About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮೋದಿಯಂಥ ನಾಯಕರಿಲ್ಲದ ವಿಪಕ್ಷಗಳು ಏಕೈಕ ಉದ್ದೇಶವೆಂದರೆ ಬಿಜೆಪಿಗೆ ಅಡ್ಡಗಾಲು ಹಾಕುವುದು: ರಾಜನಾಥ್‌ ಸಿಂಗ್‌

ದೆಹಲಿ: ದೇಶ ಮುನ್ನಡೆಸಲು ಸೂಕ್ತ ಯೋಜನೆಯನ್ನಾಗಲೀ ನಾಯಕತ್ವವನ್ನಾಗಲೀ ಇಲ್ಲದ ವಿಪಕ್ಷಗಳ ಏಕೈಕ ಅಜೆಂಡಾ ಬಿಜೆಪಿ ಹಾಗು ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ವಿರೋಧಿಸುವುದೇ ಆಗಿದೆ ಎಂದು ಬಿಜಿಪಿ ನಾಯಕ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಮಹಾಘಟಬಂಧನ ಸೃಷ್ಟಿಸಲು ಹಾತೊರೆಯುತ್ತಿರುವ ವಿಪಕ್ಷಗಳು ದೇಶವನ್ನು ಮುನ್ನಡೆಸಲು ಯಾವುದೇ ಸೂಕ್ತ ಯೋಜನೆಗಳಿಲ್ಲ ಎಂದ ರಾಜನಾಥ್‌, “ನರೇಂದ್ರ ಮೋದಿಯಂತ ನಾಯಕರ ಕೊರತೆ ಎದುರಿಸುತ್ತಿರುವ ವಿಪಕ್ಷಗಳ ಇಂದಿನ ಸ್ಥಿತಿಗತಿಗಳ ಕುರಿತು ಯಾವುದೇ ಅಚ್ಚರಿಯಿಲ್ಲ” ಎಂದು ಹೇಳಿದ್ದಾರೆ.

“ಕಾಂಗ್ರೆಸ್‌ನಂಥ ಪಕ್ಷಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರ ಮಾಡುತ್ತಿರುವ ಉತ್ತಮ ಕೆಲಸಗಳಿಗೆ ಅಡ್ಡಗಾಲು ಹಾಕುವುದೇ ಪ್ರಮುಖ ಕೆಲಸವಾಗಿದೆ” ಎಂದು ಸಿಂಗ್‌ ಇದೇ ಸಂದರ್ಭ ತಿಳಿಸಿದ್ದಾರೆ.

“2014ರಿಂದ 15 ರಾಜ್ಯಗಳಲ್ಲಿ ಚುನಾವಣೆ ಜಯಿಸಿದ ಬಿಜೆಪಿ ಅದಾಗಲೆ 20 ರಾಜ್ಯಗಳಲ್ಲಿ ಸರಕಾರ ರಚನೆ ಮಾಡಿದೆ. ವಿಪಕ್ಷಗಳು ಹತ್ತು ರಾಜ್ಯಗಳನ್ನು ಕಳೆದುಕೊಂಡಿದ್ದು, ಕಾಂಗ್ರೆಸ್‌ ಮೂರು ರಾಜ್ಯಗಳಿಗೆ ಸೀಮಿತವಾಗಿದೆ” ಎಂದ ಸಿಂಗ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿರ ವಿಷನ್‌ 2022 ಧ್ಯೇಯೋದ್ದೇಶವನ್ನು ಕೊಂಡಾಡಿದ್ದಾರೆ.

ಭಯೋತ್ಪಾದನೆಗೆ ಅಂತ್ಯ ಹಾಡಿ, ದೇಶದ ಪ್ರತಿಯೊಬ್ಬ ಪ್ರಜೆಯ ತಲೆ ಮೇಲೂ ಸೂರಿರುವಂತೆ ಮಾಡಿ ಕೋಮು ಸಾಮರಸ್ಯಕ್ಕೆ ನಾಂದಿ ಹಾಡುವುದೇ ಕೇಂದ್ರ ಸರಕಾರದ ಧ್ಯೇಯವಾಗಿದೆ ಎಂದು ಸಿಂಗ್‌ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close