ಎರಡನೇ ಹಂತದ ರಾಜ್ಯ ಪ್ರವಾಸಕ್ಕೆ ರಾಹುಲ್ ಸಿದ್ದತೆ

Posted In : ಬೆಂಗಳೂರು

ಬೆಂಗಳೂರು: ರಾಜ್ಯದಲ್ಲಿ ಮೊದಲ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ 24ರಿಂದ ಎರಡನೇ ಹಂತದ ಪ್ರವಾಸ ಆರಂಭಿಸಲಿದ್ದಾರೆ.

ಗಾಂಧಿ ಅವರು ಇದೇ 24, 25, 26 ರಂದು ಪುನಃ ಕರ್ನಾಟಕಕ್ಕೆ ಆಗಮಿಸುವರು. ಮುಂಬೈ ಕರ್ನಾಟಕ ಭಾಗದಲ್ಲಿ ಮೂರು ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ. ರಾಹುಲ್ ಗಾಂಧಿ ಅವರ ಪ್ರವಾಸ ದಿಂದ ನಮಗೆ ಲಾಭವಾಗುತ್ತದೆ. ಅವರು ಅಧ್ಯಕ್ಷರಾದ ಮೇಲೆ ಗುಜರಾತ್ ಚುನಾವಣೆಯಲ್ಲಿ ನಮಗೆ ಬಲ ಬಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಿದ್ದರು. 10ರಂದು ಹೊಸಪೇಟೆಯಿಂದ ಪ್ರವಾಸ ಆರಂಭಿಸಿದ್ದರು. 13ರಂದು ಬಸವಕಲ್ಯಾಣದಲ್ಲಿ ರಾಜ್ಯ ಪ್ರವಾಸ ಮುಕ್ತಾಯಗೊಂಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ರುವ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖವಾದದ್ದು. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಕಾಂಗ್ರೆಸ್ ಇದನ್ನು ಪ್ರತಿಷ್ಠೆಯ ನ್ನಾಗಿ ತೆಗೆದುಕೊಂಡಿದೆ.

Leave a Reply

Your email address will not be published. Required fields are marked *

10 + 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top