About Us Advertise with us Be a Reporter E-Paper

ವಿ +

ಕಲಾಕೃತಿಯಾಗಿ ಹೊರಹೊಮ್ಮಿದ ರೈಲ್ವೇ ನಿಲ್ದಾಣ

- ವಿನಯಾದಿತ್ಯ

ಪ್ರಯಾಣವನ್ನು ರೈಲ್ವೇ ನಿಲ್ದಾಣದ ಸೌಂದರ್ಯಕ್ಕೆ ಚ್ಯುತಿ ತರುವವರು ಪ್ರಯಾಣಿಕರೇ. ತಿಂದು ಎಸೆದ ಪಾನ್, ಗುಟ್ಕಾ ಕವರ್‌ಗಳು, ಕರಿದ ತಿಂಡಿ ತಿನಿಸುಗಳ ಪೇಪರ್, ಚಾಕೋಲೆಟ್ , ಚೂಯಿಂಗ್‌ಗಮ್‌ನ ಪ್ಲಾಸ್ಟಿಕ್ ಕವರ್ ಇತ್ಯಾದಿ ಕಸಗಳಿಂದ ರೈಲ್ವೇ ನಿಲ್ದಾಣದಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾದ ವಾತಾವರಣವೇ ನಿರ್ಮಾಣಗೊಂಡಿರುತ್ತದೆ. ಇನ್ನು ಸಿಟಿ ರೈಲ್ವೇ ಸ್ಟೇಷನ್‌ಗಳಂತೂ ಊಹಿಸಲು ಸಾಧ್ಯವಿಲ್ಲ. ಅಷ್ಟೊಂದು ಕೊಳಕು ಅಲ್ಲಿ ತಾಂಡವವಾಡುತ್ತಿರುತ್ತದೆ. ಇದನ್ನು ಎಷ್ಟು ಬಾರಿ ನಿಯಂತ್ರಿಸಿದರೂ ಗಲೀಜು ಮತ್ತೆ ಮತ್ತೆ ಮರುಕಳಿಸುತ್ತಿರುತ್ತದೆ. ಹೀಗಿರುವಾಗ ಗಾಜಿಯಾಬಾದ್‌ನ ಸ್ವಚ್ಛತೆ ಹಾಗೂ ಸೌಂದರ್ಯದಿಂದ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸುತ್ತಿದೆ.

ಗಾಜಿಯಾಬಾದ್ ಪಟ್ಟಣದ ರೈಲ್ವೇ ಸ್ಟೇಷನ್ ಮುಖ್ಯವಾದ ಜಂಕ್ಷನ್ ಪಾಯಿಂಟ್ ಆಗಿದ್ದು, ರೈಲುಗಳು ದೆಹಲಿ, ಹರಿದ್ವಾರ, ಕಾನ್ಪುರ ಹಾಗೂ ಬರೆಲ್ಲಿ ರೂಟ್ ಮಾರ್ಗವಾಗಿ ಸಂಚಾರ ನಡೆಸುತ್ತವೆ. ಅಲ್ಲದೇ ಈ ಮಾರ್ಗದಲ್ಲಿ ಪ್ರತಿನಿತ್ಯ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಸದಾ ಕಾಲ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ಈ ರೈಲ್ವೇ ನಿಲ್ದಾಣ ತನ್ನ ಅಸ್ತವ್ಯಸ್ಥತೆಗೂ ಹೆಸರುವಾಸಿಯಾಗಿತ್ತು. ಈ ಸ್ಟೇಷನ್‌ನ ಹಳಿಗಳ ಮೇಲೆ ವೇಸ್‌ಟ್ ಪೇಪರ್ ಎಲ್ಲೆಂದರಲ್ಲಿ ತುಂಬಿ ತುಳುಕಾಡುತ್ತಿತ್ತು.

ಆದರೆ ಇಂದು ಆ ಸ್ಟೇಷನ್ನಿನ ನೋಟ ಪ್ರಶಂಸೆಗೆ ಕಾರಣವಾಗಿದೆ. ಈಗ ಆ ಸ್ಟೇಷನ್ನಿನ ಗೋಡೆಗಳು, ಕಮಾನುಗಳು, ಉದ್ದನೆಯ ಕಾರಿಡಾರ್, ಪಾದಚಾರಿ, ಬ್ರಿಡ್‌ಜ್ ಗಳ ಗಳ ಮೇಲೆ ಸುಂದರವಾದ ಚಿತ್ರಗಳು ಕಂಗೊಳಿಸುತ್ತಿದೆ. ಇಂತಹ ಮಹಾನ್ ಕಾರ್ಯದ ಹಿಂದಿರುವವರು ಸಿಎಸ್ ದಿಶಾ ಫೌಂಡೇಶನ್‌ನ ಅಧ್ಯಕ್ಷರಾದ ಉಡಿತ್ ತ್ಯಾಗಿ. ತಮ್ಮ ಮುಂದಾಳತ್ವದಲ್ಲಿ ರೈಲ್ವೇ ನಿಲ್ದಾಣವನ್ನು ಭಾಗಶಃ ಪುನರ್‌ನಿರ್ಮಾಣ ಮಾಡಿದ್ದಾರೆ. ಜತೆಗೆ ಬಳಕೆಗೂ ಯೋಗ್ಯವಲ್ಲದ ರೀತಿಯಲ್ಲಿದ್ದ ಬ್ರಿಡ್‌ಜ್ಗೆ ರೂಪವನ್ನೇ ನೀಡಲಾಗಿದೆ.

ಈ ಯೋಜನೆ ಕಾರ್ಯರೂಪಕ್ಕೆ ಬರಲು ಎರಡು ವರ್ಷಗಳನ್ನೇ ತೆಗೆದುಕೊಂಡಿದೆ. ಸ್ವಯಂ ಸೇವಕರು, ಪೆಯಿಂಟರ್‌ಗಳು, ಕಲಾವಿದರು ಪ್ರಕೃತಿ, ಖ್ಯಾತ ನೃತ್ಯಪ್ರಕಾರ, ಸ್ವಾತಂತ್ರ ಹೋರಾಟದ ಬಗೆಗಿನ ಚಿತ್ರಗಳನ್ನು ವಿಜಯ ನಗರದಿಂದ ನಗರಕ್ಕೆ ಸಂಪರ್ಕಿಸುವ ಪಾದಾಚಾರಿಗಳು ಸಾಗುವ ಸೇತುವೆಯ ಗೋಡೆಗಳ ಮೇಲೆ ಅದ್ಭುತವಾಗಿ ಚಿತ್ರಿಸಿದ್ದಾರೆ. ಸುಮಾರು ನೂರು ಎಕರೆಗಳವರೆಗೆ ಇರುವ ಕಟ್ಟಡಗಳು, ಫ್ಲಾಟ್‌ಪಾರ್ಮ್‌ಗಳನ್ನು ಈ ಕಲಾಕೃತಿಗಳು ಆಕ್ರಮಿಸಿಕೊಂಡಿವೆ. ಹದಿನೈದು ಅಡಿ ಎತ್ತರದ ನೂರು ಕಮಾನುಗಳಲ್ಲಿ ವಾಟರ್‌ಪ್ರೂಫ್ ಪೇಯಿಂಟಿಗ್ ಮಾಡಲಾಗಿದೆ. ಹತ್ತು ಇನ್ನೂ ಹೊಚ್ಚ ಹೊಸತಿನಂತೆ ಕಂಗೊಳಿಸಬಲ್ಲ ಉತ್ತಮ ಗುಣಮಟ್ಟದ ಬಣ್ಣಗಳನ್ನು ಆಯ್ದುಕೊಳ್ಳಲಾಗಿದೆ.

ಈ ಗೋಡೆಗಳಲ್ಲಿ ಮಹಾಸಮರದ ಪರಾಕ್ರಮಿಗಳಾದ ಬಹದ್ದೂರ ಶಾ ಜಫರ್, ಬೇಗಂ ಹಜರತ್ ಮಹಲ್ ಸೇರಿದಂತೆ ಇನ್ನೂ ಹಲವರ ಭಾವಚಿತ್ರಗಳನ್ನು ಸುಂದರವಾಗಿ ಚಿತ್ರಿಸಲಾಗಿರುವುದು ವಿಶೇಷತೆ ಆಗಿದೆ.
ಪ್ರಯಾಣಿಕರು ರೈಲುಗಳನ್ನು ಕಾಯುವ ವೇಳೆಯನ್ನು ವ್ಯರ್ಥಗೊಳಿಸದೆ ಇಲ್ಲಿನ ವರ್ಣರಂಜಿತ ಪೇಂಟಿಂಗ್‌ಸ್ ನೋಡುತ್ತ ಮೈಮರೆಯುತ್ತಿದ್ದಾರೆ. ಒತ್ತಡ ಮುಕ್ತ ಮಾತಾವರಣವನ್ನು ಕಲ್ಪಿಸುವುದರ ಜತೆಗೆ ನೂರಾರು ವರ್ಷಗಳಷ್ಟು ಹಳೆಯ ಗೋಡೆಗಳಿಗೆ ಹೊಸ ಚೇತನವನ್ನು ನೀಡಿದೆ. ಪ್ರಯಾಣಿಕರರಲ್ಲಿ ಉಲ್ಲಾಸವನ್ನು ಮೂಡಿಸುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close