್ರತಿ ಯುದ್ಧ ವಿಮಾನಕ್ಕೆ 100.85 ದಶಲಕ್ಷ ಯೂರೋಗೆ ಏರಿಕೆ ಕಂಡಿತ್ತು.ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ,2016ರಲ್ಲಿ ಫ್ರಾನ್ಸ್‌ನೊಂದಿಗೆ ಮಾಡಿಕೊಂಡ ಅಂತರ ಸರಕಾರೀ ಮಟ್ಟದ ಒಪ್ಪಂದದ ಪ್ರಕಾರ, ಪ್ರತಿ ಯುದ್ಧ ವಿಮಾನದ ಬೆಲೆಯು 91.75 ದಶಲಕ್ಷ ಯೂರೋಗೆ ಇಳಿಕೆ ಕಂಡಿತು

ದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿಗೆ ಹಿಂದಿನ ಯುಪಿಎ ಸರಕಾರಕ್ಕಿಂತ ಶೇ 9 ರಷ್ಟು ಕಡಿಮೆ ಹಣ ತೆರುತ್ತಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ.

ರಫೇಲ್‌ ವಿಮಾನ ಖರೀದಿಯಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು ಎನ್‌ಡಿಎ ಸರಕಾರ ಈ ವಿಚಾರವಾಗಿ ಮಾಹಿತಿಯನ್ನು ಬಹಿರಂಗಪಡಿಸಲು, ಗೌಪ್ಯತೆಯ ಒಪ್ಪಂದ ದನೆವ ಹೇಳುತ್ತಿದೆ ಎಂದು ಕಾಂಗ್ರೆಸ್‌ ಆಪಾದನೆ ಮಾಡುತ್ತಿತ್ತು.

ಈ ಕುರಿತು ಸರಕಾರದ ಪ್ರತಿಕ್ರಿಯೆ ನೀಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್, “2007ರಲ್ಲಿ 126 ಯುದ್ಧ ವಿಮಾನಗಳ ಖರೀದಿಗೆ ಯುಪಿಎ ಸರಕಾರ ಬೆಲೆ ನಿಗದಿ ಮಾಡಿತ್ತು. ಇದರ ಪ್ರಕಾರ ಪ್ರತಿ ಯುದ್ಧ ವಿಮಾನವನ್ನು 79.3 ದಶಲಕ್ಷ ಯೂರೋಗಳನ್ನು ತೆರುವುದಲ್ಲದೇ ಕಾಲಾನುಕ್ರಮೇಣ ಬೆಲೆಏರಿಕೆಯ ಸಾಧ್ಯತೆಗೂ ಅವಕಾಶ ನೀಡಿತ್ತು. 2011ರಲ್ಲಿ ಬಿಡ್‌ಅನ್ನು ಆರಂಭಿಸಿದಾಗ ಉದ್ದೇಶಿ ಬೆಲೆಯು, ಪ್ರತಿ ಯುದ್ಧ ವಿಮಾನಕ್ಕೆ 100.85 ದಶಲಕ್ಷ ಯೂರೋಗೆ ಏರಿಕೆ ಕಂಡಿತ್ತು. ಆದರೆ ಇದನ್ನು ಅಂತಿಮಗೊಳಿಸಲಾಗಲಿಲ್ಲ. ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ,2016ರಲ್ಲಿ ಫ್ರಾನ್ಸ್‌ನೊಂದಿಗೆ ಮಾಡಿಕೊಂಡ ಅಂತರ ಸರಕಾರೀ ಮಟ್ಟದ ಒಪ್ಪಂದದ ಪ್ರಕಾರ, ಪ್ರತಿ ಯುದ್ಧ ವಿಮಾನದ ಬೆಲೆಯು 91.75 ದಶಲಕ್ಷ ಯೂರೋಗೆ ಇಳಿಕೆ ಕಂಡಿತು.ಹಾಗಾಗಿ, ಯುಪಿಎ ಸರಕಾರ ನಮೂದಿಸಿದ್ದ ಬೆಲೆಗಿಂತ 9%ನಷ್ಟು ಕಡಿಮೆ ಬೆಲೆಯಲ್ಲಿ ಯುದ್ಧವಿಮಾನ ಖರೀದಿಗೆ ಎನ್‌ಡಿಎ ಸರಕಾರ ಮುಂದಾಗಿದೆ. ಪ್ರತಿ ಯುದ್ಧವಿಮಾನಕ್ಕೆ 670.32 ಕೋಟಿ ರು ವೆಚ್ಚವಾಗಲಿದೆ ಎಂದು ಸಂಸತ್ತಿಗೆ ಕೇಂದ್ರ ಸರಕಾರ ತಿಳಿಸಿತ್ತು” ಎಂದು ಹೇಳಿದ್ದಾರೆ.

ಭಷ್ಟಾಚಾರದಲ್ಲಿ ಯುಪಿಎ ರೀತಿಯಲ್ಲೇ ಎನ್‌ಡಿಎ ಕೂಡಾ ಇದೇ ಎಂದು ಇಲ್ಲದ ಆಪಾದನೆಯನ್ನು ಸೃಷ್ಟಿಮಾಡಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದು ಪ್ರಸಾದ್ ಇದೇ ವೇಳೆ ಚಾಟಿ ಬೀಸಿದ್ದಾರೆ. ಗೌಪ್ಯತೆ ಕುರಿತ ಒಪ್ಪಂದವನ್ನು ಖುದ್ದು ಯುಪಿಎ ಸರಕಾರದ ಅವಧಿಯಲ್ಲೇ ಮಾಡಿಕೊಳ್ಳಲಾಗಿದ್ದು, ರಾಷ್ಟ್ರೀ ಭದ್ರತೆಯ ದೃಷ್ಟಿಯಿಂದ ಡೀಲ್‌ನ ರಹಸ್ಯವನ್ನು ಬಿಟ್ಟುಕೊಡಲಾಗದು ಎಂದು ಪ್ರಸಾದ್ ಹೇಳಿದ್ದಾರೆ.

“ಯುದ್ಧ ವಿಮಾನಗಳಿಗೆ ಹೆಚ್ಚುವರಿಯಾಗಿ ಅಳವಡಿಸಲಾಗಿರುವ ಶಸ್ತ್ರಾಸ್ತ್ರಗಳ ಕಾರಣ ಖರ್ಚಿನಲ್ಲಿ ಆದ ವ್ಯತ್ಯಗಳ ಲೆಕ್ಕಾಚಾರಗಳನ್ನು ಬಹಿರಂಗಪಡಿಸಿದ್ದಲ್ಲಿ, ಶತ್ರುಗಳಿಗೆ ನಮ್ಮ ರಕ್ಷಣಾ ಸಾಮರ್ಥ್ಯದ ಗೌಪ್ಯತೆಯನ್ನೂ ಬಿಟ್ಟುಕೊಟ್ಟಂತಾಗುತ್ತದೆ” ಎಂದು ಪ್ರಸಾದ್‌ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close