About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಾಹುಲ್‌ ಆಲಿಂಗನ: ಪ್ರಧಾನಿಗೆ ವೈದ್ಯಕೀಯ ಚೆಕ್‌ಅಪ್‌ ಅಗತ್ಯವಿದೆ ಎಂದ ಸುಬ್ರಮಣಿಯನ್‌ ಸ್ವಾಮಿ

ರಷ್ಯನ್ನರು ಹಾಗು ಕೊರಿಯನ್ನರು ಹೀಗೇ ಅಪ್ಪಿಕೊಂಡು, ಅತಿ ಸಣ್ಣನೆಯ ವಿಷಪೂರಿತ ಸೂಜಿಗಳನ್ನು ಚುಚ್ಚುವ ಮೂಲಕ ಸುಳಿವಿಲ್ಲದಂತೆ ವಿಷಪ್ರಾಶನ ಮಾಡುವ ತಂತ್ರಗಾರಿಕೆ ಮಾಡುತ್ತಾರೆ. ಇದೇ ರೀತಿ ಗುರುತುಗಳು ಸುನಂದಾ ಪುಷ್ಕರ್‌ ಕೈಯಲ್ಲಿ ಕಂಡುಬಂದಿವೆ ಎಂದು ಸ್ವಾಮಿ ಹೇಳಿದ್ದಾರೆ.

ದೆಹಲಿ: ಅನಿರೀಕ್ಷಿತವಾಗಿ ಅಪ್ಪಿಕೊಳ್ಳುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಗೆ ವಿಷಪೂರಿತವಾದ ಸಣ್ಣನೆಯ ಸೂಜಿ ಚುಚ್ಚಿರಬಹುದೆಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಎಚ್ಚರಿಸಿದ್ದಾರೆ.

ಈ ಕುರಿತಂತೆ ಸುಚ್ಯವಾಗಿ ಟ್ವೀಟ್‌ ಮಾಡಿರುವ ಸುಬ್ರಮಣಿಯನ್‌ ಸ್ವಾಮಿ, “ತಮ್ಮನ್ನು ಆಲಂಗಿಸಲು ನಮೋ ಅವರು ಬುದ್ಧುಗೆ ಅನುಮತಿ ನೀಡಬಾರದಿತ್ತು. ರಷ್ಯನ್ನರು ಹಾಗು ಕೊರಿಯನ್ನರು ಅಪ್ಪಿಕೊಳ್ಳುವ ತಂತ್ರಗಾರಿಕೆ ಬಳಸಿ, ಅತಿ ಸಣ್ಣನೆಯ ವಿಷಪೂರಿತ ಸೂಜಿಗಳನ್ನು ಚುಚ್ಚುವ ಮೂಲಕ ಸುಳಿವಿಲ್ಲದಂತೆ ವಿಷಪ್ರಾಶನ ಮಾಡುತ್ತಾರೆ. ಇದೇ ರೀತಿ ಗುರುತುಗಳು ಸುನಂದಾ ಪುಷ್ಕರ್‌ ಕೈಯಲ್ಲಿ ಕಂಡುಬಂದಿವೆ” ಎಂದು ಹೇಳಿದ್ದಾರೆ.

ಲೋಕಸಭೆಯ ಮಾನ್ಸೂನ್‌ ಅಧಿವೇಶನದ ಕಲಾಪದ ವೇಳೆ ಪ್ರಧಾನ ಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್‌ ಗಾಂಧಿ, ತಮ್ಮ ಮಾತು ಮುಗಿಯುತ್ತಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿರನ್, ಅವರಿದ್ದ ಜಾಗಕ್ಕೇ ಹೋಗಿ ಆಲಂಗಿಸಿ ಎಲ್ಲರನ್ನು ಚಕಿತಗೊಳಿಸಿದ್ದರು.

ಈ ಅನಿರೀಕ್ಷಿತ ನಡೆಯ ನಡುವೆಯೂ  ಸ್ಥಿತಪ್ರಜ್ಞರಾಗಿ ಕುಳಿತಿದ್ದ ಪ್ರಧಾನಿ ಬಳಿಕ ರಾಹುಲ್‌ಗೆ ಹಸ್ತಲಾಘವ ಮಾಡಿದ್ದರು.

ಈ ಕುರಿತು ಮಾತನಾಡಿದ ಸುಬ್ರಮಣಿಯನ್‌ ಸ್ವಾಮಿ, “ಪ್ರಧಾನ ಮಂತ್ರಿಯನ್ನು ರಾಹುಲ್ ಗಾಂಧಿ ಹಾಗೆ ಅಪ್ಪಿಕೊಳ್ಳಬಾರದಿತ್ತು. ಸಂಸತ್ತಿನೊಳಗೆ ಪ್ರಧಾನಿ ಭದ್ರತೆ ಕುರಿತು ಈ ನಡೆಯಿಂದ ಆತಂಕ ಪಡುವಂತಾಗಿದೆ. ರಾಹುಲ್‌ ನಡೆ ವಿವೇಚನಾರಹಿತವಾಗಿದ್ದು ಮುಂದಿನ ದಿನಗಳಲ್ಲಿ ಈ ರೀತಿಯ ನಡೆಗಳು ಆಗದಂತೆ ನೋಡಿಕೊಳ್ಳಬೇಕಿದೆ” ಎಂದು ಹೇಳಿದ್ದಾರೆ.

ತಮ್ಮ ಭಾಷಣ ಮುಗಿಯುತ್ತಲೇ ಪ್ರಧಾನಿಯತ್ತ ಧಾವಿಸಿದ ರಾಹುಲ್‌, ಪ್ರಧಾನಿಯನ್ನು ಆಲಂಗಿಸಿದ್ದಾರೆ. ಬಳಿಕ ಈ ಕುರಿತು ಮಾತನಾಡಿದ ಪ್ರಧಾನಿ,”ಅಷ್ಟು ದೂರ ಬಂದು ನನ್ನನ್ನು ಅಪ್ಪಿಕೊಳ್ಳುಲು ರಾಹುಲ್‌ ತೋರಿದ ಉತ್ಸಾಹ ಕಂಡು ಚಕಿತನಾದೆ. ಏಕಿಷ್ಟು ಆತುರ? ಪ್ರಜಾಪ್ರಭುತ್ವದಲ್ಲಿ ಜನರ ಮೇಲೆ ನಂಬಿಕೆ ಇಡಬೇಕು. ಕೆಲ ಜನರಿಗೆ ಅಧಿಕಾರಕ್ಕೆ ಬರಲು ಬಹಳ ಆತುರವಿದೆ” ಎಂದು ಹೇಳಿದ್ದರು.

ಸಂಬಂಧಿತ ಲಿಂಕ್‌ಗಳು

https://www.vishwavani.news/speaker-slmas-rahul/

https://www.vishwavani.news/rahulgandhihugsmodi/

https://www.vishwavani.news/rahulgandhispeaksinparliament/

https://www.vishwavani.news/ಆಧಾರವೇ-ಇರದ-ರಾಹುಲ್%e2%80%8c-ಮಾತುಗ/

Tags

Related Articles

Leave a Reply

Your email address will not be published. Required fields are marked *

Language
Close