ರಾಹುಲ್ ಮೇಲ್ಪಂಕ್ತಿ ಹಾಕಲಿ

Posted In : ಸಂಪಾದಕೀಯ-1

ಭಾರತದಲ್ಲಿ ಎಲ್ಲ ಪಕ್ಷಗಳಲ್ಲೂ ವಂಶವಾಹಿ ರಾಜಕಾರಣ ನಡೆಯುತ್ತಿದೆ. ದೇಶದ ಅಭಿವೃದ್ಧಿಗೆ ವಂಶವಾಹಿ ರಾಜಕಾರಣವೇ ಅಡ್ಡಿಯಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೊನೆಗೂ ಸತ್ಯ ಒಪ್ಪಿಕೊಂಡಿದ್ದಾರೆ. ಅಮೆರಿಕದ ವಿಶ್ವವಿದ್ಯಾಲಯವೊಂದರ ಭಾಷಣದಲ್ಲಿ ರಾಹುಲ್ ಹೇಳಿರುವಂತೆ, ಡಿಎಂಕೆ, ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ಪಕ್ಷಗಳಲ್ಲಿ ವಂಶವಾಹಿ ರಾಜಕಾರಣವಿದೆ.

ಉದ್ಯಮ, ಚಿತ್ರೋದ್ಯಮಗಳಲ್ಲಿಯೂ ಇದೆ. ಆದರೆ ವಂಶವಾಹಿ ಆಡಳಿತಕ್ಕೆ ನಾಂದಿ ಹಾಡಿದ್ದು ಯಾರು ಎನ್ನುವ ಪ್ರಶ್ನೆ ಪುನಃ ಅವರತ್ತಲೇ ತಿರುಗುತ್ತದೆ. ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ವಂಶವಾಹಿ ಪರಂಪರೆ ಮುಂದು ವರೆದುಕೊಂಡೇ ಬಂದಿದೆ. ಮೊದಲ ಮೂರು ಮಂದಿ ದೇಶ ವನ್ನಾಳಿದ ಸಂದರ್ಭದಲ್ಲಿ ಆ ಸ್ಥಾನ ತುಂಬಲು ಕಾಂಗ್ರೆಸ್ವೊಳಗೇ ಪರ್ಯಾಯ ನಾಯಕರ್ಯಾರೂ ಇರಲಿಲ್ಲವೇ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಅವರೇ ಉತ್ತರ ಹೇಳಬೇಕಿದೆ. ಇವರು ಹಾಕಿಕೊಟ್ಟ ಪರಂಪರೆಯನ್ನು ಅನ್ಯರು ಅಳವ ಡಿಸಿಕೊಂಡರೆ, ಪಾಲಿಸಿಕೊಂಡು ಬಂದರೆ ಅದೆಷ್ಟು ಆತ್ಮಸಂಕಟ ತುಂಬಿ ತುಳುಕಾಡುತ್ತಿದೆ ಎಂಬುದನ್ನು ಸ್ವತಃ ರಾಹುಲ್ ಗಾಂಧಿ ಅವರೇ ಅನಾವರಣ ಮಾಡಿಕೊಂಡಿದ್ದಾರೆ.

ಇಷ್ಟೆಲ್ಲ ಹೇಳಿದವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ತಾನು ಮುನ್ನಡೆಯಲು ಸಿದ್ಧ ಎಂದೂ ಹೇಳಿಕೊಂಡಿದ್ದಾರೆ. ವಂಶವಾಹಿ ರಾಜಕಾರಣಕ್ಕೆ ಕೊನೆ ಹಾಡಲು ಅವರಿಗೆ ನಿಜವಾಗಲೂ ಮನಸ್ಸಿದ್ದರೆ ಈ ಜವಾಬ್ದಾರಿಯನ್ನು ಬೇರೆ ಯುವ ಮುಖಂಡರಿಗೆ ವಹಿಸಬಹುದು. ಅನ್ಯರಿಗೆ ಪಕ್ಷದ ಅಧ್ಯಕ್ಷ ಪಟ್ಟ ಕಟ್ಟಬಹುದು, ಉಪಾಧ್ಯಕ್ಷ ಪಟ್ಟವನ್ನು ಇವರೇ
ಬಿಟ್ಟುಕೊಡಬಹುದು. ಅಪ್ಪಿತಪ್ಪಿ ಮುಂದೆಂದರೂ ಈ ದೇಶದಲ್ಲಿ ಕಾಂಗ್ರೆಸ್ ಆಳ್ವಿಕೆ ನಡೆಸಿದರೆ ತಾವು ಪ್ರಧಾನಿ ಪಟ್ಟ ಏರುವುದಿಲ್ಲ, ಬೇರೆಯವರನ್ನು ಆ ಸ್ಥಾನದಲ್ಲಿ ಕೂರಿಸಲಾಗುವುದು ಎಂದು ಸಂಕಲ್ಪ ಮಾಡಬಹುದು.

ಹೇಗೆ ಕಾಂಗ್ರೆಸ್ ದೇಶದಲ್ಲಿ ವಂಶವಾಹಿ ರಾಜಕಾರಣಕ್ಕೆ ನಾಂದಿ ಹಾಡಿದೆಯೋ, ಅದೇ ರೀತಿಯಲ್ಲಿ ವಂಶವಾಹಿ ರಾಜಕಾರಣ ತೊಡೆದು ಹಾಕಲು ಕಾಂಗ್ರೆಸ್ ಮಾದರಿಯಾಗಬಹುದು ಹಾಗೂ ಆ ವಿಚಾರದಲ್ಲಿ ರಾಹುಲ್ ಗಾಂಧಿ ಮೇಲ್ಪಂಕ್ತಿ ಹಾಕಿ ಕೊಡ ಬಹುದು. ಮಾತು ಮತ್ತು ಕೃತಿ ಬೇರೆ-ಬೇರೆ ಅಲ್ಲ ಎಂದು ಸಾಬೀತು ಮಾಡಬಹುದು. ರಾಹುಲ್ ಆ ಅವಕಾಶ ತಪ್ಪಿಸಿಕೊಳ್ಳದಿರಲಿ!

ಪ್ರಧಾನಿಯನ್ನೇ ಹೊಣೆ ಮಾಡಿದ ವಿಚಾರವಾದಿಗಳು

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿರೋಧ ಸಮಾವೇಶ ನಿರೀಕ್ಷೆಯಂತೆ ಬಲಪಂಥೀಯರ ವಿರೋಧಕ್ಕಷ್ಟೇ ಸೀಮಿತಗೊಂಡಿದೆ. ವಿಚಾರ ವಾದಿಗಳ ಹತ್ಯೆ  ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಘ-ಪರಿವಾರದ ತಲೆಗೆ ಕಟ್ಟುವ ಭರದಲ್ಲಿ ವಿಚಾರವಾದಿಗಳು ಸಾಮಾನ್ಯ ಜ್ಞಾನವನ್ನೇ ಮರೆತಂತೆ ಕಾಣುತ್ತಿದೆ. ಗೌರಿ ಲಂಕೇಶ್ ಹತ್ಯೆಯನ್ನು ಯಾರೂ ಸಮರ್ಥಿಸುವುದಿಲ್ಲ. ಆರೋಪಿಗಳ ಹೆಡೆಮುರಿ ಕಟ್ಟಿ ತಂದು ನ್ಯಾಯಾಲಯದ ಎದುರು ಹಾಜರು ಪಡಿಸ ಬೇಕೆಂಬುದರಲ್ಲಿ ಎರಡನೇ ಮಾತೇ ಇಲ್ಲ. ಆದರೆ ಈ ಕೆಲಸವನ್ನು ಮಾಡಬೇಕಾದವರು ಯಾರು? ಪ್ರಜಾತಂತ್ರ ವ್ಯವಸ್ಥೆ ಯಲ್ಲಿ ಕಾನೂನು-ಸುವ್ಯವಸ್ಥೆ ಎಂಬುದು ರಾಜ್ಯಕ್ಕೆ ಸಂಬಂಧಪಟ್ಟ ವಿಚಾರ. ಕರ್ನಾಟಕದಲ್ಲಿ ಇಂಥದೊಂದು ಘಟನೆ ನಡೆದಿದೆ ಎಂದಾಗ ಅದರ ನೇರ ಹೊಣೆ ರಾಜ್ಯ ಸರಕಾರಕ್ಕೇ ಸೇರಿದ್ದು.

ಆದರೆ ಬುದ್ಧಿಜೀವಿಗಳು ಈ ಸಾಮಾನ್ಯ ಸತ್ಯವನ್ನೂ ಅರ್ಥ ಮಾಡಿಕೊಳ್ಳದೇ ಪ್ರಧಾನಿಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದ್ದಾರೆ. ಆದರೆ ಅದೇ ಕಾಲಕ್ಕೆ ಗೌರಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದಕ್ಕೂ ಇವರು ವಿರೋಧ ವ್ಯಕ್ತಪ ಡಿಸುತ್ತಾರೆ. ಅಂದರೆ ಹಾವು ಸಾಯಬಾರದು, ಕೋಲೂ ಮುರಿಯಬಾರದು ಎಂಬ ಧೋರಣೆಯನ್ನು ಈ ವಲಯ ತಾಳಿದೆಯೇ ಎಂಬ ಪ್ರಶ್ನೆಯನ್ನು ಈ ರ್ಯಾಲಿ ಹುಟ್ಟುಹಾಕಿದೆ

Leave a Reply

Your email address will not be published. Required fields are marked *

20 − six =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top