About Us Advertise with us Be a Reporter E-Paper

ಅಂಕಣಗಳು

ರಾ.ಗಾ., ಇನ್ನಾದರೂ ಬದಲಿಸಯ್ಯಾ ನಿನ್ನ ರಾಗ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ತುಳಸಿದಾಸ’ ಎಂಬ ಕನ್ನಡದ ಹುಡುಗ, ತನ್ನ ಕೆಟ್ಟ  ಹಾಡುಗಾರಿಕೆಯಿಂದ ತುಂಬಾನೇ ಪ್ರಚಾರವನ್ನು ಗಳಿಸಿಕೊಂಡಿದ್ದ. ಒಂದು ರಾಗವನ್ನು ಎಷ್ಟು ಕೆಟ್ಟದಾಗಿ ಹಾಡಬಹುದೆಂಬುದನ್ನು ಕತ್ತೆಗಿಂತಲೂ ವಿಚಿತ್ರವಾಗಿ ಹಾಡುತ್ತಿದ್ದ ಈ ಮಹಾನುಭಾವ. ಈತನ ರಾಗಗಳು ಎಷ್ಟು ವಿಚಿತ್ರವಾಗಿರುತ್ತವೆ ಎಂದರೆ, ದೇಶದ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಮೋದಿಯ ವಿರುದ್ಧ ಕಳೆದ ನಾಲ್ಕು ವರ್ಷಗಳಿಂದ ಹೇಳುತ್ತಾ ಬಂದಿರುವ ಅವೇ ಹಳಸಲು ವಿಷಯಗಳಷ್ಟೇ ಕರ್ಕಶವಾಗಿದೆ. ಯಾಕೆ ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆಂದರೆ, ಪ್ರತಿನಿತ್ಯವೂ ದೇಶದಲ್ಲಿ ಹಲವಾರು ರೀತಿಯ ನೂತನ ಪ್ರಯೋಗಗಳು, ವಿದ್ಯಮಾನಗಳು ನಡೆಯುತ್ತಿದ್ದರೂ ಸಹ  ರಾಹುಲ್‌ಗಾಂಧಿ ಹಾಗೂ ಅವರ ತಂಡ ಈ ತುಳಸಿದಾಸನ ತರಹ ಹಳಸಿಹೋದ ವಿಚಾರಗಳನ್ನೇ ಇಟ್ಟುಕೊಂಡು ಮೋದಿಯವರ ವಿರುದ್ಧ  ಪ್ರತಿನಿತ್ಯವೂ ಗುಡುಗುತ್ತಿದ್ದಾರೆ. ನಮ್ಮಲ್ಲಿ ಒಂದು ಗಾದೆ ಮಾತಿದೆ, ಹಾಡಿದ್ದೇ ಹಾಡೋ ಕಿಸುಬಾಯಿದಾಸ ಎನ್ನುವ ಹಾಗೆ ಯಾವ ಟಿವಿಯ ಚರ್ಚೆಯಲ್ಲಿ ನೋಡಿ, ಅದೇ ರಾಗಗಳು.  ಚುನಾವಣೆ ಪ್ರಚಾರದಲ್ಲಿಯೂ ಅದೇ ರಾಗ.

ಮೊನ್ನೆ ನಡೆದ ಅವಿಶ್ವಾಸ ಮಂಡನೆಯಲ್ಲಿಯೂ, ಅದೇ ಕಿತ್ತುಹೋದ ಹಳೆಯ ರಾಗ, ಹಳೆಯ ಹಾಡು. ಇವರಿಗೆಲ್ಲ ಯಾರು ಮಾರ್ಗದರ್ಶನ ಮಾಡುತ್ತಾರೆಯೋ ದೇವರೇ ಬಲ್ಲ.  ಹಲವಾರು ಕಾಂಗ್ರೆಸ್ ನಾಯಕರ ಬಳಿ ಮಾತನಾಡಿ ಹಲವಾರು ಬಾರಿ ಹೇಳಿದ್ದೇನೆ. ಆದರೂ ಮಾತು ಕೇಳುವುದಿಲ್ಲ. ಮುಂದಿನ ಚುನಾವಣೆಗಳಲ್ಲಿ ಮತ್ತದೇ ರಾಗವನ್ನು ತಂದು ಕಿರುಚಾಡುತ್ತಿರುತ್ತಾರೆ.

ಮೊದಲನೆಯದು 15ಲಕ್ಷ ರು. ವಿಚಾರ. ಈ ವಿಚಾರದ ಬಗ್ಗೆ ಕಳೆದ ಮೂರು ವರ್ಷಗಳಿಂದ ದೇಶದ ಎಲ್ಲಾ ಭಾಗಗಳಲ್ಲಿಯೂ, ಎಲ್ಲ ರೀತಿಯ ಚರ್ಚೆಗಳು ಈಗಾಗಲೇ ಆಗಿಹೋಗಿವೆ. ಮೋದಿಯು ನಮ್ಮ ಅಕೌಂಟ್‌ಗೆ ಹದಿನೈದು ಲಕ್ಷ ಹಣವನ್ನು ಹಾಕುತ್ತೇನೆಂದು ಎಲ್ಲಿಯೂ ಹೇಳಿಲ್ಲ; ವಿದೇಶದಲ್ಲಿರುವ ಭಾರತೀಯರ ಕಪ್ಪುಹಣವನ್ನು ವಿವರಿಸುವ ಸಂದರ್ಭದಲ್ಲಿ,  ಖಾತೆಗೂ 15ಲಕ್ಷ ಹಣವನ್ನು ಹಾಕುವಷ್ಟು ಸಂಪತ್ತಿ ದೆಯೆಂದು ಉಲ್ಲೇಖಿಸಿರುವ ವಿಷಯವು ಎಲ್ಲರಿಗೂ ತಿಳಿದಿದೆ. ನೀವೊಬ್ಬ ಆಟೋ ಡ್ರೈವರ್, ಕ್ಯಾಬ್ ಡ್ರೈವರ್, ಚಿಲ್ಲರೆ ಅಂಗಡಿ, ತಳ್ಳುವ ಗಾಡಿಯ ವ್ಯಾಪಾರಿ ಆಗಿದ್ದರೂ ಈ ಸತ್ಯ ತಿಳಿದಿರುತ್ತದೆ. ಇದಕ್ಕಾಗಲೇ ಸಿಕ್ಕಿರುವ ಉತ್ತರವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡಿರುವುದರಿಂದ ಮತ್ತದೇ ವಿಷಯವನ್ನು ಹೇಳುವ ವರಿಗೆ ಹುಚ್ಚು ಹಿಡಿದಿರುವುದರಲ್ಲಿ ಅನುಮಾನವೇ ಇಲ್ಲ.

ಇದಕ್ಕೆ ತಕ್ಕಂತೆ ಸ್ವಿಸ್‌ಬ್ಯಾಂಕ್‌ನಲ್ಲಿರುವ ಡೆಪಾಸಿಟ್‌ನಲ್ಲಿ 2014ರಿಂದ 2017ರ ವರೆಗೆ ಈಗಾಗಲೇ  80%ರಷ್ಟು ಕಡಿಮೆಯಾಗಿದೆ ಎಂದು  ಸರಕಾರವೇ ವರದಿ ನೀಡಿದೆ. ಒಂದಂತೂ ಸತ್ಯ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕಡಿಮೆಯಾಗಿದೆ ಎಂದಾಕ್ಷಣ ಕಪ್ಪುಹಣವೇ ಇಲ್ಲವೆಂದಲ್ಲ. ಬೇರೆ ಬೇರೆ ದೇಶಗಳಿಗೆ ಹಣ ವರ್ಗಾವಣೆಯಾಗಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆದರೆ ಒಂದು ಮುಖ್ಯ ಅಂಶವೆಂದರೆ, ವಿದೇಶದಲ್ಲಿ ಕಪ್ಪು ಹಣ ಇಡುವವರಲ್ಲಿ ಭಯವಂತೂ ಹೆಚ್ಚಾಗಿದೆಯೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ವಿರೋಧ ಪಕ್ಷದವರು ಮೊದಲು ಈ ಕನಸಿನಿಂದ ಹೊರಬಂದು ಬೇರೆ ಏನಾದರೂ ಆಲೋಚಿಸಿದರೆ ಮಾತ್ರ ಅವರಿಗೆ ಉಳಿಗಾಲ.

ಎರಡನೆಯದು- ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬಗ್ಗೆ  ಮೋದಿ ವಿರೋಧಿಗಳು ಮಾತನಾಡುತ್ತಿರುತ್ತಾರೆ. ಇದರ ಬಗ್ಗೆಯೂ ಅಷ್ಟೆ, ಸಾಮಾನ್ಯ ಜನರಿಗೆ ಈಗಾಗಲೇ ಉತ್ತರ ಸಿಕ್ಕಿದೆ. ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಪೆಟ್ರೋಲಿಯಮ್ ಕಂಪನಿಗಳ ಮೂಗಿಗೆ ತುಪ್ಪ ಸವರಿ, ರಿಯಾಯಿತಿ ದರದಲ್ಲಿ ಪೆಟ್ರೋಲ್, ಡೀಸೆಲ್‌ಗಳನ್ನು ಸಾಮಾನ್ಯ ಜನರಿಗೆ ಕಡಿಮೆ ಬೆಲೆಯಲ್ಲಿ ನೀಡಿ, ಕಂಪನಿಗಳ ಮೇಲೆ ಸುಮಾರು 1,80,000ಕೋಟಿ ರುಪಾಯಿಯಷ್ಟು ಸಾಲದ ಹೊರೆ ಹೊರೆಸಿ, ಅದನ್ನು ಈಗಿನ ಸರಕಾರದ ಮೇಲೆ ಹಾಕಿದ್ದು ಎಲ್ಲರಿಗೂ ತಿಳಿದಿದೆ. ಆ ಸಾಲವನ್ನು ತೀರಿಸದಿದ್ದರೆ, ನಾವೆಲ್ಲರೂ ಸೈಕಲ್‌ಗಳ  ಓಡಾಡುವಂತಹ ಪರಿಸ್ಥಿತಿ ಬರುತ್ತಿತ್ತೆಂಬ ಅಂಶವು ಈಗಾಗಲೇ ನೂರಾರು ಸಾರಿ ದೇಶಾದ್ಯಂತ ಚರ್ಚೆಯಾಗಿದೆ.

ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದೇ ಬೇಡ ಎಂದಿದ್ದು ಇದೇ ಯುಪಿಎ ಸರಕಾರವೆಂಬುದು ತಿಳಿಯಬೇಕು. ಇದರ ಜತೆಗೆ ‘ಫಿಫಾ ವಿಶ್ವಕಪ್ ಫುಟ್ಬಾಲ್-2018’ರ ಫೈನಲ್‌ನಲ್ಲಿ ಕ್ರೊಯೇಷಿಯಾ ದೇಶವು ಫ್ರಾನ್‌ಸ್ ವಿರುದ್ಧ  ಸೇಫ್ ಗೋಲ್ ಹೊಡೆದ ಹಾಗೆ, ನಮ್ಮದೇ ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರವು ಇತ್ತೀಚೆಗಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಸಿವೆ.  ಕಿರುಚಾಡಿದ ರಾಹುಲ್‌ಗಾಂಧಿ  ಹೀಗೆ ಮಾಡಿದೆನಲ್ಲ ಎನ್ನುವ ಪಶ್ಚಾತಾಪವೂ ಇಲ್ಲದೇ ಮತ್ತದೇ ತುಳಸಿದಾಸನ ರಾಗವನ್ನು ಹಾಡುತ್ತಿದ್ದಾರೆ. ಜನರಿಗೆ ವಿಚಾರಗಳು ತಲುಪುವ ವೇಗ ಹಾಗೂ ಆಳವೆಷ್ಟಿದೆಯೆಂದರೆ, ಅಷ್ಟು ಸುಲಭವಾಗಿ ಅವರನ್ನು ಮೂಢರನ್ನಾಗಿಸಲು ಸಾಧ್ಯವಿಲ್ಲ. ಇದೇ ರೀತಿಯ ಚುನಾವಣಾ ಪ್ರಚಾರ ಮಾಡಿ ಮಾಡಿ ಇಪ್ಪತ್ತೊಂದು ರಾಜ್ಯಗಳನ್ನು ಸೋತರು. ನಮ್ಮ ಕರ್ನಾಟಕದಲ್ಲಿಯೂ ಇದೇ ಅಸ್ತ್ರವನ್ನು ಪ್ರಯೋಗಿಸಿದ್ದ ಈ ತಂಡ, ಇಲ್ಲಿಯೂ 122ರಿಂದ 79ಕ್ಕೆ ಇಳಿಯಿತು. ಇಷ್ಟು ಸೋತರೂ ಇವರಿಗೆ ಬುದ್ಧಿಯೇ ಬರಲಿಲ್ಲ. ಈಗಲೂ ಅದೇ  ಚುನಾವಣೆಗೆ ಹೋಗುತ್ತಿದ್ದಾರೆ.

ಮೂರನೆಯದು: ನಿರುದ್ಯೋಗ ನಿರ್ವಹಣೆ ಹಾಗೂ ಉದ್ಯೋಗ ಸೃಷ್ಟಿ. ಇಲ್ಲಿಯೂ ಅಷ್ಟೇ. ಈಗಾಗಲೇ ಮುದ್ರಾ ಯೋಜನೆಯ ಅಡಿಯಲ್ಲಿ 12ಕೋಟಿ ಜನರಿಗೆ ಸ್ವಯಂ ಉದ್ಯೋಗಕ್ಕೆ  ಸಾಲ ನೀಡಿದ್ದರೂ, ಅವರಿಗೆ ಕೆಲಸವೇ ಕೊಟ್ಟಿಲ್ಲ ವೆಂದು ಬೊಬ್ಬೆ ಹಾಕುತ್ತಿದ್ದಾರೆ. ಜತೆಗೆ ಪೂರಕವಾದ ವಾತಾವರ ಣವು ಸಹ ಇವರ ಚರ್ಚೆಗೆ ಸೃಷ್ಟಿಯಾಗಿಲ್ಲ. ಯಾಕೆಂದರೆ ನೀವು ಯಾರನ್ನೇ ಕೇಳಿದರೂ, ಅವರು ಹೇಳುವುದು ಒಂದೇ. ಕೆಲಸ ಮಾಡಲು ಹುಡುಗರು ಸಿಗುತ್ತಿಲ್ಲ ಎನ್ನುತ್ತಾರೆಯೇ ಹೊರತು, ಹುಡುಗರಿದ್ದಾರೆ ಕೆಲಸವಿಲ್ಲ   ಎಲ್ಲಿಯೂ ಹೇಳೊಲ್ಲ. ಒಬ್ಬ ಪ್ಲಂಬರ್, ಎಲೆಕ್ಟ್ರಿಷಿಯನ್, ಡ್ರೈವರ್, ಎಂಜಿನಿಯರ್, ಅಕೌಂಟೆಂಟ್, ವರದಿಗಾರರು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಷ್ಟೇ. ಆದರೆ ಅದಕ್ಕೂ ಸೂಕ್ತವಾದ ಸ್ಕಿಲ್ ಇಲ್ಲ. ಐಟಿಐ ತರಬೇತಿ ಮುಗಿಸಿಕೊಂಡು ಫ್ಯಾಕ್ಟರಿಯಲ್ಲಿ ಕೆಲಸ ಮಾಡಬೇಕಾದ ವಿದ್ಯಾರ್ಥಿಗೆ ಶೇ.90%ರಷ್ಟು ಅಂಕ ನೀಡಿ ಮೇಲಕ್ಕೇರಿಸಿ, ಅವನ ಕೈಯಲ್ಲಿ  ಎಂಜಿನಿಯರಿಂಗ್ ಮಾಡಿಸಿ, ಸುಖಾಸುಮ್ಮನೆ ಅವನ ಜೀವನವನ್ನು ವಿದ್ಯಾಸಂಸ್ಥೆಗಳು ಹಾಳು ಮಾಡುತ್ತಿವೆ. ಇಂಥವರೇ ಮುದ್ರಾ ಯೋಜನೆಯಡಿ ಸಾಲ ತೆಗೆದುಕೊಂಡು ಸ್ವಯಂ ಉದ್ಯೋಗ ಮಾಡುತ್ತಿರುವುದು. ನಮ್ಮ ಹಣೆಬರಹಕ್ಕೆ  17 ಬಿಜೆಪಿ ಸಂಸದರು ಈ ಯೋಜ ನೆಯನ್ನು ರಾಜ್ಯದಲ್ಲಿ ಕೆಳಮಟ್ಟದಲ್ಲಿ ಅನುಷ್ಠಾನಗೊಳಿಸುವಲ್ಲಿ ಬಹು ದೊಡ್ಡ ವೈಫಲ್ಯವನ್ನು ಕಂಡಿದ್ದಾರೆ. ಮೃತದೇಹವನ್ನು ಕಂಡಾಕ್ಷಣ ಎರಗುವ ಹದ್ದುಗಳಂತೆ, ಇವರು ಹೆಚ್ಚಾಗಿ ಮಾಡಿದ್ದು ಹೆಣದ ಮೇಲಿನ ರಾಜಕೀಯವನ್ನಷ್ಟೇ ಹೊರತು ಮತ್ತೇನೂ ಅಲ್ಲ.

ನಮ್ಮ ರಾಜ್ಯದಲ್ಲಿ ಅದೆಷ್ಟೋ ಜನರಿಗೆ ಈ ಯೋಜನೆಯ ಕುರಿತಾದ ಕನಿಷ್ಠ ಅರಿವೂ  ಇಲ್ಲ. ಈ ನಿಟ್ಟಿನಲ್ಲಿ ಸಾಮಾನ್ಯರಿಗೆ ಅರಿವು ಮೂಡಿಸುವಲ್ಲಿ ಬಿಜೆಪಿಯ ಶಾಸಕರು ಕಾರ್ಯಪ್ರವೃತ್ತರಾಗಲೇ ಇಲ್ಲ.

ನಾಲ್ಕನೆಯದು : ಬ್ಯಾಂಕುಗಳ ಎನ್‌ಪಿಎ  ಸಾಲ) ಹಾಗೂ ವಿಜಯ ಮಲ್ಯ ಹಾಗೂ ನೀರವ್ ಮೋದಿ. ಈ ವಿಚಾರದಲ್ಲಿಯೂ ಅಷ್ಟೆ. ನಿಜಾಂಶ ಏನೆಂದು ಜನರಿಗೆ ತಿಳಿದಿದೆ. ಇಷ್ಟೊಂದು ಬೃಹತ್ ಗಾತ್ರದ ಎನ್‌ಪಿಎ ಸೃಷ್ಟಿಯಾಗಲು ಕಾರಣವೇ ಇಂದಿನ ಯುಪಿಎ ಸರಕಾರ. ಅವರ ಅಡಳಿತದಲ್ಲಿ ಬ್ಯಾಂಕುಗಳು ಸಿಕ್ಕ ಸಿಕ್ಕ ಕೈಗಾರಿಕೋದ್ಯಮಿಗಳಿಗೆ ಸಾಲ ನೀಡಿದ್ದವೆಂಬ ಸತ್ಯವೂ ಜನರಿಗೆ ತಿಳಿದುಹೋಗಿದೆ. ಯಾವ ಯಾವ ಬ್ಯಾಂಕುಗಳು ಎನ್‌ಪಿಎ ಯನ್ನು ಮುಚ್ಚಿಟ್ಟಿದ್ದವು ಎಂಬ ಸತ್ಯವೂ ಜನರಿಗೆ ಈಗಾಗಲೇ ತಿಳಿದಿದೆ. ಒಂದಂತೂ ನಿಜ. ಈ ಎನ್‌ಪಿಎ  ಈಗಿನ ಎನ್‌ಡಿಎ ಸರಕಾರವು ಹೊರ ತಂದು ಜನರ ಮುಂದೆ ಇಡದಿದ್ದರೆ, ನಾವು ನೀವೆಲ್ಲ ಇಷ್ಟು ಹೊತ್ತಿಗೆ ಬೀದಿಗೆ ಬರಬೇಕಿತ್ತು. ಒಮ್ಮೆಯಾದರೂ  ಕ್ಲೀನಪ್ ಕೆಲಸವು ಆಗಲೇಬೇಕಿತ್ತು. ಅದು ಈಗ ಅಗಿದೆ.

ಇನ್ನು ವಿಜಯ ಮಲ್ಯ ಹಾಗೂ ನೀರವ್ ಮೋದಿಯ ವಿಷಯಕ್ಕೆ ಬರುವುದಾದರೆ, ಇವರಿಗೆ ಸಾಲವನ್ನು ನೀಡಿದ್ದೇ ಹಿಂದಿನ ಯುಪಿಎ ಸರಕಾರವೆಂಬ ಸತ್ಯ ಎಲ್ಲರಿಗೂ ಗೊತ್ತು. 2012ರಲ್ಲಿ ಬ್ಯಾಂಕ್‌ಗಳು ಕೊಡಲು ನಿರಾಕರಿಸಿದರೂ, ಸರಕಾರದ ಒತ್ತಡದಿಂದ ಇದೇ ವಿಜಯ ಮಲ್ಯನಿಗೆ  1600 ಕೋಟಿ  ಸಾಲವನ್ನು ನೀಡಿದ್ದವು.

ಈಗ ವಿಜಯ ಮಲ್ಯನ ಮೇಲೆ ಕಿರುಚಾಡುವ ಅರ್ನಾಬ್ ಗೋಸ್ವಾಮಿ ಇದೇ ಮಲ್ಯನ ಕಿಂಗ್‌ಫಿಷರ್ ಸಂಸ್ಥೆ ವಿಮಾನ ಟಿಕೆಟ್ ದರವನ್ನು ಬೆಂಗಳೂರಿನಿಂದ, ಮುಂಬಯಿಗೆ ಕೇವಲ 999ರುಪಾಯಿ ಇಟ್ಟಿದ್ದಾಗ ತುಟಿಯನ್ನೇ ಬಿಚ್ಚಲಿಲ್ಲ.  ಈತನಿಗೆ ತಲೆ ಇರಲಿಲ್ಲವೇ, ಯಾರಾದರೂ ಅಷ್ಟು ಕಡಿಮೆ ದರದಲ್ಲಿ ಕೊಟ್ಟು ನಷ್ಟವನ್ನು ಮಾಡಿಕೊಂಡು ವ್ಯವಹಾರವನ್ನು ಮುಂದು ವರಿಸಲು ಸಾಧ್ಯವೇ? ಈ ನಷ್ಟವನ್ನು ವಿಜಯ ಮಲ್ಯ ತನ್ನ ಅಪ್ಪನ ದುಡ್ಡಿನಿಂದ ಭರಿಸುತ್ತಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಬ್ಯಾಂಕಿನ  ಭರಿಸುತ್ತಿದ್ದಾನೆಂಬ ಸಾಮಾನ್ಯ ಜ್ಞಾನ ಯಾರಿಗೂ ಇರಲಿಲ್ಲವೇ? ಊರು ಕೊಳ್ಳೆಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತೆ, ಚೆನ್ನಾಗಿ ನಾಮ ಹಾಕಿಸಿಕೊಂಡ ಮೇಲೆ ಈಗ ಹಾರಾಡಿದರೆ, ಜನರಿಗೆ ಅರ್ಥವಾಗದಷ್ಟು ಮೂರ್ಖತನವಿಲ್ಲವೆಂಬುದು ರಾಹುಲ್‌ಗಾಂಧಿ ಅಂಡ್ ಟೀಮ್‌ಗೆ ತಿಳಿದಿಲ್ಲ.

ಐದನೆಯದು ಹಾಗೂ ಅತಿ ಮುಖ್ಯವಾದದು. ಸಂವಿಧಾನ ತಿದ್ದುಪಡಿಗಳ ಹೇಳಿಕೆಗಳ ರಾಜಕಾರಣ. ನಮ್ಮ ಸಂಸದ, ಪುಣ್ಯಾತ್ಮ ತನ್ನ ಬಾಯನ್ನು ಮುಚ್ಚಿಕೊಂಡೇ ಇರುವುದಿಲ್ಲ. ಏನಾದರೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಎಲ್ಲೋ, ಏನೋ ಮಾತನಾಡುವಾಗ ಸಂವಿಧಾನವನ್ನು ತಿದ್ದುಪಡಿ  ಹೇಳಿದ ವಿಷಯವು ಇಡೀ ರಾಷ್ಟ್ರದಲ್ಲಿ ಹೆಚ್ಚು ಚರ್ಚೆಗೆ ಒಳಗಾಯಿತು. ಇಲ್ಲಿಯೂ ಅಷ್ಟೇ. ಅನಂತಕುಮಾರ ಹೆಗಡೆ ಸದನದಲ್ಲಿ ಕ್ಷಮೆಯನ್ನು ಕೇಳಿಯಾಗಿತ್ತು.

ತನ್ನ ಅಜ್ಜಿಯು ಸಂವಿಧಾನವನ್ನು ತನ್ನ ವೈಯಕ್ತಿಕ ಡೈರಿಯಂತೆ ಭಾವಿಸಿ, 1975ರಲ್ಲಿ ಸ್ವಾರ್ಥಕ್ಕೋಸ್ಕರ ಯಾವ ರೀತಿಯ ತಿದ್ದುಪಡಿ ಮಾಡಿದ್ದಾರೆಂಬ ಅರಿವಿದ್ದರೂ ಗಾಜಿನಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ರೀತಿ, ಅನಂತಕುಮಾರ ಹೆಗಡೆ ಹೇಳಿಕೆಯನ್ನು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಲು ಹೋಗಿ, ತಾನು ತೋಡಿದ ಖೆಡ್ಡಾಕ್ಕೆ ತಾನೇ ಬಿದ್ದು ಅವಮಾನವಾಗಿದ್ದರೂ, ಮತ್ತದೇ ರಾಗ  ಈತನಿಗೆ ಕೈಜೋಡಿಸಲು ಕೆಲವು ಗಂಜಿ ಗಿರಾಕಿಗಳು ಏನು ದೇಶಾದ್ಯಂತ ಪ್ರತಿಭಟನೆಗಳನ್ನು ಮಾಡಿದವು. ಏನೂ ಉಪಯೋಗಕ್ಕೆ ಬರಲಿಲ್ಲ.  ಹಾರ್ದಿಕ್ ಪಟೇಲ್, ಜಿಗ್ನೇಶ ಮೇವಾನಿಯಂತಹ ತಲೆತಿರುಕ ಪಡ್ಡೆ ಹುಡುಗರನ್ನು ಜತೆಯಲ್ಲಿಟ್ಟುಕೊಂಡು ರಾಜಕೀಯ ಮಾಡಲು ಹೋಗಿ ಎಡವಿದ್ದಾಯಿತು. ಇಷ್ಟಾದರೂ ಮತ್ತೆ ಸಂವಿಧಾನ ತಿದ್ದುಪಡಿ ಹೇಳಿಕೆ ಇತ್ಯಾದಿ..ಇತ್ಯಾದಿ.

ಆರನೆಯದು: ರೈತರ ಸಾಲಮನ್ನಾ ಮಾಡಲಿಲ್ಲವೆಂದು ಮೋದಿಯ ಮೇಲೆ ಗೂಬೆ ಕೂರಿಸಲು ಹೋಗಿ, ಅದರ ಬಗ್ಗೆ ರೈತರಿಗೆ ಈಗಾಗಲೇ ಉತ್ತರ ಸಿಕ್ಕಿದರೂ ಮತ್ತೆ ಅದೇ ರಾಗ ಹಾಡುತ್ತಿದ್ದಾರೆ.  ತಿಳಿದಿರುವಂತೆ ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ ರಾಜ್ಯ ಸರಕಾರಗಳು ಸಾಲಮನ್ನಾವೆಂಬ ತಮ್ಮ ಕರ್ತವ್ಯ ಮಾಡಿ ಮುಗಿಸಿವೆ. ಇನ್ನು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲು ಹೋದರೆ ಕನಿಷ್ಠವೆಂದರೂ 6,00,000 ಕೋಟಿ ರುಪಾಯಿಯಷ್ಟು ಹೊರೆಯನ್ನು ಕೇಂದ್ರ ಸರಕಾರವು ಹೊರಬೇಕಾಗುತ್ತದೆ. ಒಂದು ರಾಜ್ಯದಲ್ಲಿ ಮಾತ್ರ ಮನ್ನಾ ಮಾಡಲು ಸಾಧ್ಯವಿಲ್ಲ. ಮಾಡಿದರೆ ಎಲ್ಲ ರಾಜ್ಯಗಳಿಗೂ ಮಾಡಬೇಕು. ಇಲ್ಲವಾದಲ್ಲಿ, ಮಾಡಲಾಗುವುದಿಲ್ಲ ಎಂಬುದು ಕೇಂದ್ರ ಸರಕಾರದ ನಿಲುವು.

ಇದರ ಜತೆಗೆ ಇತ್ತೀಚೆಗಷ್ಟೇ ದೇಶದಲ್ಲಿಯೇ ಅತಿ ಹೆಚ್ಚು  ಬೆಲೆಯನ್ನು ಘೋಷಿಸಿದ್ದು ಇದೇ ಕೇಂದ್ರ ಸರಕಾರ. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವುದಾಗಿ ಹೇಳಿದ್ದು ಇದೇ ಕೇಂದ್ರ ಸರಕಾರ. ಇಷ್ಟೆಲ್ಲ ವಿಷಯಗಳು ರೈತರಿಗೆ ಈಗಾಗಲೇ ತಿಳಿದುಹೋಗಿದೆ. ಹೀಗಿದ್ದೂ ನಾಲ್ಕು ವರ್ಷಗಳಿಂದ ಮತ್ತದೇ ಹಳೆಯ ರಾಗಗಳನ್ನು ಹಾಡಿ, ಇಪ್ಪತ್ತು ರಾಜ್ಯಗಳನ್ನು ಕಳೆದುಕೊಂಡರು. ಇವರು ಹೇಳಿದ್ದು ನಿಜವಾಗಿದ್ದರೆ, ಜನರೇಕೆ ಮೋದಿಗೆ ವೋಟು ಹಾಕುತ್ತಿದ್ದರು? ರಾಹುಲ್‌ಗಾಂಧಿ ಈ ವಿಷಯಗಳನ್ನು ಬಿಟ್ಟು, ರೈತರ ಬೇರೆ ಸಮಸ್ಯೆಯ ಬಗ್ಗೆ ಸ್ವಲ್ಪ ಸಂಶೋಧನೆಯನ್ನು ಮಾಡಿದರೆ ಒಳ್ಳೆಯದು.

ತೀರಾ ಇತ್ತೀಚಿಗಷ್ಟೇ  ಹೊಸ ವಿಷಯ, ಲಿಂಚಿಂಗ್. ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಒಂದು ಗೋ ಕಳ್ಳಸಾಗಣೆಯ ಘಟನೆಯನ್ನು ದೊಡ್ಡದಾಗಿ ಬಿಂಬಿಸುವ ಪ್ರಯತ್ನವೂ ನಡೆಯಿತು. ಇದರ ವಿಚಾರವಾಗಿ ಸದನದಲ್ಲಿ ಚರ್ಚೆಯೂ ಆಯಿತು. ಅದಕ್ಕೆ ಸರಿಯಾಗಿ ರಾಜನಾಥ್ ಸಿಂಗ್ ಉತ್ತರಿಸಿದ್ದೂ ಆಯಿತು. ಮತ್ತದೇ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದು. ತನ್ನ ಅಜ್ಜಿಯೇ ಪ್ರಧಾನಮಂ ತ್ರಿಯಾಗಿದ್ದ ಸಂದರ್ಭದಲ್ಲಿ 1983ರಲ್ಲಿ ಸಿಖ್ಖರ ವಿರುದ್ಧ ನಡೆದ ಗುಂಪು ಘರ್ಷಣೆಯ ಅರಿವಿದ್ದರೂ ಮೋದಿಯ ಕಡೆಗೆ ಕೈ ತೋರಿಸಿದ್ದು ಮಾತ್ರ ಅಸಹಾಯಕತೆಯೋ,  ನವೋ ತಿಳಿದಿಲ್ಲ. ಅಷ್ಟೇ ಯಾಕೆ, ಇಲ್ಲೇ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ಮಕ್ಕಳ ಕಳ್ಳನೆಂದು ಅನುಮಾನಿಸಿ ಒಬ್ಬ ಅಮಾಯ ಕನನ್ನು ರೋಡಿನಲ್ಲಿ ಹೊಡೆದು ಸಾಯಿಸಲಾಯಿತು. ಆಗ ರಾಜ್ಯದಲ್ಲಿದ್ದುದು ಈತನದೇ ಸರಕಾರ. ಆಗ ಈತನಿಗೆ ಲಿಂಚಿಂಗ್ ನೆನಪಾಗಲಿಲ್ಲವೇ? ಯಾಕೆಂದರೆ ಸತ್ತ ವ್ಯಕ್ತಿಯ ಹೆಸರು ತುಕಾರಾಂ. ಆತ ಯಾವ ಖಾನ್ ಅಥವಾ ಅಹ್ಮದ್ ಆಗಿರಲಿಲ್ಲ.

ಇನ್ನು ಆಂಧ್ರಪ್ರದೇಶದ ಟಿಡಿಪಿಯ ಪರಿಸ್ಥಿತಿಯೂ ಹಾಗೆಯೇ. ಕೊಟ್ಟ ಅನುದಾನಕ್ಕೆ ಸರಿಯಾಗಿ ಲೆಕ್ಕವನ್ನು ಇನ್ನೂ ನೀಡಿಲ್ಲವೆಂಬ ಸತ್ಯ ಈಗ ಜಗಜ್ಜಾಹೀರವಾಗಿದೆ.  ಎಷ್ಟೋ ಜನರಿಗೆ ಇದರ ಅರಿವಿದೆ. ಇದೇ ಚಂದ್ರಬಾಬು ನಾಯ್ಡು , ಎನ್.ಟಿ. ರಾಮರಾವ್ ಹಾಗೂ ವಾಜಪೇಯಿಗೆ ಮಾಡಿದ ಅನ್ಯಾಯವನ್ನು ಆಂಧ್ರಪ್ರದೇಶದ ಜನರು ನೋಡಿದ್ದಾರೆ. ಇಷ್ಟೆಲ್ಲ ಇದ್ದರೂ ಕೇವಲ ‘ವಿಶೇಷ ರಾಜ್ಯದ ಸ್ಥಾನಮಾನ’ ನೀಡಲಿಲ್ಲವೆಂಬ ಕಾರಣಕ್ಕೆ  ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಪ್ರೇರೇಪಣೆ ಮಾಡಿ, ಇಡೀ ದೇಶದ ಮುಂದೆ ಅವಮಾನ ಅನುಭವಿಸುವ ಪರಿಸ್ಥಿತಿ ಇವರಿಗೆ ಬೇಕಿತ್ತಾ? ಇದರ ಮಧ್ಯೆ ಮೋದಿಗೆ ಅಪ್ಪುಗೆಯ ಸಿಂಚನವೂ ಚರ್ಚೆಗೆ ಗ್ರಾಸವಾಯಿತು.

ಮಾತನಾಡಲು ಹಲವಾರು ವಿಷಯಗಳಿರುವಾಗ,  ಹಳೆಯ ರಾಗಗಳನ್ನು ಹಾಡಿ, ಹಾಡಿ ಜನರಿಗೆ ಹುಚ್ಚು ಹಿಡಿಸಿ, ತನ್ನ ಸೋಲಿಗೆ ತಾನೇ ನಾಂದಿಯಾಗುವ ಎಲ್ಲಾ ಲಕ್ಷಣಗಳು ರಾಹುಲ್‌ಗಾಂಧಿ ಅಂಡ್ ಟೀಮ್‌ನಲ್ಲಿ ಎದ್ದು ಕಾಣುತ್ತಿವೆ. ಇಷ್ಟಾದರೂ ಬದಲಾಗಲಿಲ್ಲವೆಂದರೆ, ಅತಿ ಶೀಘ್ರದಲ್ಲಿಯೇ ಮತ್ತೈದು ವರ್ಷ ಅಮ್ಮ ಹಾಗೂ ಮಗ ವಿರೋಧ ಪಕ್ಷದಲ್ಲಿ ಕೂರುವುದು ಗ್ಯಾರಂಟಿ.

Tags

Related Articles

Leave a Reply

Your email address will not be published. Required fields are marked *

Language
Close