About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

2019ರಲ್ಲಿ ಸೋಲುತ್ತೇವೆ ಎಂದು ಆರ್‌ಎಸ್‌ಎಸ್‌-ಬಿಜೆಪಿಗೆ ಗೊತ್ತಿದೆ: ರಾಹುಲ್‌ ಗಾಂಧಿ

ಚಂಫಾಯ್‌ (ಮಿಝೋರಾಂ): ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ  ತಾವು ಗೆಲ್ಲುವುದಿಲ್ಲ ಎಂದು ಬಿಜೆಪಿ ಹಾಗು ಆರ್‌ಎಸ್‌ಎಸ್‌ಗೆ ಚೆನ್ನಾಗಿ ಗೊತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿಳಿಸಿದ್ದಾರೆ.

“ಅಧಿಕಾರಕ್ಕೆ ಬರಲು ಸಂಚು ರೂಪಿಸಿರುವ ಬಿಜೆಪಿ ಹಾಗು ಆರ್‌ಎಸ್‌ಎಸ್‌ ಮುಝೋರಾಮ್‌ ಸಂಸ್ಕೃತಿಯನ್ನು ನಾಶ ಮಾಡಲು ನಿಂತಿವೆ. ಮುಂದಿನ ಲೋಕಸಭಾ ಚುನಾವಣೆ ಗೆಲ್ಲಲು ತಮ್ಮಿಂದ ಆಗದು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ” ಎಂದು ಸಾರ್ವಜನಿಕ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಆಪಾದನೆ ಮಾಡಿದ್ದಾರೆ.

ಈಶಾನ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವ ಏಕೈಕ ರಾಜ್ಯವಾದ ಮಿಝೋರಾಂನಲ್ಲಿ ಇದೇ 28ರಂದು ಚುನಾವಣೆ ನಡೆಯಲಿದೆ. ಮಿಝೋರಾಂನಲ್ಲಿ 40 ವಿಧಾನ ಸಭಾ ಕ್ಷೇತ್ರಗಳಿವೆ.

“ಮಿಝೋರಾಂಅನ್ನು ಪೂರ್ವ ಭಾರತದ ಹೆಬ್ಬಾಗಿಲನ್ನಾಗಿ ಮಾಡಿ, ಮುಂದಿನ ವರ್ಷ 11,000 ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

“1987ರಲ್ಲಿ ನಮ್ಮ ತಂದೆ ಮಿಝೋರಾಂನ ಗಲ್ಲಿಗಳಲ್ಲಿ ಚಾಲನೆ ಮಡಿದ್ದಾರೆ. ಆ ಸಂದರ್ಭ ನಾನು ಅವರೊಂದಿಗೆ ಇಲ್ಲಿಗೆ ಬಂದಿದ್ದೆ. ಚುನಾವಣೆ ಬಳಿಕ ನಾನೂ ಇದನ್ನೇ ಮಾಡಲು ಇಚ್ಛಿಸುತ್ತೇನೆ. ಮಿಝೋರಾಂಗೆ ಬಂದು, ಇಲ್ಲಿ ಓಡಾಡಿ ಜನರನ್ನು ಭೇಟಿ ಮಾಡಲು ಇಚ್ಛಿಸುತ್ತೇನೆ” ಎಂದು ರಾಹುಲ್‌ ತಮ್ಮ ತಂದೆಯನ್ನು ಸ್ಮರಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close