Thursday, 28th March 2024

ಆತ್ಮಸ್ಥೈರ್ಯಕ್ಕೆ ಕ್ರೀಡೆ ಸ್ಪೂರ್ತಿ: ಹಿರಿಯ ನ್ಯಾಯಾಧೀಶೆ ಎಂ.ಭಾರತಿ

ಹರಪನಹಳ್ಳಿ: ಕ್ರೀಡೆ ಜಡತ್ವವನ್ನು ನೀಗಿಸುವ ಮೂಲಕ ಮನುಷ್ಯನ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ದಿನಂಪ್ರತಿ ನ್ಯಾಯಾ ಲಯದ ಕಲಪದ ಚಿಂತನೆಲ್ಲೇ ಇರುವ ವಕೀಲರಿಗೆ ಕ್ರೀಡೆ ತುಂಬಾ ಉತ್ತಮ ಎಂದು ಹೇಳಿದ ಕ್ರೀಡೆ ಯಶಸ್ವಿಯಾಗಿ ನಡೆಯಲಿ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎಂ. ಭಾರತಿ ಕ್ರೀಡಾ ವಕೀಲರಿಗೆ ಹಾರೈಸಿದರು.

ಪಟ್ಟಣದ ಹೆಚ್.ಪಿ.ಎಸ್. ಕಾಲೇಜ್ ಮೈದಾನದಲ್ಲಿ ಮಂಗಳವಾರ ತಾಲೂಕು ವಕೀಲರ ಸಂಘ ದಿಂದ ಆಯೋಜಿಸಲಾಗಿದ್ದ ವಕೀಲರ ಕೀಡಾಕೂಟದ ಕಾರ್ಯಕ್ರಮದಲ್ಲಿ ಉಭಯ ನ್ಯಾಯಾಧೀಶರುಗಳಾದ ಎಂ. ಭಾರತಿ ಮತ್ತು ಫಕ್ಕಿರವ್ವ ಕೆಳಗೇರೆ ನ್ಯಾಯಾಧೀಶರು ಕ್ರೀಕೆಟ್ ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದರು.

ಜೆ.ಎಂ.ಎಫ್.ಸಿ. ನ್ಯಾಯಾಲಯದ ಕಿರಿಯ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೇರೆ ಮಾತ ನಾಡಿ, ನ್ಯಾಯಕ್ಕಾಗಿ ಹೋರಾಡುವ ವಕೀಲರು ಇವತ್ತು ದೇಹದ ಆರೋಗ್ಯದ ನ್ಯಾಯಕ್ಕಾಗಿ ಮೈದಾನದಲ್ಲಿ ಒಟ್ಟಾಗಿ ಸೇರಿ ಕ್ರೀಡಾಕೂಟದಲ್ಲಿ ಸೇರುವ ಮೂಲಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಕೋಡಬೇಕು ಆದೇ ರೀತಿ ಈ ಕ್ರೀಡಾಂಗಣದಲ್ಲಿ ಎಲ್ಲಾ ಕ್ರೀಡಾಪಟುಗಳು ಶಾಂತರೀತಿ ಯಿಂದ ಸಹೋದರತ್ವದ ರೀತಿಯಲ್ಲಿ ಭಾಗವಹಿಸಿ ಆಟವನ್ನು ಆಡಬೇಕು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರಗೌಡ, ಉಪಾಧ್ಯಕ್ಷ ಟಿ. ವೆಂಟೇಶ್, ಕಾರ್ಯದರ್ಶಿ ಕೆ. ಬಸವರಾಜ್, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಹಿರಿಯ ವಕೀಲರಾದ ಮತ್ತಿಹಳ್ಳಿ ಅಜ್ಜಪ್ಪ, ಕೆ. ಜಗದೀಶ್ ಗೌಡ, ಕೆ.ಸಿ.ಚಂದ್ರಮೌಳಿ, ಕೆ. ಕೋಟ್ರೇಶ್, ರೇವನಗೌಡ್ರು,ಬಿ. ಗೋಣಿಬಸಪ್ಪ, ಎಂ. ಮೃತಂಜಯ್ಯ, ನಾಗರಾಜ್, ಜಿ.ತಿಪ್ಪೇಸ್ವಾಮಿ, ಮಂಜ್ಯಾನಾಯ್ಕ, ಬಸವನ ಗೌಡ, ಎಸ್. ಜಾಕೀರ್, ಕೆ. ಪ್ರಕಾಶ್, ಬಿ. ಮಂಜುನಾಥ್, ಶ್ರೀಕಾಂತ್, ಮತ್ತು ಇತರರು ಇದ್ದರು.

error: Content is protected !!