ರಾಹುಲ್ ಹೇಳಿಕೆ ದೇಶಕ್ಕೇ ಅವಮಾನ : ಹಂಸರಾಜ್ ಗಂಗಾರಾಮ್ ಅಹಿರ್

Posted In : ದೇಶ

ದೆಹಲಿ: ಜನ ಸ್ವರಾಜ್ಯ ಸಮ್ಮೇಳನದಲ್ಲಿ ಭಾರತದ ರಾಜಕೀಯ ಬೆಳವಣಿಗೆಗಳ ಬಗ್ಗೆ ಕುಹಕವಾಡಿರುವ ರಾಹುಲ್, ಭಾರತದಲ್ಲಿಯೂ ಪಾಕಿಸ್ತಾನದಲ್ಲಿರುವಂತೆಯೇ ಸರ್ವಾಧಿಕಾರಿ ಧೋರಣೆಯ ಅಧಿಕಾರ ನಡೆಯುತ್ತಿದೆ ಎಂದು ಹೇಳಿದ್ದು, ಅವರ ಮಾತಿಂದ ದೇಶಕ್ಕೇ ಅವಮಾನವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ತಿಳಿಸಿದ್ದಾರೆ.

ರಾಹುಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅಹಿರ್, ರಾಹುಲ್ ಯಾವುದೇ ಪಕ್ಷದ ವಿರುದ್ಧ ಹೇಳಿಕೆ ನಿಡಿರುವುದಲ್ಲ. ಬದಲಾಗಿ ರಾಷ್ಟ್ರದ ಬಗ್ಗೆ ಅವಹೇಳನಕಾರಿಯಾಗಿ ಮತನಾಡಿದ್ದಾರೆ. ಈ ಹೇಳಿಕೆಗಳು ಸಹ್ಯವಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತಂತೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಭಾರತವನ್ನು ಕೀಳು ದೇಶ ಪಾಕ್‌ಗೆ ಹೋಲಿಸಿರುವುದು ಅವಮಾನಕಾರಿ ಎಂದಿದ್ದಾರೆ. ಕರ್ನಾಟಕ ವಿಚಾರದಲ್ಲಿ ರಾಹುಲ್‌ಗೆ ಭೀತಿ ಇದೆ. ಇದಕ್ಕೆ ರಾಹುಲ್ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಮೇಲೆ ಟೀಕೆ ನಡೆಸುವುದು ಸರಿ. ಆದರೆ ದೇಶದ ಬಗ್ಗೆ ಇಂತಹ ಹೇಳಿಕೆಗಳನ್ನು ನಿಡುವುದು ಅಕ್ಷಮ್ಯ ಎಂದು ನುಡಿದಿದ್ದಾರೆ. ದೇಶದ ಬಗ್ಗೆ ಈ ಹೇಳಿರುವ ರಾಹುಲ್ ಅಜ್ಞಾನಿಯೇ?, ಅವರು ಮೊದಲು ಮಾನಸಿಕ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

4 × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top