About Us Advertise with us Be a Reporter E-Paper

ಅಂಕಣಗಳು

ರಾಹುಲ್ ಮಾತಿನ ಉಪಟಳಕ್ಕೆ ಕೊನೆಯೇ ಇಲ್ಲ!

ವಿಮರ್ಶೆ: ಚಂದ್ರಶೇಖರ ಚೌಗಲಾ

ಏಳು ದಶಕಗಳ ಇತಿಹಾಸವುಳ್ಳ ರಾಷ್ಟ್ರೀಯ ಕಾಂಗ್ರೆಸ್‌ನ ಮಾನ, ಮರ್ಯಾದೆಯನ್ನು ಅಪ್ರಬುದ್ಧ ಹೇಳಿಕೆ, ವರ್ತನೆಗಳಿಂದಲೇ  ಹರಾಜು ಹಾಕುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಽ, ಇತ್ತೀಚೆಗೆ ಮತ್ತೊಂದು ಅಪ್ರಬುದ್ಧ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ಜರ್ಮನಿಯ ಹ್ಯಾಂಬ

ರ್ಗ್‌ನ ಬ್ಯುಸೆರಿಯಸ್ ಸಮ್ಮರ್ ಸ್ಕೂಲ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್, ‘ಮೋದಿ ಸರಕಾರ ನಿರುದ್ಯೋಗ ಸಮಸ್ಯೆ ನೀಗಿಸಲು ಸಂಪೂರ್ಣ ವಿ-ಲವಾಗಿದ್ದು, ಉದ್ಯೋಗಾವಕಾಶಗಳ ಕೊರತೆಯಿಂದ ದೇಶದಲ್ಲಿ ಸಾಮೂಹಿಕ ಹತ್ಯೆ, ಹಲ್ಲೆಗಳು ನಡೆಯುತ್ತಿವೆ. ಯುವಕರು ಇಸ್ಲಾಮಿಕ್ ಸ್ಟೇಟ್‌ನಂತಹ ಉಗ್ರಗಾಮಿ ಸಂಘಟನೆಗಳನ್ನು ಸೇರುತ್ತಿದ್ದಾರೆ’ ಎಂದು ಹೇಳುವ ಮೂಲಕ ಉಗ್ರಗಾಮಿ ಸಂಘಟನೆಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಕೇಂದ್ರ ಬಿಜೆಪಿ ಸರಕಾರವನ್ನು ಟೀಕಿಸುವ ಭರದಲ್ಲಿ ಕೇಂದ್ರ ಸರಕಾರವೇ ಉಗ್ರಗಾಮಿ ಸಂಘಟನೆಗಳನ್ನು ಹುಟ್ಟು ಹಾಕುತ್ತಿದೆ ಎಂಬ ಧಾಟಿಯಲ್ಲಿ ರಾಹುಲ್ ಗಾಂಽ ಮಾತನಾಡಿದ್ದಾರೆ. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇರುವುದು ನಿಜ. ಹಾಗೆಂದ ಮಾತ್ರಕ್ಕೆ ನಿರುದ್ಯೋಗಿಗಳೆಲ್ಲ ಉಗ್ರಗಾಮಿ ಸಂಘಟನೆಗಳನ್ನೇ ಸೇರುತ್ತಿದ್ದಾರೆ ಎಂಬ ರಾಹುಲ್ ಗಾಂಽ ಹೇಳಿಕೆ ಎಷ್ಟರ ಮಟ್ಟಿಗೆ ಪ್ರಬುದ್ಧ? ಉದ್ಯೋಗ ಅಲಭ್ಯವಾದರೆ ಭಾರತದಲ್ಲಿರುವ ಅಲ್ಪಸಂಖ್ಯಾತರು ಉಗ್ರ ಸಂಘಟನೆಗಳನ್ನು ಸೇರುತ್ತಾರೆ ಎಂದು ಹೇಳುವ ಮೂಲಕ ಇಲ್ಲಿನ ಅಲ್ಪಸಂಖ್ಯಾತರಿಗೂ ರಾಹುಲ್ ಗಾಂಽ ಅವಮಾನ ಮಾಡಿದ್ದಾರೆ. ಮತಬ್ಯಾಂಕ್ ಕಬಳಿಕೆಗಾಗಿ ಇಲ್ಲಿನ ದಲಿತರ, ಬುಡಕಟ್ಟು ಸಮುದಾಯದ, ಅಲ್ಪಸಂಖ್ಯಾತರ ಪರ ಮಾತನಾಡಲು ಹೋಗಿ ಉಗ್ರ ಸಂಘಟನೆಗಳನ್ನು ಸೇರುತ್ತಿರುವವರು ಇಂತಹ ಸಮುದಾಯದವರೇ ಎಂದು ರಾಹುಲ್ ಜಾಗತಿಕವಾಗಿ ಸಾರಿ ಬಂದಿದ್ದಾರೆ.

ಟೀಕೆ, ಟಿಪ್ಪಣಿಗಳಿಗೆ ಭಾರತದ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಹಾಗೆಂದ ಮಾತ್ರಕ್ಕೆ ವಿದೇಶಿ ನೆಲದಲ್ಲಿ ಕುಳಿತು ಪ್ರತಿಪಕ್ಷದ ನಾಯಕರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹರಿಯಬಿಡುತ್ತಾ ಭಾರತವನ್ನು ಕೀಳಾಗಿ ಚಿತ್ರಿಸುವುದು ಖೇದಕರ ಸಂಗತಿ. ಪರಸ್ಪರ ವೈ-ಲ್ಯಗಳನ್ನು ಗುರುತಿಸಿ ಟೀಕೆ ಮಾಡುವುದಕ್ಕಾಗಿ ನಮ್ಮ ಸಂವಿಧಾನದಲ್ಲಿ ಇರುವ ಪ್ರಬಲ ಅಸ ,ಪ್ರತಿಪಕ್ಷ. ಅಲ್ಲಿ ಕುಳಿತು ಆಡಳಿತ ಪಕ್ಷದ ವೈ-ಲ್ಯಗಳನ್ನು ಮುಖಕ್ಕೆ ರಾಚುವಂತೆ ಮಾತನಾಡಲು ಸಂವಿಧಾನದತ್ತವಾದ ಅವಕಾಶವಿದೆ. ಆದರೆ ಆ ಸಂವಿಧಾನ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಕಾಂಗ್ರೆಸ್ ಅಧ್ಯಕ್ಷರು ಸದನದಲ್ಲಿ ಕಣ್ಣು ಮಿಟುಕಿಸಿ ಕಾಂಗ್ರೆಸ್ ಕಾರ್ಯಕರ್ತರಿಗೇ ಮುಜುಗರ ತಂದಿಟ್ಟಿದ್ದರು. ಈಗ ಇಂತಹ ಬೇಜವಾಬ್ದಾರಿ ಹೇಳಿಕೆ.

ಕಾಂಗ್ರೆಸ್ ಮುಖಂಡರು ವಿದೇಶಿ ನೆಲಗಳಲ್ಲಿ ಭಾರತದ ಬಗ್ಗೆ ಇಂಥ  ಕೀಳು ಮಟ್ಟದ ಹೇಳಿಕೆಗಳನ್ನು ನೀಡಿದ್ದರಿಂದಲೇ ೨೦೧೮ರ ಜೂನ್‌ನಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ‘ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಾರತದ ಸುಪರ್ದಿಯಲ್ಲಿರುವ ಕಾಶ್ಮೀರದ ಸ್ಥಿತಿಗತಿ ಕುರಿತ ವರದಿ’ಯಲ್ಲಿ ಕಾಶ್ಮೀರ ಕಣಿವೆಯಲ್ಲಿರುವ ಉಗ್ರ ಸಂಘಟನೆಗಳನ್ನು ‘ಆರ್ಮ್ ಗ್ರೂಪ್ಸ್’ (ಸೇನಾ ಪಡೆ) ಎಂದೂ, ಉಗ್ರರನ್ನು ‘ಲೀಡರ್‍ಸ್’ (ಹೋರಾಟಗಾರರು) ಎಂದೂ ಬಣ್ಣಿಸಲಾಗಿದೆ!

ಒಬ್ಬ ರಾಜಕಾರಣಿಗೆ ತಾನು ಏನು ಮಾತನಾಡುತ್ತಿದ್ದೇನೆ, ಎಲ್ಲಿ ಮಾತನಾಡುತ್ತಿದ್ದೇನೆ ಎಂಬ ಅರಿವು ಬಹಳಷ್ಟಿರಬೇಕು. ಅದರಲ್ಲೂ ವಿದೇಶಿ ಕಾರ್ಯಕ್ರಮಗಳಲ್ಲಿ ತನ್ನ ತಾಯ್ನಾಡಿನ ಘನತೆಯನ್ನು ಕಾಪಾಡಿಕೊಂಡು ತನ್ನ ವಿಚಾರ ಮುಂದಿಡಬೇಕು ಎಂಬ ವಿವೇಚನೆ ಇರಬೇಕು. ಅಂಥದೊಂದು ಚಿಕ್ಕ ಪ್ರಜ್ಞೆಯೂ ರಾಹುಲ್ ಅವರಿಗೆ ಇಲ್ಲದಂತಾಗಿದೆಯಲ್ಲ? ಹುಟ್ಟಿನಿಂದಲೇ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಬಂದಿರುವ ರಾಹುಲ್ ಗಾಂಽಯಂತಹವರಿಗೆ ನಿರುದ್ಯೋಗ, ಬಡತನ, ಭಯೋತ್ಪಾದನೆಯಂತಹ ವಿಷಯಗಳು ವಿಚಾರ ಸಂಕಿರಣಗಳಲ್ಲಿ ವಿಚಾರ ಮಂಡನೆ ಮಾಡಲು ವಿಷಯವಾಗಿವೆಯೇ ಹೊರತು ವಸ್ತುಸ್ಥಿತಿಯ ಅರಿವಿಲ್ಲ. ಹಾಗಿದ್ದೂ  ಈ ವಿಷಯಗಳೇ ಚುನಾವಣೆಗೆ ಅವರ ಬಂಡವಾಳವಾಗಿದೆ ಎಂಬುದು ಇಂತಹ ಹೇಳಿಕೆಗಳಿಂದ ಸಾಬೀತಾಗುತ್ತದೆ. ಇದು ಶೋಚನೀಯ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಽಕಾರಕ್ಕೆ ಬಂದ ದಿನದಿಂದ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹೊಸ ತಂತ್ರಜ್ಞಾನದಿಂದ  ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಡಿಜಿಟಲ್ ಕೌಶಲದಿಂದ ಅಗಾಧ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ತಂತ್ರಜ್ಞಾನ ನವೋದ್ಯಮ, ಇ-ಕಾಮರ್ಸ್, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಪಾವತಿ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು ಇನ್ನೂ ಸೃಷ್ಟಿಯಾಗುತ್ತಲೇ ಇವೆ. ಇನ್ನೊಂದು ಅವಽಗೆ ನರೇಂದ್ರ ಮೋದಿ ಪ್ರಧಾನಿಯಾದರೆ ೨೦೨೫ರೊಳಗೆ ಕನಿಷ್ಠ ೩೦ ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು  ರಾಷ್ಟ್ರೀಯ ಸಾ-ವೇರ್ ಮತ್ತು ಸೇವಾ ಸಂಸ್ಥೆಗಳ ಒಕ್ಕೂಟ (ಘೆZಠಿಜಿಟ್ಞZ ಅooಟ್ಚಜಿZಠಿಜಿಟ್ಞ ಟ್ಛ ಖಟ್ಛಠಿಡಿZಛಿ Zb ಖಛ್ಟಿqಜ್ಚಿಛಿo ಇಟಞmZಜಿಛಿoಘೆಅಖಖಇuI) ಅಭಿಪ್ರಾಯಪಟ್ಟಿದೆ. ಇತ್ತೀಚೆಗೆ ತೆರಿಗೆ ಸಲಹಾ ಸಂಸ್ಥೆ ‘ಆರ್ನ್ಸ್ ಆಂಡ್ ಯಂಗ್’ ನಡೆಸಿದ ಸಮೀಕ್ಷೆಯ ಪ್ರಕಾರ, ಕೃತಕ ಬುದ್ಧಿಮತ್ತೆಯಿಂದ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. (ಆದರೆ ಆ ಹುದ್ದೆಗಳನ್ನು ನಿಭಾಯಿಸುವ ಕೌಶಲದ ಕೊರತೆ ಭಾರತೀಯರಲ್ಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.)

ಈ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರುವ ನೀತಿ ಆಯೋಗ, ಸುಧಾರಿತ ತಂತ್ರಜ್ಞಾನಗಳ ಬೆಳವಣಿಗೆ ಮತ್ತು ಅಳವಡಿಕೆ ಕುರಿತು ವಿವಿಧ ಇಲಾಖೆಗಳೊಂದಿಗೆ ಕೆಲಸ ಮಾಡುತ್ತಿದೆ. ಕೌಶಲ ಅಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ನಾಸ್ಕಾ ಜತೆ ನೀತಿ ಆಯೋಗ ನಿರಂತರವಾಗಿ ಸಂಪರ್ಕದಲ್ಲಿದೆ. ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ಕೌಶಲ ಜ್ಞಾನವುಳ್ಳ ಯುವಕರೊಬ್ಬರೂ ನಿರುದ್ಯೋಗಿಗಳಾಗಿ ಉಳಿಯುವುದಿಲ್ಲ ಎಂದು ನೀತಿ ಆಯೋಗ ವಿಶ್ವಾಸ ವ್ಯಕ್ತಪಡಿಸಿದೆ.

ಅಷ್ಟಕ್ಕೂ ಭಯೋತ್ಪಾದನೆ ಸಂಘಟನೆ ಸೇರುವವರು ಅನಕ್ಷರಸ್ಥರು, ತಂತ್ರಜ್ಞಾನ ಕೌಶಲ ಗೊತ್ತಿಲ್ಲದವರೇನಲ್ಲ. ಉಗ್ರಗಾಮಿ ಸಂಘಟನೆಗಳಲ್ಲಿ ಶೇ.೬೦ಕ್ಕೂ ಹೆಚ್ಚು ಬಿಇ, ಎಂಟೆಕ್‌ನಂತಹ ಉನ್ನತ ಪದವಿ ಪಡೆದವರೇ ಇದ್ದಾರೆ. ರಾಹುಲ್ ಹೇಳಿದಂತೆ ಉದ್ಯೋಗ ಕೊರತೆಯಿಂದ ಯುವಕರು ಭಯೋತ್ಪಾದನೆ ಸಂಘಟನೆಗಳನ್ನು ಸೇರುವುದಾದರೆ ದೇಶದ ಅರ್ಧದಷ್ಟು ಯುವಕರು ಭಯೋತ್ಪಾದನೆ ಸಂಘಟನೆಗಳಲ್ಲಿರಬೇಕಿತ್ತಲ್ಲವೇ?

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತ, ದೀನ-ದಲಿತರಿಗೆ ಕೊಟ್ಟ ಉಚಿತ ಯೋಜನೆಗಳಿಂದಲೇ ಅವರು ಇಂದು ಸೋಮಾರಿಗಳಾಗಿದ್ದಾರೆ. ದುಡಿಯದೇ ದುಡ್ಡು ಬರಬೇಕು, ಅಡುಗೆ ಮಾಡದೇ ಊಟ ಸಿಗಬೇಕು, ಸಾಮರ್ಥ್ಯ ಇಲ್ಲದಿದ್ದರೂ ನೌಕರಿ ಸಿಗಬೇಕು ಎಂಬ ಮನಸ್ಥಿತಿ ಸೃಷ್ಟಿಸಿಕೊಂಡಿದ್ದಾರೆ. ಪರಾವಲಂಬಿತನ ಅವರ ಮೂಲ ಗುಣವೇನಲ್ಲ. ಈ ಮನಸ್ಥಿತಿ ಅವರಲ್ಲಿ ಬೆಳೆಯಲು ಇಲ್ಲಿಯವರೆಗೂ ಆಡಳಿತ ನಡೆಸಿದ ಸರಕಾರಗಳು ಅನುಸರಿಸಿಕೊಂಡು ಬಂದಿರುವ ನೀತಿಗಳೇ ಪ್ರಮುಖ ಕಾರಣ. ತೆರಿಗೆಯಿಂದ ಬಂದ ಹಣವನ್ನು ಹೆಚ್ಚಾಗಿ ಶಿಕ್ಷಣ, ಆರೋಗ್ಯ, ರಸ್ತೆ, ವಿದ್ಯುತ್, ನೀರಾವರಿ, ಉದ್ಯೋಗ ಸೃಷ್ಟಿಗಳ ಮೇಲೆ ಖರ್ಚು ಮಾಡಿದ್ದರೆ ಭಾರತ ಈ ವೇಳೆಗಾಗಲೇ ಜಗತ್ತಿನ ಗ್ರೇಟ್ ಪವರ್ ಆಗಿರುತ್ತಿತ್ತು. ಈಗಲಾದರೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ.

ಅನೇಕ ಮಹನೀಯರ ಶ್ರಮದ -ಲವಾಗಿ ಸ್ಥಾಪನೆಗೊಂಡಿರುವ ರಾಷ್ಟ್ರೀಯ ಕಾಂಗ್ರೆಸ್‌ನಂತಹ ಪಕ್ಷದ ಬಹುದೊಡ್ಡ ಹುದ್ದೆ ಅಲಂಕರಿಸಿರುವ ರಾಹುಲ್ ಗಾಂಽ ಇಂತಹ ಅಪ್ರಬುದ್ಧ ಹೇಳಿಕೆಗಳನ್ನು ನಿಲ್ಲಿಸಿ ಆ ಪಕ್ಷದ ಘನತೆಯನ್ನು ಕಾಪಾಡಬೇಕು. ಸೋನಿಯಾ ಗಾಂಽಯವರು ೧೯ ವರ್ಷಗಳ ಕಾಲ ರಾಷ್ಟ್ರೀಯ ಕಾಂಗ್ರೆಸ್‌ನ ಸಾರಥ್ಯ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಎರಡು ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗಿ, ಆಡಳಿತ ನಡೆಸಿದೆ. ವಿದೇಶಿ ಮಹಿಳೆ ಎಂದು ದೇಶದಲ್ಲಿ ಎಷ್ಟೇ ಟೀಕೆಗೊಳಗಾದರೂ ಯಾವತ್ತೂ ಭಾರತದ ಬಗ್ಗೆ, ಇಲ್ಲಿನ ಸರಕಾರದ ಬಗ್ಗೆ ವಿದೇಶಿ ಕಾರ್ಯಕ್ರಮಗಳಲ್ಲಿ ಅವರು ಕೆಟ್ಟದಾಗಿ ಮಾತನಾಡಿದ ಉದಾಹರಣೆಗಳಿಲ್ಲ. ಇಂತಹ ಹಿನ್ನೆಲೆಯಿದ್ದೂ ಕಾಂಗ್ರೆಸ್‌ನ ಸಾರಥ್ಯ ಮಹಿಳೆಯರಿಗೆ ಎಷ್ಟು ಸೂಕ್ತವೋ ಅಷ್ಟು ಪುರುಷರಿಗಲ್ಲ ಎಂಬುದನ್ನು ರಾಹುಲ್ ಪದೆಪದೇ ಸಾಬೀತುಪಡಿಸುತ್ತಿದ್ದಾರೇಕೆ? ಅನೇಕ ಮಹನೀಯರ ಹೋರಾಟದ -ಲವಾಗಿ ಹುಟ್ಟಿಕೊಂಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಉಳಿಸಬೇಕಾದರೆ ರಾಹುಲ್ ಗಾಂಽ ಎಐಸಿಸಿ ಅಧ್ಯಕ್ಷಗಿರಿಯಿಂದ ಕೆಳಗಿಳಿದು ಪ್ರಿಯಾಂಕಾ ವಾದ್ರಾಗೆ ಜವಾಬ್ದಾರಿ ಕೊಡುವುದೇ ಸೂಕ್ತವೇನೋ?

Tags

Related Articles

Leave a Reply

Your email address will not be published. Required fields are marked *

Language
Close