About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಾಜ್ಯಸಭಾ ಉಪಚೇರ್ಮನ್‌ ಕದನದಲ್ಲೂ ಎನ್‌ಡಿಎ ಗೆಲುವು

ರಾಜ್ಯಸಭಾ ಉಪಚೇರ್ಮನ್‌ ಹುದ್ದೆಗೆ ನಡೆದ ಮತದಾನದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್‌ ನಾರಾಯಣ್‌ ಸಿಂಗ್‌ ವಿಜಯಿಯಾಗಿದ್ದಾರೆ.

244 ಸದಸ್ಯಬಲದ ರಾಜ್ಯಸಭೆಯಲ್ಲಿ 125 ಮತಗಳನ್ನು ಗಳಿಸಿದ ಎನ್‌ಡಿಎನ ಹರಿವಂಶ್‌ ನಾರಾಯಣ್‌ ಗೆಲುವಿನ ನಗೆ ಬೀ ರಿದ್ದಾರೆ. ವಿಪಕ್ಷಗಳ ಅರ್ಭ್ಯರ್ಥಿ ಬಿ ಕೆ ಕರಿಪ್ರಸಾದ್‌ 105 ಸದಸ್ಯರ ಬೆಂಬಲವನ್ನು ಪಡೆಯಲು ಮಾತ್ರವೇ ಸಫಲರಾಗಿದ್ದಾರೆ

ರಾಜ್ಯಸಭೆಯಲ್ಲಿ ಬಹುಮತವಿಲ್ಲದ ನಡುವೆಯೂ, ತಟಸ್ಥ ನಿಲುವು ತಲೆದಿದ್ದ ಪಕ್ಷಗಳ ಮನವೊಲಿಸುವಲ್ಲಿ ಸಫಲವಾಗಿರುವ ಕೇಂದ್ರದ ಆಡಲಿತಾರೂಢ ಬಣವು, ನಿರೀಕ್ಷೆಗಿಂತಲೂ ಹೆಚ್ಚಿನ ಮತಗಳನ್ನು ಬಾಚಿಕೊಂಡಿದೆ.

ಹರಿವಂಶ್ ನಾರಾಯಣ್‌ರನ್ನು ಅಭಿನಂದಿಸಿದ ವಿಪಕ್ಷಗಳ ನಾಯಕ ಗುಲಾಂ ನಬಿ ಆಝಾದ್‌, “ನೂತನ ಉಪಚೇರ್ಮನ್‌ ಯಾವುದೇ ಪಕ್ಷಪಾತವಿಲ್ಲದೇ ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಾರೆ ಎನ್ನುವ ಭರವಸೆ ಇದೆ” ಎಂದು ಹೇಳಿದ್ದಾರೆ.

ಕಳೆದ ತಿಂಗಳು ಕೇಂದ್ರ ಸರಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ಮತಯಾಚನೆ ಮಾಡಿದ್ದ ವಿಪಕ್ಷಗಳು ಕೈಸುಟ್ಟುಕೊಂಡಿದ್ದವು. ಇದೀಗ ರಾಜ್ಯಸಭೆಯಲ್ಲೂ ಹಿನ್ನಡೆ ಕಂಡಿರುವ ವಿಪಕ್ಷಗಳು, 2019ರಲ್ಲಿ ಬಿಜೆಪಿಯನ್ನು ಎದುರಿಸಲು ಒಟ್ಟಾಗುವ ತಮ್ಮ ಯೋಜನೆ ಕುರಿತು ಇನ್ನೊಮ್ಮೆ ಚಿಂತನೆ ನಡೆಸಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close