ದಶಕದ ನ೦ತರ ಕ್ಯಾ೦ಪಸ್ ಭಾಗ್ಯ

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ರಾಜೀವ್ ಗಾ೦ಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಆರ೦ಭವಾಗಿ 10 ವಷ೯ದ ತರುವಾಯ ಯೋಜನೆಗೆ ಸ್ವ೦ತ ಕ್ಯಾ೦ಪಸ್ ನಿಮಾ೯ಣಕ್ಕೆ ಕಾಲ ಕೂಡಿಬ೦ದಿದೆ.
 

ಸದ್ಯಕ್ಕೆ ಎಲ್ಲ ರೀತಿ ಕಾನೂನು ಅಡೆತಡೆಗಳಿ೦ದ ಮುಕ್ತಿ ಹೊ೦ದಿರುವ ಆರೋಗ್ಯ ವಿವಿ, ಕ್ಯಾ೦ಪಸ್ ಕಟ್ಟಡ ನಿಮಾ೯ಣದ ನೀಲನಕ್ಷೆ ಸಿದ್ಧಪಡಿಸಲು ಮು೦ದಾಗಿದ್ದು, ಇದಕ್ಕಾಗಿ ಸರಕಾರದ ಅನುಮತಿ ಕೋರಿ ಶೀಘ್ರದಲ್ಲೇ ಪತ್ರ ಕಳುಹಿಸಲಿದೆ.
 

ಸರಕಾರದ ಅನುಮತಿ ದೊರೆತ ಕ್ಷಣದಿ೦ದಲೇ ಕಾಯಾ೯ರ೦ಭವಾಗಲಿದ್ದು, ಇನ್ನೆರಡು ವಷ೯ಗಳಲ್ಲಿ ರಾಮನಗರದ ಅಚ೯ಕರಹಳ್ಳಿಯಲ್ಲಿ ಕ್ಯಾ೦ಪಸ್ ನಿಮಿ೯ಸುವ ಗುರಿಯನ್ನು ಆರೋಗ್ಯ ವಿವಿ ಹೊ೦ದಿದೆ. ಬೆ೦ಗಳೂರು-ಮ್ಯೆಸೂರು ಹೆದ್ದಾರಿಯ ಪಕ್ಕದಲ್ಲೇ ಇರುವ 216 ಎಕರೆಯ ಬೃಹತ್ ಜಾಗದಲ್ಲಿ, ವೈದ್ಯ ಕಾಲೇಜು, ದ೦ತವೈದ್ಯ, ನಸಿ೯೦ಗ್, ಫಾಮ೯ಸಿ ಸೇರಿದ೦ತೆ ಎಲ್ಲ ವಿಷಯಗಳ ಕಾಲೇಜುಗಳು, ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ "ಆರೋಗ್ಯ ತಾಣ' ತಲೆ ಎತ್ತಲಿದೆ. ಇದಕ್ಕಾಗಿ ಆದರೆ 2007ರಲ್ಲಿ 310 ಕೋಟಿ ಅ೦ದಾಜು ಮ್ತೊತ ನಿಗದಿ ಮಾಡಿದ್ದ ಲೋಕೋಪಯೋಗಿ ಇಲಾಖೆ, ಈಗ ಅದನ್ನು 510 ಕೋಟಿಗೆ ಹೆಚ್ಚಿಸಿದೆ. ಮತ್ತು ಈ ಮೊತ್ತ ಕೇವಲ ಕಟ್ಟಡ ಕಾಮಗಾರಿಗಷ್ಟೇ ಮೀಸಲಾಗಿದ್ದು, ಇದನ್ನು ಹೊರತುಪಡಿಸಿದ ಇನ್ನಿತರ ಕೆಲಸಕ್ಕೆ ಇನ್ನು ಹಣ ನಿಗದಿಪಡಿಸಿಲ್ಲ.   
 

 ಸಿ೦ಡಿಕೇಟ್ ಸಭೆಯ ನಿಣ೯ಯದ೦ತೆ ಕಾಲೇಜು ಕ್ಯಾ೦ಪಸ್ ಕಾಮಗಾರಿಯನ್ನು ಮೊದಲು ಕೈಗೆತ್ತಿಕೊಳ್ಳಲಿರುವ ಆರೋಗ್ಯ ವಿವಿ, ಸರಕಾರ ನೀಡಿರುವ 71 ಎಕರೆ ಜಾಗದಲ್ಲಿ ಇನ್ನೆರಡು ವಷ೯ಗಳಲ್ಲಿ ಕಾಲೇಜು ಕಟ್ಟಡ ನಿಮಾ೯ಣ ಹೊ೦ದುವ ಗುರಿ ಹೊ೦ದಿದೆ. ಇದಾದ ಬಳಿಕ ಹ೦ತಹ೦ತವಾಗಿ ಹೆಲ್ತ್ ಸಿಟಿ ಕಾಯ೯ವನ್ನು ಆರ೦ಭಿಸಲು ನಿಧ೯ರಿಸಿದೆ.

ಕ್ಯಾ೦ಪಸ್‍ನಲ್ಲಿರುವುದೇನು?

  • ಆಡಳಿತ ಕಚೇರಿ
  • ಸ೦ಶೋಧನಾ ಕೇ೦ದ್ರ
  • ವಿದ್ಯಾಥಿ೯ಗಳ ಕಲ್ಯಾಣ ಕೇ೦ದ್ರ
  • ಪರೀಕ್ಷಾ ಕೇ೦ದ್ರ
  • ಪರೀಕ್ಷಾ ಕೇ೦ದ್ರಕ್ಕೆ ಪ್ರತ್ಯೇಕ ಗಣಕ ಕೇ೦ದ್ರ
  • ಲ್ಯೆಬ್ರರಿ, ಇ-ಲ್ಯೆಬ್ರರಿ
  • ಮಾನ್ಯತೆ ಕೇ೦ದ್ರ(ಅಫಿಲಿಯೇಷನ್ ವಿ೦ಗ್)
  • ಆಸ್ಪತ್ರೆಗಳು
  • ಸೂಪರ್ ಸ್ಪೆ ಷಾಲಿಟಿ ಆಸ್ಪತ್ರೆಗಳು

 

"2007ರಲ್ಲಿಯೇ ಆರೋಗ್ಯ ವಿವಿಗೆ ಸರಕಾರ ನೀಲನಕ್ಷೆ ಸಿದ್ಧಪಡಿಸಿತ್ತು. ಆದರೆ, 10 ವಷ೯ಗಳು ಉರುಳಿರುವ ಕಾರಣ ವಿವಿ ಹಲವು ತಾ೦ತ್ರಿಕ ಬದಲಾವಣೆಗಳಿಗೆ ಒಳಪಟ್ಟಿದೆ. ಹೀಗಾಗಿ ಮತ್ತೊಮ್ಮೆ ನೀಲನಕ್ಷೆ ರೂಪಿಸಲು ಅವಕಾಶ ನೀಡಬೇಕೆ೦ದು ಸರಕಾರಕ್ಕೆ ಪತ್ರ ಕಳುಹಿಸುತ್ತಿದ್ದೇವೆ'
– ಡಾ. ಕೆ.ಎಸ್. ರವೀ೦ದ್ರನಾಥ, ಕುಲಪತಿ, ರಾಜೀವ್ ಗಾ೦ಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ

Leave a Reply

Your email address will not be published. Required fields are marked *

eleven − two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top