About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಫೇಲ್‌ ಡೀಲ್‌: ವ್ಯಕ್ತಿಗಳು ಎಷ್ಟೇ ಸುಳ್ಳು ಹೇಳಿದರೂ ವಾಸ್ತವ ಎಂದಿಗೂ ಸುಳ್ಳಾಗದು, ಜೇಟ್ಲಿ ಪ್ರತಿಕ್ರಿಯೆ

ದೆಹಲಿ: ಭಾರತ-ಫ್ರಾನ್ಸ್‌ಗಳ ನಡುವಿನ ರಫೇಲ್‌ ಯುದ್ಧ ವಿಮಾನಗಳ ಖರೀದಿ ಸಂಬಂಧ ಕೇಂದ್ರ ಸರಕಾರ ಹಾಗು ವಿಪಕ್ಷವಾದ ಕಾಂಗ್ರೆಸ್‌ ನಡುವೆ ನಡೆಯುತ್ತಿರುವ ಮಾತಿನ ಚಕಮಕಿ ತಣ್ಣಗಾದಂತೆ ಕಾಣುತ್ತಿಲ್ಲ.

ಈ ಕುರತು ಪ್ರತಿಕ್ರಿಯೆ ನೀಡಿದ ಕೇಂದ್ರ ಹಣಕಸು ಸಚಿವ ಅರುಣ್‌ ಜೇಟ್ಲಿ, “ಮಾನವರು ಬೇಕಿದ್ದರೆ ಸುಳ್ಳುಗಳನ್ನು ಹೇಳಬಹುದು. ಆದರೆ ವಾಸ್ತವ ಎಂದಿಗೂ ಸುಳ್ಳಾಗಲು ಸಾಧ್ಯವಿಲ್ಲ. ಕಾಂಗ್ರೆಸ್‌ ಏನು ಬೇಕಾದರೂ ಹೇಳಬಹುದು, ಆದರೆ ಮೂಲ ತತ್ವಗಳು ಎಂದಿಗೂ ಸುಳ್ಳಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ರಫೇಲ್ ಖರೀದಿ ಸಂಬಂಧ ಫ್ರೆಂಚ್‌ ಅಧ್ಯಕ್ಷ ಫ್ರಾಂಕ್ವಾ ಹೊಲಾಂಡೆ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಮುಂದಿಟ್ಟುಕೊಂಡು ಕೇಂದ್ರದ ಮೇಲಿ ಮಾತಿನ ದಾಳಿ ನಡೆಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಪ್ರತಿಕ್ರಿಯಿಸಿದ ಜೇಟ್ಲಿ, “ರಾಹುಲ್‌ ಗಾಂಧಿಯ ವಿಷಯ ಜ್ಞಾನ ನೋಡಿದರೆ ಅಯ್ಯೋ ಎನಿಸುತ್ತದೆ. 56,000 ಕೋಟಿರು ಖರೀದಿಯ ಆಫ್‌ಸೆಟ್‌ ಮೌಲ್ಯ 28,000 ಕೋಟಿ ರುಗಳು ಎಂದುಕೊಳ್ಳಿ. ಆಫ್‌ಸೆಟ್‌ ಪೂರೈಕೆಯ ಭಾಗವಾಗಿ 2 ಸಂಸ್ಥೆಗಳಲ್ಲಿ ನಾನೂ ಒಬ್ಬ ಎಂದುಕೊಳ್ಳಿ. ಆಗ ಪ್ರತಿಯೊಬ್ಬರಿಗೂ 2000-4000 ಕೋಟಿಯಷ್ಟು ಹಂಚಿಕೆಯಾಗುತ್ತದೆ. ಹೀಗಾದಲ್ಲಿ ಅದು ಹೇಗೆ ತಪ್ಪಾಗುತ್ತದೆ?” ಎಂದು ಹೇಳಿದ್ದಾರೆ.

ರಫೇಲ್‌ ಡೀಲ್‌ ಸಂಬಂಧ ಕಾಂಗ್ರೆಸ್‌‌ನ ಎಲ್ಲ ಆಪಾದನೆಗಳನ್ನು ತಳ್ಳಿಹಾಕಿದ ಜೇಟ್ಲಿ, ವಿಮಾನಗಳನ್ನು ಹೆಚ್ಚಿನ ಮೊತ್ತ ತೆತ್ತು ಖರೀದಿ ಮಾಡಲಾಗುತ್ತಿದೆಯೇ ಎಂಬುದನ್ನು ಮಹಾಲೇಖಪಾಲರೇ ತಿಳಿಸಲಿದ್ದಾರೆ. ಕಾಂಗ್ರೆಸ್‌ ಎಷ್ಟೇ ಬೊಬ್ಬಿರಿದರೂ ರಫೇಲ್‌ ಡೀಲ್‌ಅನ್ನು ರದ್ದು ಮಾಡುವುದಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.

2012ರಲ್ಲಿ ಇದೇ ರಫೇಲ್‌ ಖರೀದಿ ವೇಳೆ ಮುಖೇಶ್‌ ಅಂಬಾನಿ ನೇತೃತ್ವದ ರಿಲಾಯನ್ಸ್‌ ಹಾಗು ಡಸೌ ಏವಿಯೇಷನ್ ನಡುವೆ ಒಪ್ಪಂದವೇರ್ಪಟ್ಟಿತ್ತು ಎಂದು ಸಾಕಷ್ಟು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೇ ಯುಪಿಎ ಸರಕಾರದ ನೇತೃತ್ವದಲ್ಲಿ ಮಾಡಿಕೊಳ್ಳಲಾದ ಈ ಕಾಂಟ್ರಾಕ್ಟ್‌ ಹಿನ್ನೆಲೆಯಲ್ಲೇ, 18 ರಫೇಲ್‌ ಯುದ್ಧ ವಿಮಾನಗಳನ್ನು ಸಿದ್ಧ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಕೆ ಮಾಡಲು ಫ್ರಾನ್ಸ್‌ನ ಡಸೌ ಜತೆ ಒಪ್ಪಂದಕ್ಕೆ ಅಂದಿನ ಸರಕಾರ ಮುಂದಾಗಿತ್ತು.

ಅಂದಿನ ಒಪ್ಪಂದದ ವೇಳೆ, ಯುದ್ಧ ವಿಮಾನಗಳಿಗೆ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನಾಗಲೀ, ವಿಶೇಷ ಏವಿಯಾನಿಕ್ಸ್‌ ತಂತ್ರಜ್ಞಾನದ ಜೋಡಣೆಯನ್ನಾಗಲೀ ಮಾಡುವ ಸಂಬಂಧ ಯಾವುದೇ ಶರತ್ತುಗಳನ್ನು ಒಪ್ಪಂದದಲ್ಲಿ ಉಲ್ಲೇಖ ಮಾಡಿರಲಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close