About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಗಣನೀಯ ಇಳಿಕೆ ಕಂಡ ರೈಲ್ವೇ ಸಂಬಂಧಿತ ಅಫಘಾತಗಳು

ದೆಹಲಿ: ರೈಲ್ವೇ ಸುರಕ್ಷತೆ ಒತ್ತು ನೀಡುತ್ತಲೇ ಬಂದಿರುವ ಕೇಂದ್ರದ ಎನ್‌ಡಿಎ ಸರಕಾರದ ಕ್ರಮಗಳು ಫಲ ನೀಡಲು ಆರಂಭಿಸಿವೆ. ಪರಿಣಾಮ, ಕಳೆದ ಒಂದದು ವರ್ಷದ ಅವಧಿಯಲ್ಲಿ, ಐದು ವರ್ಷಗಳಲ್ಲೇ ಅತ್ಯಂತ ಕಡಿಮೆ ಅಫಘಾತಗಳು ದಾಖಲಾಗಿವೆ.

ಸೆಪ್ಟೆಂಬರ್‌ 2017 ಹಾಗು ಆಗಸ್ಟ್‌ 2018ರ ನಡುವೆ 75 ಅಫಘಾತಗಳು ಹಾಗು 40 ಸಾವುಗಳು ಸಂಭವಿಸಿದ್ದು, ಇದು ಕಳೆದ ಐದು ವರ್ಷಗಳಲ್ಲೇ ಅತ್ಯಂತ ಅಲ್ಪ ಪ್ರಮಾಣದ್ದಾಗಿದೆ ಎಂದು ರೈಲ್ವೇ ಇಲಾಖೆಯ ಅಧಿಕೃತ ಪಟ್ರಕಟಣೆ ತಿಳಿಸಿದೆ.

ಇದರ ಹಿಂದಿನ ವರ್ಷವಾದ ಸೆಪ್ಟೆಂಬರ್‌ 2016- ಆಗಸ್ಟ್‌ 2017ರ ನಡುವಿನ ಅವಧಿಯಲ್ಲಿ 249 ಸಾವುಗಳು ಸಂಭವಿಸಿವೆ. ನವೆಂಬರ್‌ 2016ರಲ್ಲಿ ಕಾನ್ಪುರದಲ್ಲಿ ಸಂಭವಿಸಿದ್ದ ಇಂದೋರ್‌-ಪಟನಾ ಎಕ್ಸ್‌ಪ್ರೆಸ್‌ ಹಳಿತಪ್ಪುವಿಕೆಯ ಒಂದೇ ಘಟನೆಯಲ್ಲಿ 150 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ಮುಂದಿನ ವರ್ಷದ ಇದೇ ಕಾಲಘಟ್ಟದಲ್ಲಿ ಸಾವುಗಳ ಸಂಖ್ಯೆಯಲ್ಲಿ ತಗ್ಗಿದ್ದು, 40ಕ್ಕೆ ಇಳಿದಿದೆ.

2013 ಸೆಪ್ಟೆಂಬರ್‌‌ ಹಾಗು 2014ರ ಆಗಸ್ಟ್‌ ನಡುವಿನ ಇದೇ ಅವಧಿಯಲ್ಲಿ 139 ಅಫಘಾತಗಳು ಸಂಭವಿಸಿ, 275 ಮಂದಿ ಅಸುನೀಗಿದ್ದರು. 2014-2015ರ ನಡುವಿನ ಇದೇ ಕಾಲಘಟ್ಟದಲ್ಲಿ 108 ಅಫಘಾತಗಳು ಸಂಭವಿಸಿ 196 ಮಂದಿ ಮೃತಪಟ್ಟಿದ್ದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ರೈಲ್ವೇ ಅಫಗಾತಗಳ ಸಂಬಂಧ ಸಾವುಗಳ ಸಂಖ್ಯೆಯಲ್ಲಿ 93%ನಷ್ಟು ತಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಗಾಯಾಳುಗಳ ಸಂಖ್ಯೆಯಲ್ಲೂ 272ರಿಂದ 12ಕ್ಕೆ ತಗ್ಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಮಾನವರಹಿತ ಲೆವೆಲ್‌ ಕ್ರಾಸಿಂಗ್‌ ಬಳಿ ಸಂಭವಿಸುತ್ತಿದ್ದ ಅಫಘಾತಗಳಲ್ಲೂ ಸಾಕಷ್ಟು ಇಳಿಕೆ ಕಂಡುಬಂದಿದೆ. 2013 ಸೆಪ್ಟೆಂಬರ್‌ ಆಗಸ್ಟ್‌ 2014ರಲ್ಲಿ 52 ಅಫಘಾತಗಳು ಸಂಭವಿಸಿದ್ದರೆ ನಂತರದ ವರ್ಷಗಳಲ್ಲಿ ಗಣನೀಯ ಇಳಿಕೆ ಕಾಣುತ್ತಲೇ ಬಂದ ಈ ಸಂಖ್ಯೆ, 2017 ಸೆಪ್ಟೆಂಬರ್‌ 2018ರ ಆಗಸ್ಟ್‌ ಅವಧಿಯಲ್ಲಿ ಕೇವಲ ಎಂಟಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close