About Us Advertise with us Be a Reporter E-Paper

ಅಂಕಣಗಳು

ರಾಹುಲ್ ಅವರ ಅಪ್ರಬುದ್ಧತೆ; ತಿದ್ದಬಾರದು ಯಾಕೆ?

ವಿಮರ್ಶೆ: ದೇ. ವಿ. ಮಹೇಶ್ವರ ಹಂಪಿನಾಯ್ಡು

ಇತ್ತೀಚೆಗೆ ಕಿರುತೆರೆಯ ರಿಯಾಲಿಟಿ ಶೋಗಳು ಹಾಗೂ ಹಾಸ್ಯ ಕಾರ್ಯಕ್ರಮಗಳು ಮನರಂಜನೆಯೊಂದಿಗೆ ಟಿಆರ್‌ಪಿಯನ್ನು ಸಲಹುವ ಜನಪ್ರಿಯ ವೇದಿಕೆಗಳಾಗಿ ಮೂಡಿ ಬರುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಕಲಾವಿದರು ಹಾಸ್ಯದ ನೆಪದಲ್ಲಿ ವ್ಯಕ್ತಪಡಿಸುವ ಸಂಭಾಷಣೆಯಾಗಲಿ ತೋರುವ ಹಾವಭಾವವಾಗಲಿ, ಅದರ ಕಾಮಿಡಿ ಟೈಮಿಂಗ್ ಆಗಲಿ ಸ್ವಲ್ಪ ಎಲ್ಲೆ ಮೀರಿದರೂ ಅದು ಅಪಹಾಸ್ಯಕ್ಕೆ  ಈ ಪಾತ್ರಗಳನ್ನು ಸೂಕ್ಷ್ಮವಾಗಿ ಗಮನಿಸುವ ಬುದ್ದಿವಂತ ಪ್ರೇಕ್ಷಕ ಪಾತ್ರದಲ್ಲಿನ ಅತಿರೇಕ (ಓವರ್ ಆಕ್ಟಿಂಗ್)ವನ್ನು ತಕ್ಷಣ ಗ್ರಹಿಸಿ ಓ ಇದು ಅತಿಯಾಯ್ತು ಅಥವಾ ಬಾಲಿಶ ಎಂಬುದನ್ನು ಕೂಡಲೇ ನಿರ್ಧರಿಸಿಬಿಡುತ್ತಾನೆ. ಇನ್ನು ಮನೆಗಳಲ್ಲಿ, ಶಾಲಾ- ಕಾಲೇಜಿನ ವಿದ್ಯಾರ್ಥಿಯಾಗಿರುವವನು ಯಾವುದಾದರೂ ಒಂದು ವಿಚಾರ ದಲ್ಲಿ ಮುಗ್ಧತೆ ಮೀರಿ ನಾಟಕೀಯ, ಅಪ್ರಾಸಂಗಿಕ ಅಪ್ರಬುದ್ಧತೆ-ಪೆದ್ದುತನ ಪ್ರದರ್ಶಿಸಿದರೆ ಅದು ಕೂಡಲೇ ಹೆತ್ತವರಿಗೆ ಅಥವಾ ಶಿಕ್ಷಕರಿಗೆ ತಿಳಿದುಬಿಡುತ್ತದೆ. ಇದನ್ನು ಕಂಡುಹಿಡಿಯಲು ಯಾವುದೇ ಪ್ರಚಂಡ ಬುದ್ದಿವಂತಿಕೆಯ ಅವಶ್ಯಕತೆ ಇಲ್ಲ.

ಇನ್ನು  ಸ್ಥಳಗಳಾದ ಬಸ್‌ನಿಲ್ದಾಣ, ಸಾರ್ವಜನಿಕ ವಾಹನಗಳಲ್ಲಿ, ಚಿತ್ರಮಂದಿರ, ಹೋಟೆಲ್, ಇನ್ನಿತರ ಸ್ಥಳಗಳಲ್ಲಿ ಹುಚ್ಚುಚ್ಚಾಗಿ ವರ್ತಿಸಿದರೆ ಎರಡು ಬಾರಿಸಿ ಕಳಿಸುತ್ತಾರೆ. ಇದನ್ನೇ ನ್ಯಾಯಾಲಯ ಆರಕ್ಷಕ ಠಾಣೆ, ಸರಕಾರಿ ಕಚೇರಿಯಂತಹ ಗಂಭೀರ ಸ್ಥಳಗಳಲ್ಲಿ ಅವಿವೇಕದ ವರ್ತನೆ ಅಸಂಬದ್ಧ ನಡೆವಳಿಕೆಯನ್ನು ತೋರಿದರೆ ಕತ್ತು ಹಿಡಿದು ದಬ್ಬಿಸುತ್ತಾರೆ. ಇಲ್ಲವಾದರೆ ಗಂಭೀರ ಕ್ರಮ ಕೈಗೊಳ್ಳುತ್ತಾರೆ. ನಮ್ಮ ಜನ ಎಷ್ಟು ಸೂಕ್ಷ್ಮವಾಗಿ ಯೋಚಿಸುತ್ತಾರೆ ಎಂದರೆ ಭಾರತರತ್ನ ಸಚಿನ್ ತೆಂಡೂಲ್ಕರ್ ಅವರು ಒಂದು ಕಾಲದಲ್ಲಿ ದಾಖಲೆಗಳಿಗಾಗಿ ಆಡುತ್ತಾರೆ, ಶತಕಗಳನ್ನು ಪೂರೈಸಿಕೊಳ್ಳುವುದಕ್ಕೆ  ಆಡುತ್ತಾರೆ ಎಂಬ ಆರೋಪವನ್ನು ಮಾಡಿದ್ದರು. ಇನ್ನು ಸಾಧುಸಂತರು, ಸ್ವಾಮೀಜಿಗಳ ಭಕ್ತರೊಡನೆಯ ಒಂದು ನಗು, ಒಂದು ಮಾತು ಏರುಪೇರಾದರೂ ಅದನ್ನು ಅನರ್ಥವಾಗಿ ಬಿಂಬಿಸುವ ಅತಿ ಬುದ್ಧಿವಂತರಿದ್ದಾರೆ. ಪತ್ರಿಕೋದ್ಯಮದಲ್ಲಿ ಒಂದು ವರದಿ, ಲೇಖನ ಅಥವಾ ಸುದ್ದಿಯಲ್ಲಿನ ಚರ್ಚೆ ಸಂದರ್ಶನಗಳಲ್ಲಿ ಒಂದು ವಾಕ್ಯ ಒಂದು ಪದ ಹೆಚ್ಚುಕಮ್ಮಿಯಾದರೂ ಓ ಈ ಮಾಧ್ಯಮ ಈ ಪಕ್ಷದವರು, ಆ ಪಕ್ಷದವರು, ಇವರು ಅವರ ಪರವಾಗಿಯೇ ಬರೆಯುತ್ತಾರೆ ಎಂದು ಷರಾ ಬರೆದು ಬಿಡುವ ಬುದ್ದಿಜೀವಿಗಳು, ವಿಚಾರವಾದಿಗಳಿದ್ದಾರೆ. ಇನ್ನು  ವಾಹನಗಳನ್ನು ಅಪ್ಪಿತಪ್ಪಿ ಅಡ್ಡಾದಿಡ್ಡಿ ಚಲಾಯಿಸಿದರೆ ಬಾಯಿಗೆ ಬಂದಂತೆ ಉಗಿದು ಹೋಗುತ್ತಾರೆ. ಸುದ್ದಿವಾಚಕರು ಉಚ್ಚಾರಣೆಯಲ್ಲಿ ಒಂದು ಅಕ್ಷರ ತಪ್ಪಾಗಿ ಓದಿದರೂ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ವರ್ಷಗಟ್ಟಲೆ ಕಷ್ಟಪಟ್ಟು ಚಿತ್ರಿಸಿದ ಅದ್ದೂರಿ ಚಲನಚಿತ್ರಗಳನ್ನೇ ಕೇವಲ ಎರಡು ಗಂಟೆಗಳಲ್ಲಿ ನೋಡಿ ಇದು ಡಬ್ಬ ಪಿಕ್ಚರ್ ಎಂದು ಎದ್ದು ಬರುತ್ತಾರೆ.

ಆದರೆ ಭಾರತದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗೂ ತಿಳಿದಿರುವ ಸಂಗತಿಯೆಂದರೆ, ‘ರಾಹುಲ್‌ಗಾಂಧಿ ಎಂದರೆ ಅದು ತಿಲಕಾಷ್ಠ ಮಹಿಷ ಬಂಧನ.’ ರಾಹುಲ್‌ಗಾಂಧಿಯವರ ಇಂತಹ ವರ್ತನೆ ಹೊಸದೇನಲ್ಲ.  ಸಾರ್ವಜನಿಕರಿಗೂ ಮನದಟ್ಟಾಗಿಹೋಗಿದೆ. ಮಧ್ಯಪ್ರಾಚ್ಯ ದೇಶಗಳ ಸಂಘಟನೆ ‘ಮುಸ್ಲಿಂ ಬ್ರದರ್‌ಹುಡ್’ನ್ನು ‘ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘ’ಕ್ಕೆ  ಸಮೀಕರಿಸಿದ್ದಂತೂ ಅವರಿಂದ ಘಟಿಸಿದ ಅಕ್ಷಮ್ಯ ಪ್ರಮಾದ.

ಸಂಘದ ನಾಯಕರು ಮಾತ್ರ ಎಂದಿನ ಘನತೆಯ ಪ್ರತಿಕ್ರಿಯೆ ನೀಡಿದರು. ರಾಹುಲ್ ಯಾವಾಗಲೂ ಭಾರತದ ಇತಿಹಾಸ, ಸಂಸ್ಕೃತಿ, ಪರಂಪರೆ ಬಗ್ಗೆ ತಮಗೆ ಹೆಚ್ಚೇನೂ ತಿಳಿದಿಲ್ಲ ಎನ್ನುತ್ತಿರುತ್ತಾರೆ. ಹಾಗೆಂದ ಮೇಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಅವರಿಗೆ ಹೇಗೆ ತಿಳಿದಿರಲು ಸಾಧ್ಯ? ಯಾವಾಗ ಕಾಂಗ್ರೆಸ್ ಅಧ್ಯಕ್ಷರಿಗೆ ದೇಶದ  ಆಳವಾದ ಅರಿವು ದೊರಕುತ್ತದೋ ಅಂದೇ ಸಂಘದ ನೈಜ ಚಿತ್ರಣವೂ ಅವರಿಗೆ ಸಿಗುತ್ತದೆ ಎಂದು ಸೌಜನ್ಯಪೂರ್ವಕವಾಗಿಯೇ ತಿರುಗೇಟು ನೀಡಿದರು. ತಮ್ಮ ಒಂದು ಸಮಾವೇಶಕ್ಕೆ ಸಂಘ ಈಗಾಗಲೇ ರಾಹುಲ್ ಗೆ ಆಹ್ವಾನ ನೀಡಿದೆ.

ವರನಟ ಡಾ.ರಾಜ್ ಅವರು ಪಾಪಿ ವೀರಪ್ಪನ್‌ನಿಂದ ಅಪಹರಣವಾದ ದಿನಗಳಲ್ಲಂತೂ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣರ ಮಾತಿನ ಒಂದೊಂದು ಅಕ್ಷರವೂ, ಅವರ ನಡೆಯೂ ಸಾರ್ವಜನಿಕರಲ್ಲಿ ಸೂಕ್ಷ್ಮಾತಿಸೂಕ್ಷ್ಮವಾಗಿ ಪ್ರತಿಬಿಂಬಿಸುತ್ತಿದ್ದವು. ಅವುಗಳನ್ನು ಅವರು ನಿರ್ವಹಿಸಿದ ರೀತಿ ಮಾತ್ರ ಎಂತಹ ರಾಜಕಾರಣಿಗೂ ಪಾಠವೇ.

ಇಂದು  ದಾಳಿಯಾಗಲಿ ಇನ್ನಾವುದೇ ಸವಾಲಿನ ಸಂದರ್ಭದಲ್ಲಾಗಲಿ ಡಿ.ಕೆ. ಶಿವಕುಮಾರ್ ಅವರು ತೋರುವ ಚಾತುರ್ಯ, ಚಾಣಾಕ್ಷತನ, ಮಾತಿನ ವರಸೆ ಅವರ ಗಟ್ಟಿತನವನ್ನು, ಪ್ರಬುದ್ಧತೆಯನ್ನು ತೋರುತ್ತದೆ. ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ, ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರೇನು ಸಾಮಾನ್ಯರೇ?

ಸರ್ವೇಸಾಧಾರಣವಾಗಿ ರಾಜಕೀಯದ ಮಹಾ ನಾಯಕರು ಮಾತಿನ ಮಲ್ಲರು. ಇವರ ಮುಂದೆ ಒಂದು ಮಾತು ತಪ್ಪಾಗಿ ಆಡಿದರೂ, ತಪ್ಪು ತೋರಿಸಿ ಝಾಡಿಸಿಬಿಡುತ್ತಾರೆ. ದೇವೇ ಗೌಡರು, ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು  ರಾಷ್ಟ್ರದ ರಾಜಕೀಯ ನಾಯಕರೆಲ್ಲರೂ ಸಮಯಬಂದರೆ ನವಿಲನ್ನೂ, ಗೂಬೆ ಎಂದು ವಾದಿಸಿಬಿಡುವ ಚಾಣಾಕ್ಷರು. ಮೋದಿಯವರ ಒಂದೊಂದು ನಡೆ, ಉಡುಗೆ- ತೊಡುಗೆಗಳನ್ನು, ಅದರ ಬೆಲೆಯನ್ನೂ ಸೂಕ್ಷ್ಮವಾಗಿ ಗಮನಿಸಿ ಅದನ್ನು ಪ್ರಶ್ನಿಸುತ್ತಾರೆ ಹಾಗೂ ಹಾಗೆ ಮಾಡಲೇಬೇಕಿದೆ. ಇದು ಪ್ರಜಾಪ್ರಭುತ್ವಕ್ಕೆ ಸಂವಿಧಾನ ನೀಡಿದ ಹಕ್ಕು. ಸಾಮಾಜಿಕ ತಾಣಗಳಲ್ಲಂತೂ ರಾಜಕೀಯ ನಾಯಕರ ನಡೆಗಳು ಪಕ್ಷಾತೀತ ವಾಗಿ ಖಂಡಿಸಲ್ಪಟ್ಟು ಅಪಹಾಸ್ಯಕ್ಕೆ ಒಳಗಾಗಿದ್ದಿದೆ. ಸಿದ್ದರಾಮಯ್ಯನವರು ಬಿಸ್ಕೆಟ್ ತಿನ್ನಲು ವ್ಯಯಿಸಿದ ಖರ್ಚು ಲಕ್ಷಗಟ್ಟಲೆ ರು.ದಾಟಿದ್ದನ್ನು ನೋಡಿ ಪ್ರಶ್ನಿಸಿದ್ದಿದೆ. ಸಿದ್ದರಾಮಯ್ಯನವರೂ ಸೇರಿ  ನಾಯಕರು ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕ ತೋರುವ ಮತದಾರನನ್ನು, ಅಭಿಮಾನಿಗಳನ್ನು, ಸ್ವಜಾತಿಯವರನ್ನೂ ಸಹ ಸಹಿಸಿಕೊಳ್ಳದೆ ನಾಯಿಗೆ ದೂಡಿದ ಸನ್ನಿವೇಶಗಳಿವೆ. ರಾಜಕೀಯ ನಾಯಕರು, ತಮ್ಮ ಸಹಾಯಕರು ಅರಿವಿಲ್ಲದೆ ಒಂದು ಸಣ್ಣ ದೋಷ ಎಸಗಿದರೂ ಸಹಿಸಿಕೊಳ್ಳುವುದಿಲ್ಲ. ತಪ್ಪು ಮಾಡಿದರೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನೂ ಮುಲಾಜಿಲ್ಲದೆ ತರಾಟೆತೆ ತೆಗೆದುಕೊಳ್ಳುತ್ತಾರೆ.

ಆದರೆ ಮೊನ್ನೆಮೊನ್ನೆ ನೋಡಿ, ಈ ದೇಶದ ಭವಿಷ್ಯದ ಪ್ರಧಾನಿ ಎಂದು ಹೇಳಿಸಿಕೊಂಡು ಅಡ್ಡಪಲ್ಲಕ್ಕಿ ಏರಿ ಸಾಗುತ್ತಿರುವ ರಾಹುಲ್‌ಗಾಂಧಿ ಮಹಾಶಯ ಜರ್ಮನಿಯಲ್ಲಿ, ನಂತರ ಲಂಡನ್‌ನಲ್ಲಿ ಆಡಿದ  ಹಾಗೂ ಅಲ್ಲಿ ತಮ್ಮ ದೇಶದ ಕುರಿತು ವ್ಯಕ್ತಪಡಿಸಿದ ವಿಷಯಗಳು ಮೊದಲಿಗೆ ಇವರು ಭಾರತ ದೇಶದವರೋ ಅಥವಾ ಅಜ್ಞಾನಿಯೋ ಎಂಬ ಪ್ರಶ್ನೆಗಳನ್ನು ಮೂಡಿಸಿತು. ಇಷ್ಟಕ್ಕೂ ರಾಹುಲ್‌ಗಾಂಧಿಗೆ ಭಾರತದ ವೈಚಾರಿಕತೆ, ಇತಿಹಾಸ, ಪರಂಪರೆ, ವಾಸ್ತವಗಳ ಕನಿಷ್ಠ ಅರಿವು ಇದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪಾಪ, ಹೊರ ದೇಶದವರಿಗೆ ಈತ ಮಹಾತ್ಮ ಗಾಂಧೀಜಿಯವರ ಅದ್ಭುತ ವಾರಸುದಾರ, ವೇದಾಂತಿ, ವಿದ್ವಾಂಸ, ಪಂಡಿತ, ಚತುರ, ಮೇಧಾವಿ ಎಂಬಂತೆ ಭಾಸ ವಾಗಬಹುದು. ಆದರೆ ರಾಹುಲ್‌ಗಾಂಧಿಯವರ ಇಂತಹ ವರ್ತನೆ  ಅದು ಸಾರ್ವಜನಿಕರಿಗೂ ಮನದಟ್ಟಾಗಿಹೋಗಿದೆ.

ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಪ್ರಧಾನಿಯನ್ನು ವಿನಾಕಾರಣ ಅಪ್ಪಿಕೊಂಡ ರೀತಿ ಸಾಕ್ಷಾತ್ ಸಭಾಪತಿಗೇ ಕಸಿವಿಸಿ ಮೂಡಿಸಿತ್ತು. ಇಂತಹ ಕೆಲಸವನ್ನು ಕುಡುಕನೊಬ್ಬ ಕುಡಿದ ಅಮಲಿನಲ್ಲಿ ಇನ್ನಾರನ್ನೋ ಮೆಚ್ಚಿಸಲು ಮಾಡಿಬಿಡುತ್ತಾನೆ. ರಾಹುಲ್‌ಗಾಂಧಿಯ ಪ್ರತಿಯೊಂದು ಹಾವಭಾವ, ನಡೆ ನುಡಿಗಳೂ ಸಾಮಾಜಿಕ ತಾಣಗಳಲ್ಲಿ ಹಾಸ್ಯದ ಸರಕಾಗಿ ಹೋಗಿದೆ. ಬರೆದುಕೊಟ್ಟದ್ದನ್ನೂ ಸರಿಯಾಗಿ ಉಚ್ಚರಿಸದ ರೀತಿ, ಅವೈಜ್ಞಾನಿಕ ಆಲೂಗಡ್ಡೆ ಭಾಷಣ, ಪೂರ್ವಾಪರ ಇತಿಹಾಸದ ಜ್ಞಾನವಿಲ್ಲದ ಅಭಿಪ್ರಾಯಗಳು-ಹೇಳಿಕೆಗಳು-ಎಲ್ಲವೂ ಗಾಂಧಿ ಪದದ ಗಂಭೀರತೆಯನ್ನೇ ಕೆಳಗುಂದಿಸಿದೆ. ಈ ದೇಶ ಕಂಡ  ವಕೀಲರೆನಿಸಿದ ರಾಮ್ ಜೆಠ್ಮಲಾನಿಯವರು ಸಂದರ್ಶನವೊಂದರಲ್ಲಿ ರಾಹುಲ್‌ಗಾಂಧಿಯವರ ಬಗ್ಗೆ ಕೇಳಿದಾಗ ‘ಆತನ ಹೆಸರು ಕೇಳಿದರೆ ಕೋಪ ಬರುತ್ತದೆ. ಆತನನ್ನು ನನ್ನ ಕಚೇರಿಯಲ್ಲಿ ಒಬ್ಬ ಸಾಮಾನ್ಯ ಕ್ಲರ್ಕ್ ಆಗಿಯೂ ಇಟ್ಟುಕೊಳ್ಳುವುದಿಲ್ಲ’ ಎಂದು ಹೇಳಿರುವುದೇ ಸಾಕು, ರಾಹುಲ್‌ಗಾಂಧಿಯ ಬಂಡವಾಳ ಬಯಲುಮಾಡಲು.

ಆದರೆ ದುರಂತವೆಂದರೆ, ಇಷ್ಟೆಲ್ಲಾ ಅಪಹಾಸ್ಯ-ಟೀಕೆಗಳು ದೊಡ್ಡವರಿಂದ ಹಿಡಿದು ಸಾಮಾನ್ಯರವರೆಗೆ ವ್ಯಕ್ತವಾದರೂ ಒಬ್ಬನೇ ಒಬ್ಬ ಕಾಂಗ್ರೆಸಿಗ ಇವುಗಳನ್ನು ಟೀಕಿಸುವ, ಸರಿಪಡಿಸುವ ಅಥವಾ ಎಚ್ಚರಿಸುವ ಕೆಲಸವನ್ನೇ ಮಾಡುವುದಿಲ್ಲ. ಕರೆದು ಬುದ್ಧಿ ಹೇಳುವುದು, ಖಂಡಿಸುವದಂತೂ ಇಲ್ಲವೇ  ಯಾರೋ ಮಾಡಿದ ತಪ್ಪಿಗೆ ದೇಶದ ಅತಿ ದೊಡ್ಡ ರಾಜ್ಯದ ಮುಖ್ಯಮಂತ್ರಿಗೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಹೇಳುವ ಗೂಂಡಾಗಳ ಬಾಯಲ್ಲಿ ಈಗ ಯಾರ ಚಪ್ಪಲಿ ಇದೆ ಎಂದು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾಂತಂತ್ರ ಪ್ರತಿಯೊಬ್ಬರಿಗೂ ಇದೆ.

ಮೇಲೆ ಹೇಳಿದಂತೆ ಸಾರ್ವಜನಿಕ ಬದುಕಿನಲ್ಲಿ ಮುಗ್ಧ ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದರೆ ಕೂಡಲೇ ಕಿವಿ ಹಿಂಡಿ ಸರಿ ಮಾಡುತ್ತಾರೆ. ಅಂತಹ ದರಲ್ಲಿ ಬರೋಬ್ಬರಿ 47 ವರ್ಷದ ವ್ಯಕಿ,್ತ ಅದರಲ್ಲೂ ದೇಶದ ದೊಡ್ಡ ರಾಜಕೀಯ  ಅಧಿನಾಯಕ ಹಾಗೂ ಮುಂದಿನ ಪ್ರಧಾನಿ ಹುದ್ದೆಗೆ ಏರಲಿರುವವರು ಅಪ್ರಬುದ್ಧನಂತೆ, ವಿದೂಷಕನಂತೆ ವರ್ತಿಸುವುದನ್ನು ಕಾಂಗ್ರೆಸ್‌ನ ಎಲ್ಲಾ ಮುಖಂಡರೂ ಅಖಾಡಕ್ಕೆ ಪ್ರಾಣಿಯನ್ನು ಬಿಟ್ಟ ಸರ್ಕಸ್ ಕಂಪನಿಯ ಮಾಲೀಕರಂತೆ ನೋಡಿಕೊಂಡು ಸುಮ್ಮನಿರುತ್ತಾರೆ ಅಂದರೆ ಏನರ್ಥ? ತಮಾಷೆಯೆಂದರೆ ರಾಹುಲ್‌ಗಾಂಧಿಗಿಂತ ನೂರು ಪಟ್ಟು ಬುದ್ಧಿವಂತರು, ಯೋಗ್ಯರು, ಅನುಭವಿಗಳು, ಹಿರಿಯರು ಪಕ್ಷದೊಳಗೆ ಇದ್ದರೂ ಈ ಮಹಾನುಭಾವನೇ ಪ್ರಧಾನಿಯಾಗಲಿ ಎಂಬ ಹೆತ್ತವರ ಮುದ್ದು ಇದೆಯಲ್ಲ ಅದಕ್ಕಿಂತ ಅನೈತಿಕತೆ, ಗುಲಾಮಗಿರಿ ಮನಸ್ಥಿತಿ ಬೇರೊಂದಿಲ್ಲ. ರಾಹುಲ್ ಅವರ ಮಾತಿನ ಎಡವಟ್ಟುಗಳನ್ನು, ಅಪ್ರಬುದ್ಧತೆಯನ್ನು  ರೋಗದಂತೆ ಸಹಿಸಿಕೊಳ್ಳುವ ದರ್ದು, ಅನಿವಾರ್ಯ ಆ ರಾಜಕೀಯ ಪಕ್ಷದ ಹಿರಿಯ ಮುತ್ಸದ್ದಿಗಳಿಗೆ, ಅವಕಾಶವಾದಿಗಳಿಗೆ, ಭಟ್ಟಂಗಿಗಳಿಗೆ ಗಂಜಿಗಿರಾಕಿಗಳಿಗೆ ಇರಬಹುದು. ಆದರೆ ಸುಶಿಕ್ಷಿತ ಪ್ರಜೆಗಳಿಗೆ, ಪ್ರಜ್ಞಾವಂತ ನಾಗರಿಕರಿಗಲ್ಲ.

Tags

Related Articles

Leave a Reply

Your email address will not be published. Required fields are marked *

Language
Close