About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ಪ್ರಧಾನಿಗೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಆಗೋಲ್ಲ: ರಾಹು‌ಲ್‌ ಗಾಂಧಿ

ಅಂಬಿಕಾಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ರಫೇಲ್‌ ವಿಚಾರವಾಗಿ ವಾಗ್ದಾಳಿ ನಡೆಸುವುದನ್ನು ಬಿಡದಂತೆ ಕಾಣುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಈ ಕುರಿತು ಬಹಿರಂಗ ಚರ್ಚೆಗೆ ಸವಾಲೆಸೆದಿದ್ದಾರೆ.

“ನಾನು ಪ್ರಧಾನ ಮಂತ್ರಿಗೆ ಸವಾಲೆಸೆಯುತ್ತಿದ್ದೇನೆ– ನನ್ನೊಂದಿಗೆ 15 ನಿಮಿಷಗಳ ಮಟ್ಟಿಗೆ ಎಲ್ಲಿಯಾದರೂ, ಯಾವಗಲಾದರೂ ಕೇವಲ 15 ನಿಮಿಷಗಳ ಮಟ್ಟಿಗೆ ಬಂದು ಚರ್ಚಿಸಲಿ. ಅನಿಲ್ ಅಂಬಾನಿ, ಎಚ್‌ಎಎಲ್‌, ಯುದ್ಧ ವಿಮಾನಗಳ ಬೆಲೆ ಕುರಿತಂತೆ ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆಗಳನ್ನೆಲ್ಲ ಮಾತಿಗೆ ತರುತ್ತೇನೆ. ಈ ಡೀಲ್‌ಅನ್ನು ಪ್ರಧಾನ ಮಂತ್ರಿ ಮಾಡಿದ್ದಾರೆ ಎಂದು  ನೇರವಾಗಿ ಹೇಳುತ್ತೇನೆ. ಪ್ರಧಾನ ಮಂತ್ರಿ ನಿಯಮಾವಳಿಗಳನ್ನು ಪಾಲಿಸಿಲ್ಲ. ಬೆಳಗ್ಗಿನ ಜಾವ 2 ಗಂಟೆಗೆ ಸಿಬಿಐ ನಿರ್ದೇಶಕರನ್ನು ಉಚ್ಛಾಟಿಸಲಾಯಿತು. ಅವರಿಗೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ” ಎಂದು ಛತ್ತೀಸ್‌ಘಡದಲ್ಲಿ ಚುನಾವಣಾ ರ‍್ಯಾಲಿ ಸಂದರ್ಭ ರಾಹುಲ್‌ ಹೇಳಿದ್ದಾರೆ.

ಮೋದಿ ಸರಕಾರದ ನೋಟು ನಿಷೇಧದ ನಡೆಯಿಂದ ದೇಶದಲ್ಲಿರುವ ಕೆಲವೇ ಮಂದಿ ಉದ್ಯಮಿಗಳಿಗೆ ಅನುಕೂಲವಾಗಿದೆ ಎಂದು ಇದೇ ವೇಳೆ ರಾಹುಲ್‌ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close