About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಫೇಲ್‌ ಡೀಲ್‌ ಕುರಿತ “ಅವ್ಯವಹಾರಗಳ” ವರದಿ ಕೊಡಿ: ಸಿಎಜಿಗೆ ಕಾಂಗ್ರೆಸ್ ಮನವಿ

ದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ಕೇಂದ್ರ ಸರಕಾರದ ಮೇಲೆ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ ಇಂದು ಮಹಾಲೇಖಪಾಲರನ್ನು(ಸಿಎಜಿ) ಭೇಟಿ ಮಾಡಿದೆ.

ರಫೇಲ್‌ ಖರೀದಿ ಕುರಿತು ವಿವರ ನೀಡುವಂತೆ ಸಿಎಜಿಗೆ ಕಾಂಗ್ರೆಸ್‌ನ ಹಿರಿಯ ನಾಯಕರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ಪಕ್ಷದ ಹಿರಿಯ ನಾಯಕ ಆನಂದ್‌ ಶರ್ಮಾ, “ಡೀಲ್‌ ಸಂಬಂಧ ಅಕ್ರಮಗಳು ನಡೆದಿದ್ದು, ಈ ಕುರಿತು ವಿವರವಾದ ಮನವಿಯೊಂದನ್ನು ನೀಡಿದ್ದೇವೆ. ರಫೇಲ್‌ ಖರೀದಿ ಸಂಬಂಧ ವರದಿಯನ್ನು ಶೀಘ್ರ ಸಿದ್ಧಪಡಿಸಿ ಸಂಸತ್ತಿನ ಮುಂದೆ ಇಡಲು ಸಿಏಜಿಯನ್ನು ಕೋರಿದ್ದೇವೆ” ಎಂದಿದ್ದಾರೆ.

ರಫೇಲ್‌ ಡೀಲ್‌ ಸಂಬಂಧ ಎಚ್‌ಎಎಲ್‌ಅನ್ನು ಪಕ್ಕಕ್ಕಿರಿಸಿ ಖಾಸಗೀ ಸಂಸ್ಥೆಗೆ ಮನ್ನಣೆ ನೀಡಿರುವ ಕುರಿತು ಸಿಎಜಿಗೆ ವರದಿ ನೀಡಿದ್ದು, ಈ ಕುರಿತಾಗಿ ಪರಿಶೀಲನೆ ನಡೆಸುವುದಾಗಿ ಸಿಎಜಿ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ವಕ್ತಾರ ರಣ್‌ದೀಪ್‌ ಸುರ್ಜೇವಾಲಾ ತಿಳಿಸಿದ್ದಾರೆ.

ವರ್ಷಾಂತ್ಯ ನಡೆಯಲಿರುವ ದೊಡ್ಡ ರಾಜ್ಯಗಳ ಚುನಾವಣೆ ಹಾಗು ಮುಂದಿನ ವರ್ಷದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಫೇಲ್‌ ಡೀಲ್‌ಅನ್ನು ಪ್ರಮುಖ ಅಸ್ತ್ರವಾಗಿ ಕೇಂದ್ರ ಸರಕಾರದ ಮೇಲೆ ಬಳಸಲು ಕಾಂಗ್ರೆಸ್‌ ಮುಂದಾಗಿದೆ.

 

Tags

Related Articles

Leave a Reply

Your email address will not be published. Required fields are marked *

Language
Close