About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ರಫೇಲ್‌ ಡೀಲ್‌: ಭಾವನಿಗಾಗಿ ಮೊಸಳೆ ಕಣ್ಣೀರು ಸುರಿಸಿದರೇ ರಾಹುಲ್‌?

ದೆಹಲಿ: ರಫೇಲ್‌ ಖರೀದಿ ಸಂಬಂಧ ರಾಬರ್ಟ್‌ ವಾದ್ರಾಗೆ ಆಫ್‌ಸೆಟ್‌ ಡೀಲ್ ಕೈತಪ್ಪಿದ ಕಾರಣ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಈ ವಿಚಾರವಾಗಿ ಮೊಸಳೆ ಕಣ್ಣಿರು ಸುರಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರದ್ಧ ಸುಖಾ ಸುಮ್ಮನೇ ಬೊಬ್ಬೆ ಹಾಕುತ್ತಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಈ ಕುರಿತು ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, “ಇದರ  ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಘಟಬಂಧನ ಕೆಲಸ ಮಾಡುತ್ತಿದೆ” ಎಂದು ಆಪಾದನೆ  ಮಾಡಿದ್ದು, ಹಣಕಾಸು ಸಚಿವ ಅರುಣ್‌ ಜೇಟ್ಲಿ ಆಪಾದನೆಗೆ ಇನ್ನಷ್ಟು ಇಂಬು ನೀಡಿದ್ದಾರೆ.

ಫ್ರಾನ್ಸ್‌ನಿಂದ ರಫೇಲ್‌ ಬಾಂಬ್‌ ಬೀಳಲಿದೆ ಎಂದು ರಾಹುಲ್ ಗಾಂಧಿ ಸಾಕಷ್ಟು ಮುಂಚೆಯೇ ನಿರೀಕ್ಷಣಾ ಟ್ವೀಟ್‌ ಮಾಡಿದ್ದನ್ನು ಅರುಣ್‌ ಜೇಟ್ಲಿ ಉಲ್ಲೇಖಿಸಿ, ಫ್ರಾಂಕ್ವಾ ಹಲಂಡೆ ಹಾಗು ಗಾಂಧಿ ಪರಸ್ಪರ ಒಬ್ಬರ ಬೆನ್ನನ್ನು ಕೆರೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದ ವೇಳೆ ರಾಬರ್ಟ್‌ ವಾದ್ರಾ ಹಾಗು ಆತನ ಸಹಚರ ಸಂಜಯ್‌ ಭಂಡಾರಿ ಆಫ್‌ಸೆಟ್‌ ಡೀಲ್‌ನ ಭಾಗವೊಂದನ್ನು ಜೇಬಿಗಿಳಿಸುವ ಯತ್ನ ಮಾಡಿದ್ದರು ಎಂದು ಕೇಂದ್ರ ಸಚಿವ ಗಜೇಂದ್ರ ಶೆಖಾವತ್‌ ಬಲವಾದ ಆಪಾದನೆ ಮಾಡಿದ್ದಾರೆ.

“ವಾದ್ರಾಗೆ ವಿಮಾನದ ಟಿಕೆಟ್‌ ಬುಕ್‌ ಮಾಡುತ್ತಿದ್ದ ಭಂಡಾರಿ, ಲಂಡನ್‌ನಲ್ಲಿರುವ ಆತನ ಮನೆಯ ಇಂಟೀರಿಯರ್‌ ಡೀಸೈನ್ ಮಾಡಿಸಿದ್ದರು. ಅಲ್ಲದೇ ವಾದ್ರಾರ ರಿಯಲ್‌ ಎಸ್ಟೇಟ್‌ ಡೀಲ್‌ಗಳನ್ನೂ ನೋಡಿಕೊಳ್ಳುತ್ತಿದ್ದರು. ವಾದ್ರಾ ಹಾಗು ಭಂಡಾರಿ ದುಬೈ ಡಿಫೆನ್ಸ್‌ ಎಕ್ಸ್‌ಪೋನಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ವಾದ್ರಾ ಸಂಸ್ಥೆ ಮೂಲಕ ಡೀಲ್‌ಅನ್ನು ಮಾಡಿಕೊಳ್ಳಲು ಗಾಂಧಿ ಕುಟುಂಬ ನೋಡಿತ್ತು” ಎಂದು ಶೆಖಾವತ್‌ ತಿಳಿಸಿದ್ದಾರೆ.

2014ರಲ್ಲಿ ಯುಪಿಎ ಅಧಿಕಾರ ಕಳೆದುಕೊಂಡ ಕಾರಣ ರಾಹುಲ್‌ ಇದೀಗ ಹತಾಶೆಯಲ್ಲಿ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದ ಶೆಖಾವತ್‌, ರಫೇಲ್‌ ಖರೀದಿಯನ್ನು ನೆನೆಗುದಿಯಲ್ಲಿ ಇಟ್ಟ ಕಾಂಗ್ರೆಸ್‌ ಸಶಸ್ತ್ರ ಪಡೆಗಳ ಸಮರಸನ್ನದ್ಧತೆಯೊಂದಿಗೆ   ರಾಜಿ ಮಾಡಿಕೊಳ್ಳುವ ಮೂಲಕ ಯೋಧರ ನೈತಿಕ ಸ್ಥೈರ್ಯದೊಂದಿಗೇ ಆಟವಾಡಿದೆ ಎಂದು ಬಿಜೆಪಿ ಆಪಾದನೆ ಮಾಡಿದೆ.

ಈ ಮುನ್ನ ಮಾಡಲಾದ ವರದಿ ಪ್ರಕಾರ ಭಮಡಾರಿಯ ಆಫ್‌ಸೆಟ್‌ ಇಂಡಿಯಾ ಸಲ್ಯೂಷನ್ಸ್‌ ಎಂಬ ಸಂಸ್ಥೆಯು ಆಫ್‌ಸೆಟ್‌ ಡೀಲ್ ಪಡೆಯಲು ಸಾಕಷ್ಟು ಒತ್ತಡ ಹಾಕಿದ್ದರು. ಅವರ ವ್ಯವಹಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದ ಕೂಡಲೇ ಭಂಡಾರಿ ಕಳೆದ ವರ್ಷ ಲಂಡನ್‌ಗೆ ಪರಾರಿಯಾಗಿದ್ದಾನೆ.

ರಾಬರ್ಟ್‌ ವಾದ್ರಾ ಪ್ರಭಾವ ಬಳಸುವ ಮೂಲಕ ರಫೇಲ್‌ನ ಆಫ್‌ಸೆಟ್‌ ಕಾಂಟ್ರಾಕ್ಟ್‌ನ ಭಾಗವನ್ನು ತನ್ನ ಜೇಬಿಗಿಳಿಸಲು ಭಂಡಾರಿ ಯತ್ನಿಸಿದ್ದ. ರಕ್ಷಣಾ ಖರೀದಿ ಸಂಬಂಧ ಈತ ರಾಜಕೀಯ ಪ್ರಭಾವ ಬಳಸಿ ಅಕ್ರಮಗಳನ್ನು ಮಾಡಲು ಯತ್ನಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಬಂಢಾರಿಯ ದೆಹಲಿಯ ಕಚೇರಿ ಮೇಲೆ ದಾಳಿ ನಡೆಸಿತ್ತು. ಅಧಿಕೃತ ರಹಸ್ಯಗಳ ಕಾಯಿದೆ ಅಡಿ ಬಂಢಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close