About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ರಾಜಸ್ಥಾನ ಚುನಾವಣೆ: ಯಾದವ್‌ ಅಸಂಬಂದ್ಧ ಹೇಳಿಕೆಗೆ ವಸುಂಧರಾ ಗರಂ

ಜೈಪುರ: ತಮ್ಮ ವಿರುದ್ಧ ರಾಜಕೀಯವಾಗಿ ಹರಿಹಾಯುವ ಭರದಲ್ಲಿ ತೀರಾ ವೈಯಕ್ತಿಕ ಮಟ್ಟದಲ್ಲಿ ಅಸಂಬದ್ಧ ಹೇಳಿಕೆ ನೀಡಿದ ಜೆಡಿಯು ನಾಯಕ ಶರದ್‌ ಯಾದವ್‌ಗೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ತಿರುಗೇಟು ನೀಡಿದ್ದಾರೆ.

ಚುನಾವಣಾ ಪ್ರಚಾರದ ಭರದಲ್ಲಿ, “ವಸುಂಧರಾಗೆ ಆರಾಮ ನೀಡಿ. ಸಾಕಷ್ಟು ದಣಿದಿರುವ ಅವರು ಬಹಳ ದಪ್ಪಗಾಗಿದ್ದಾರೆ” ಎಂದು ಯಾದವ್ ಹೇಳಿದ್ದರು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಸಿಂಧಿಯಾ, “ಯಾದವ್‌ ಹೇಳಿಕೆ ಯಾವುದೇ ಮಹಿಳೆಗೂ ಅವಮಾನ ಮಾಡಿದಂತೆ. ಈ ರೀತಿ ನಡವಳಿಕೆ ಯುವಕರಿಗೆ ತಪ್ಪು ಸಂದೇಶ ರವಾನೆ ಮಾಡುತ್ತದೆ. ಕಾಂಗ್ರೆಸ್‌ ಹಾಗು ಅದರ ಮಿತ್ರ ಪಕ್ಷಗಳು ಇಂಥ ಸಂದೇಶ ರವಾನೆ ಮಾಡಲು ನೋಡುತ್ತಿವೆಯೇ? ಅವರ ಭಾಷೆಗಳ ಮೇಲೆ ಹಿಡಿತವಿರಲಿ” ಎಂದು ಹೇಳಿದ್ದಾರೆ.

ವಿಧಾನ ಸಭಾ ಚುನಾವಣೆಯ ಮತದಾನ ರಾಜ್ಯದಲ್ಲಿ ಆರಂಭವಾಗಿದ್ದು, 11 ಗಂಟೆಯ ವೇಳೆಗೆ 22% ನಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close