ವಿಶ್ವವಾಣಿ

ಮತ್ತೊಮ್ಮೆ ಕಣ್ಣು ಹೊಡೆದ ರಾಹುಲ್ ಗಾಂಧಿ!

ದೆಹಲಿ: ಲೋಕಸಭೆಯ ತುಂಬಿದ ಸದನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ಅಪ್ಪಿಕೊಂಡು ಬಳಿಕ ಕಣ್ಣು ಮಿಟುಕಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇದೀಗ ಮತ್ತೆ ಅದೇ ಕೆಲಸ ಮಾಡಿದ್ದಾರೆ.

ರಾಜಸ್ಥಾನದ ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾದ ಸಂದರ್ಭ ತಮ್ಮ ಪಕ್ಷದ ನಾಯಕ ಸಚಿನ್‌ ಪೈಲಟ್‌ರತ್ತ ಕಣ್ಣು ಮಿಟುಕಿಸುವ ವೇಳೆ ವಿಡಿಯೋಗಳಲ್ಲಿ ಸೆರೆಯಾಗಿದ್ದಾರೆ. ಬಳಿಕ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ರನ್ನು ರಾಹುಲ್‌ ಅಪ್ಪಿಕೊಂಡಿದ್ದಾರೆ.

ರಾಜಸ್ಥಾನ ಕಾಂಗ್ರೆಸ್‌ನ ನಾಯಕರ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ಈ ನಡೆಗೆ ರಾಹುಲ್ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.